ಈ ಫೋಟೋದಲ್ಲಿರುವ ವೆಂಟಿಲೇಟರ್ ಅನ್ನು ‘PM CARES’ ನಿಧಿಯಿಂದ ಖರೀದಿಸಲಾಗಿದೆ

ಪಿಎಂಕೇರ್ಸ್‌ ಎಂದು ಮೇಲೆ ಬರೆಯಲಾಗಿರುವ ವೆಂಟಿಲೇಟರ್‌ನ ಫೋಟೋ ಒಂದು ಫೋಟೋಶಾಪ್ ಮಾಡಲಾಗಿದೆ ಎಂಬ ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೆಂಟಿಲೇಟರ್‌ನ ಮೂಲ ಫೋಟೋದಲ್ಲಿ, ‘ಪಿಎಂ ಕೇರ್ಸ್’ ಎಂದು ಬರೆಯಲಾಗಿಲ್ಲ. ಫೋಟೋ ತೆಗೆದ ನಂತರ ಫೋಟೋ ಎಡಿಟ್ ಮಾಡುವ ಟೂಲ್ – ‘ಫೋಟೋಶಾಪ್’ ಬಳಸಿ ಅದನ್ನು ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪೋಸ್ಟ್‌ನಲ್ಲಿನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಈ ವೆಂಟಿಲೇಟರ್‌ನ ಮೇಲಿರುವ ‘PM CARES’ ಸ್ಟಿಕ್ಕರ್ ಅನ್ನು ಫೋಟೋಶಾಪ್ ಮಾಡಲಾಗಿದೆ.

ನಿಜಾಂಶ: ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ ಮತ್ತು ‘ಸ್ಕ್ಯಾನ್‌ರೇ’ ಕಂಪನಿಗಳ ಲೋಗೊಗಳಿರುವ ವೆಂಟಿಲೇಟರ್‌ಗಳ ಫೋಟೋಗಳು ಮತ್ತು ವಿಡಿಯೊಗಳನ್ನು ಗಮನಿಸಿದಾಗ, ವೆಂಟಿಲೇಟರ್‌ಗಳ ಮೇಲೆ ‘ಪಿಎಂ ಕೇರ್ಸ್’ ಬರೆಯಲಾಗಿರುವುದನ್ನು ನಾವು ನೋಡಬಹುದು. ಆದ್ದರಿಂದ, ವೆಂಟಿಲೇಟರ್‌ಗಳನ್ನು ‘ಪಿಎಂ ಕೇರ್ಸ್’ ನಿಧಿಯನ್ನು ಬಳಸಿ ಖರೀದಿಸಲಾಗಿದೆ. ಆದ್ದರಿಂದ ಪೋಸ್ಟ್ ನಲ್ಲಿ ಪ್ರತಿಪಾದಿಸಿರುವುದು ತಪ್ಪು.

ಪೋಸ್ಟ್ ನಲ್ಲಿ ಇರುವ ಚಿತ್ರಗಳ ಸಮೂಹದಲ್ಲಿ, ‘ಪಿಎಂ ಕೇರ್ಸ್’ ಎಂದು ಸ್ಟಿಕ್ಕರ್‌ ಅಂಟಿಸಲಾಗಿರುವ ವೆಂಟಿಲೇಟರ್ ಫೋಟೋ ಎಡಿಟ್‌ ಮಾಡಲಾಗಿರುವುದು ಎಂದು ಹೇಳಲಾಗುತ್ತಿದೆ. ಫೋಟೋಶಾಪ್ ಸಾಫ್ಟ್‌ವೇರ್ ಬಳಸಿ ‘ಪಿಎಂ ಕೇರ್ಸ್’ ಎಂಬ ಪಠ್ಯವನ್ನು ವೆಂಟಿಲೇಟರ್ ಫೋಟೋಗೆ ಸೇರಿಸಬಹುದು ಎಂಬುದು ನಿಜವಾದರೂ, ಆದರೆ ಅದೇ ತಂತ್ರಾಂಶವನ್ನು ಬಳಸಿಕೊಂಡು ವೆಂಟಿಲೇಟರ್ ಫೋಟೋದಿಂದ ‘ಪಿಎಂ ಕೇರ್ಸ್’ ಅನ್ನು ತೆಗೆದುಹಾಕಬಹುದು ಎಂಬುದು ಅಷ್ಟೇ ಸತ್ಯ (ಹೆಸರನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಕೆಳಗಿನ gif ನಲ್ಲಿ ವೀಕ್ಷಿಸಬಹುದು). ಆದ್ದರಿಂದ, ಚಿತ್ರ ಸಮೂಹದಲ್ಲಿ ಇರುವ ಎರಡು ಫೋಟೋಗಳನ್ನು ನೋಡುವ ಮೂಲಕ, ಯಾವುದು ನೈಜವಾದುದು ಎಂದು ತೀರ್ಮಾನಿಸುವುದು ಕಷ್ಟ.

ಆದರೆ, ವೆಂಟಿಲೇಟರ್‌ ಮೇಲೆ ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ ಮತ್ತು ‘ಸ್ಕ್ಯಾನ್‌ರೇ’ ಕಂಪನಿಗಳ ಲೋಗೊಗಳನ್ನು ಕಾಣಬಹುದು. ಅದೇ ಕಂಪನಿಯ ಲೋಗೊಗಳನ್ನು ಹೊಂದಿರುವ ಮತ್ತು ‘PM CARES’ ಎಂದು ಕೂಡ ನಮೂದಿಸಿರುವ ಅನೇಕ ಇತರ ವೆಂಟಿಲೇಟರ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಆ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅಲ್ಲದೆ, ಬಿಜೆಪಿ ಸದಸ್ಯ ಮತ್ತು ಸೂರತ್ ಶಾಸಕ ಹರ್ಷ್ ಸಂಘವಿ ಅವರು ‘ಪಿಎಂ ಕೇರ್ಸ್’ ನಿಧಿಯಿಂದ ಸೂರತ್ ನಗರ 25 ವೆಂಟಿಲೇಟರ್‌ಗಳನ್ನು ಪಡೆದಿದೆ ಎಂಬ ವಿವರಣೆಯೊಂದಿಗೆ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ವಿಡಿಯೋ ದಲ್ಲಿರುವ ವೆಂಟಿಲೇಟರ್‌ಗಳ ಮೇಲೆ ‘ಪಿಎಂ ಕೇರ್ಸ್’ ಎಂದು ಬರೆದಿರುವುದನ್ನು ಕಾಣಬಹುದು. ಸರ್ಕಾರದ ಆದೇಶಕ್ಕೆ ಅನುಸಾರವಾಗಿ ಪ್ರಸ್ತುತ ವೆಂಟಿಲೇಟರ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ವೈದ್ಯರೊಬ್ಬರು ಟ್ವೀಟ್ ಮಾಡಿದ್ದಾರೆ.

‘ಮೇಕ್ ಇನ್ ಇಂಡಿಯಾ’ ಅಭಿಯಾನದ ಅಡಿಯಲ್ಲಿ ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ ಸಂಸ್ಥೆ ‘ಸ್ಕ್ಯಾನ್‌ರೇ’ ಸಹಯೋಗದೊಂದಿಗೆ 30,000 ವೆಂಟಿಲೇಟರ್‌ಗಳನ್ನು ಅಭಿವೃದ್ಧಿ ಪಡಿಸಲು ಕಾರ್ಯಾದೇಶ ನೀಡಲಾಗಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ. ಅಲ್ಲದೆ, ‘ಮೊದಲ ಕಂತಿನಲ್ಲಿ ಸುಮಾರು 3000 ವೆಂಟಿಲೇಟರ್‌ಗಳನ್ನು ರಾಜ್ಯಗಳಿಗೆ ವಿತರಿಸಲಾಗಿದೆ’ ಎಂದು ವರದಿ ಮಾಡಿದೆ. ಆದ್ದರಿಂದ, ವೆಂಟಿಲೇಟರ್ ಅನ್ನು ‘ಪಿಎಂ ಕೇರ್ಸ್’ ಹಣವನ್ನು ಬಳಸಿ ಖರೀದಿಸಲಾಗಿದೆ ಎಂಬುದು ನಿಜ.

ಒಟ್ಟಾರೆಯಾಗಿ ಹೇಳುವುದಾದರೆ, ವೆಂಟಿಲೇಟರ್ ಫೋಟೋ ಮೇಲೆ ‘PM CARES’ ಎಂದು ನಮೂದಿಸಿರುವುದು ನಿಜವಾದದ್ದು, ಅದನ್ನು ಫೋಟೋಶಾಪ್ ಮಾಡಲಾಗಿಲ್ಲ.