ಸ್ವಾಮಿ ವಿವೇಕಾನಂದರ ಅಪರೂಪದ ವಿಡಿಯೋ ಎಂದು ಹೇಳಿಕೊಳ್ಳಲಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾದರೆ ಇದರ ಫ್ಯಾಕ್ಟ್ ಅನ್ನು ಪರಿಶೀಲಿಸೋಣ.
ಕ್ಲೇಮ್ : ಸ್ವಾಮಿ ವಿವೇಕಾನಂದರ ಅಪರೂಪದ ವಿಡಿಯೋ.
ಫ್ಯಾಕ್ಟ್ : ಈ ವಿಡಿಯೋದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ನಡೆಯುತ್ತಿರುವ ವ್ಯಕ್ತಿ ಸ್ವಾಮಿ ಯೋಗಾನಂದ. ಅವರು ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ಭೇಟಿ ನೀಡಿದಾಗ ಚಿತ್ರೀಕರಿಸಿದ ವಿಡಿಯೋ ಇದು. ಆದ್ದರಿಂದ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊ MIRC@SCEDU ಎನ್ನುವ ವಾಟರ್ಮಾರ್ಕ್ ಇದ್ದು, ಸೂಕ್ತ ಕೀವರ್ಡ್ಗಳನ್ನು ಬಳಸಿಕೊಂಡು ಇಂಟರ್ನೆಟ್ನಲ್ಲಿ ಅದರ ಬಗ್ಗೆ ಕಂಡುಕೊಂಡಿದ್ದೇವೆ.
ಅದು ದಕ್ಷಿಣ ಕೆರೊಲಿನಾ ವಿಶ್ವವಿದ್ಯಾಲಯದ ಮೂವಿಂಗ್ ಇಮೇಜ್ ರಿಸರ್ಚ್ ಕಲೆಕ್ಷನ್ಸ್ ವೆಬ್ಸೈಟ್ಗೆ ಒಳಪಟ್ಟಿದೆ. ಈ ವೆಬ್ಸೈಟ್ ಆರ್ಕೈವಲ್ ಫೂಟಿಗೆಗಳಿದ್ದು, ವಾಟರ್ಮಾರ್ಕ್ಗೆ ಹೋಲುವ ಲೋಗೋ ಮತ್ತು ಥಂಬ್ನೇಲ್ಗಳನ್ನು ಈ ವೆಬ್ಸೈಟ್ ನಲ್ಲಿ ಗಮನಿಸಬಹುದಾಗಿದೆ. ಇಲ್ಲಿರುವ ಕೆಳಗಿನ ಚಿತ್ರದಲ್ಲಿ ನೀವೂ ಅದನ್ನು ಕಾಣಬಹುದು.
ತದನಂತರ ಸಂಬಂಧಿತ ಕೀವರ್ಡ್ಗಳನ್ನು ಬಳಸಿ ಸ್ವಾಮಿ ವಿವೇಕಾನಂದರ ದೃಶ್ಯಗಳನ್ನು ಹುಡುಕಾಡಿದಾಗ ವೈರಲ್ ವೀಡಿಯೊದಲ್ಲಿನ ದೃಶ್ಯಗಳನ್ನು ಒಳಗೊಂಡಿರುವ ವೀಡಿಯೊವನ್ನು ನಾವು ಕಂಡುಕೊಂಡೆವು.
1923 ರಲ್ಲಿ ನ್ಯೂಯಾರ್ಕ್ ನಗರಗೆ ಭೇಟಿ ನೀಡಿದಾಗ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ವೀಡಿಯೊ ವಿವರಣೆಯು ಹೇಳುತ್ತದೆ. ಈ 48-ಸೆಕೆಂಡ್ಗಳ ವೀಡಿಯೊದಲ್ಲಿನ ತುಣುಕನ್ನು ಸುಮಾರು 34 ಸೆಕೆಂಡ್ಗಳ ವೈರಲ್ ವೀಡಿಯೊಗೆ ಹೊಂದಿಕೆಯಾಗುತ್ತದೆ. ವೀಡಿಯೊ ವಿವರಣೆಯ ಪ್ರಕಾರ, ಈ ವೀಡಿಯೊದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ವ್ಯಕ್ತಿ ಸ್ವಾಮಿ ಯೋಗಾನಂದ, ಸ್ವಾಮಿ ವಿವೇಕಾನಂದರಲ್ಲ.
ಅಂತಿಮವಾಗಿ ಹೇಳುವುದಾದರೆ, ನ್ಯೂಯಾರ್ಕ್ ನಗರದಲ್ಲಿ ಸ್ವಾಮಿ ಯೋಗಾನಂದ ಮತ್ತು ಅವರ ತಂಡ ವಾಕಿಂಗ್ ಮಾಡುತ್ತಿರುವ ವಿಡಿಯೋವನ್ನು ಬಳಸಿ ಸ್ವಾಮಿ ವಿವೇಕಾನಂದರ ವಿಡಿಯೋ ಎಂದು ಹೇಳಲಾಗುತ್ತಿದೆ.