Fake News - Kannada
 

ಗಾಜಿಯಾಬಾದ್‌ನಲ್ಲಿ ನಿರಾಶ್ರಿತರ ಡೇರೆಗಳನ್ನು ಧ್ವಂಸಗೊಳಿಸಿದ ಈ ಘಟನೆಯಲ್ಲಿ ಬಲಿಯಾದವರು ಬಾಂಗ್ಲಾದೇಶಿಗಳಲ್ಲ

0

ಗಾಜಿಯಾಬಾದ್‌ನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರ ಮನೆಗಳನ್ನು ನೆಲಸಮ ಮಾಡಲಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಕೆಲವರು ಟೆಂಟ್‌ಗಳನ್ನು ಕೆಡವುತ್ತಿರುವುದನ್ನು ಕಾಣಬಹುದು. ಇದೇ ವೀಡಿಯೊಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ಕೋರಿ ಅನೇಕ ಜನರು ಈ ವೀಡಿಯೊವನ್ನು ನಮ್ಮ ವಾಟ್ಸಾಪ್ ಟಿಪ್‌ಲೈನ್‌ಗೆ ಕಳುಹಿಸಿದ್ದಾರೆ. ಹಾಗಾದರೆ ಈ ಲೇಖನದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಗಾಜಿಯಾಬಾದ್‌ನಲ್ಲಿ ಅಕ್ರಮವಾಗಿರುವ ನಿವಾಸಗಳನ್ನು ಬಾಂಗ್ಲಾದೇಶಿಗರು ಕೆಡವುತ್ತಿರುವ ವೀಡಿಯೊ. 

ಫ್ಯಾಕ್ಟ್: ವಿಡಿಯೋದಲ್ಲಿರುವ ಈ ನಿರಾಶ್ರಿತರು ಉತ್ತರ ಪ್ರದೇಶದವರು, ಬಾಂಗ್ಲಾದೇಶಿಯರಲ್ಲ ಎಂದು ಗಾಜಿಯಾಬಾದ್ ಪೊಲೀಸರು ತನಿಖೆಯ ನಂತರ ಸ್ಪಷ್ಟಪಡಿಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮವನ್ನು ದಾಖಲಿಸಿ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಪೋಸ್ಟ್‌ನಲ್ಲಿ ಮಾಡಿರುವ ಕ್ಲೇಮ್ ತಪ್ಪಾಗಿದೆ.

ಈ ವೀಡಿಯೊದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿದಾಗ, ಇಂಟರ್ನೆಟ್ ನಲ್ಲಿ ಈ  ದೃಶ್ಯಗಳ ಕುರಿತು ವರದಿ ಮಾಡಿರುವ ಹಲವಾರು ಸುದ್ದಿಗಳು ನಮಗೆ ಕಂಡುಬಂದವು.  ಈ ವರದಿಗಳ ಪ್ರಕಾರ, ‘ಹಿಂದೂ ರಕ್ಷಣಾ ದಳ’ ಮುಖ್ಯಸ್ಥ ಪಿಂಕಿ ಚೌಧರಿ ಮತ್ತು ಅವರ ಅನುಯಾಯಿಗಳು ಗಾಜಿಯಾಬಾದ್‌ನ ಮಧುಬನ್ ಬಾಪುಧಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಟೆಂಟ್‌ಗಳಲ್ಲಿ ವಾಸಿಸುತ್ತಿದ್ದ ಕೆಲವು ನಿರಾಶ್ರಿತರ ಮೇಲೆ ದಾಳಿ ಮಾಡಿದ್ದಾರೆ. ನಿರಾಶ್ರಿತರು ಬಾಂಗ್ಲಾದೇಶಿ ರೋಹಿಂಗ್ಯಾ ಪಂಗಡಕ್ಕೆ ಸೇರಿದವರು ಎಂದು ಆರೋಪಿಸಿ ಅವರ ಮೇಲೆ ದಾಳಿ ಮಾಡಿ ಅವರ ಡೇರೆಗಳನ್ನು ನಾಶಪಡಿಸಲಾಗಿದೆ ಎಂದು ರಿಪೋರ್ಟ್ ನಲ್ಲಿ ಹೇಳಲಾಗಿದೆ. 

ಈ ಘಟನೆ ಕುರಿತು ಪೊಲೀಸರು ಸಹ ವಿವರಣೆ ನೀಡಿದ್ದು, ಪೊಲೀಸರು ತನಿಖೆ ನಡೆಸಿದಾಗ ವಲಸಿಗರು ಬಾಂಗ್ಲಾದೇಶದವರಲ್ಲ,ಬದಲಾಗಿ ಉತ್ತರ ಪ್ರದೇಶದಿಂದ ಬಂದು ಇಲ್ಲಿಯೇ ನೆಲೆಸಿರುವವರು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ ಪಿಂಕಿ ಚೌಧರಿ ಹಾಗೂ ಆತನ ಹಿಂಬಾಲಕರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’, ‘ಸಾರ್ವಜನಿಕ ಆಸ್ತಿಗೆ ಹಾನಿ’ ಇತ್ಯಾದಿ ಅಪರಾಧಗಳಿಗಾಗಿ ಸೆಕ್ಷನ್ 191(2), 354, 115(2), 117(4), 299 ಮತ್ತು 324(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಮೂಲಕ ಬಾಂಗ್ಲಾದೇಶದಲ್ಲಿರುವ ರೋಹಿಂಗ್ಯಾ  ಸಮೂದಾಯದವರನ್ನು ಹೊರಹಾಕಲಾಗಿದೆ ಎಂದು ಕ್ಲೇಮ್ ನಲ್ಲಿ ಹೇಳಿರುವುದರಲ್ಲಿ ಯಾವುದೇ ನಿಜವಿಲ್ಲ.  

ಅಂತಿಮವಾಗಿ ಹೇಳುವುದಾದರೆ, ಗಾಜಿಯಾಬಾದ್‌ನಲ್ಲಿ ಐಡಿಪಿ ಟೆಂಟ್‌ಗಳ ಧ್ವಂಸಕ್ಕೆ ಬಲಿಯಾದವರು ಬಾಂಗ್ಲಾದೇಶೀಯರಲ್ಲ ಎಂಬುದು ಸ್ಪಷ್ಟವಾಗಿದೆ.

Share.

Comments are closed.

scroll