ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ನ್ಯಾಯಾಧೀಶರ ಕೊಲೆಗಾಗಿ ಗಲ್ಲಿಗೇರಿಸಲಾಗಿದೆಯೇ ಹೊರತು ಇರಾನ್ ಅಧ್ಯಕ್ಷರ ಪೋಸ್ಟ್‌ಗಳಿಗಾಗಿ ಅಲ್ಲ

ಇತ್ತೀಚೆಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವನ್ನಪ್ಪಿದ ನಂತರ, ವ್ಯಕ್ತಿಯೋರ್ವನ  ಕುತ್ತಿಗೆಗೆ ಕುಣಿಕೆಯನ್ನು ತೋರಿಸುವ ಫೋಟೋ ಕಾಣಿಸಿಕೊಂಡಿದೆ. ದಿವಂಗತ ರಾಷ್ಟ್ರಪತಿ ವಿರುದ್ಧ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಮಾಡಿದ್ದಕ್ಕಾಗಿ ಈತನನ್ನು ತನ್ನ 5 ವರ್ಷದ ಮಗಳ ಮುಂದೆ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಈ ಚಿತ್ರವನ್ನು ಶೇರ್ ಮಾಡಲಾಗಿದೆ. ಹಾಗಾದರೆ  ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು  ಪರಿಶೀಲಿಸುತ್ತೇವೆ.

ಕ್ಲೇಮ್ : ಸಾಮಾಜಿಕ ಮಾಧ್ಯಮದಲ್ಲಿ ಇರಾನ್‌ನ ಅಧ್ಯಕ್ಷರ ವಿರುದ್ಧ ಬರೆದಿದ್ದಕ್ಕಾಗಿ  ವ್ಯಕ್ತಿಯನ್ನು ತನ್ನ ಮಗಳ ಮುಂದೆ ಗಲ್ಲಿಗೇರಿಸುತ್ತಿರುವ ಚಿತ್ರ.

ಫ್ಯಾಕ್ಟ್:  ಈ ಛಾಯಾಚಿತ್ರದಲ್ಲಿರುವ ವ್ಯಕ್ತಿ ಇರಾನ್‌ನ ಮಜಿದ್ ಕವೂಸಿಫರ್. ನ್ಯಾಯಾಧೀಶರ ಹತ್ಯೆಗಾಗಿ 2007 ರಲ್ಲಿ ಕೇಂದ್ರ ಟೆಹ್ರಾನ್‌ನಲ್ಲಿ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ವೈರಲ್ ಫೋಟೋದಲ್ಲಿರುವ ಹುಡುಗಿ ಮರಣದಂಡನೆ ಸಮಯದಲ್ಲಿ ಅಲ್ಲಿಯೇ ಇದ್ದರೂ, ಅವಳು ಅವನ ಮಗಳು ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ.  ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವಾಸ್ತವವಾಗಿ, ಈ ಫೋಟೋದಲ್ಲಿರುವ ವ್ಯಕ್ತಿಯನ್ನು ಇರಾನ್‌ನಲ್ಲಿ ಗಲ್ಲಿಗೇರಿಸಲಾಯಿತು.  ಆದಾಗ್ಯೂ, 2007 ರಲ್ಲಿ ಈ ಘಟನೆ ಸಂಭವಿಸಿದೆ. ವಕೀಲರೊಬ್ಬರನ್ನು  ಕೊಲೆ ಮಾಡಿದಕ್ಕಾಗಿ ಗಲ್ಲಿಗೇರಿಸಲಾಗಿದೆಯೇ ಹೊರತು  ಇರಾನ್ ಅಧ್ಯಕ್ಷರ ವಿರುದ್ಧ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗಾಗಿ ಅಲ್ಲ. ವೈರಲ್ ಚಿತ್ರದ ಹಿಮ್ಮುಖ ಹುಡುಕಾಟವು ಹಿಂದೆ ಅದೇ ಫೋಟೋವನ್ನು (ಇಲ್ಲಿ ಮತ್ತು ಇಲ್ಲಿ) ಪ್ರಕಟಿಸಿದ ಹಲವಾರು ಬ್ಲಾಗ್‌ಗಳಿಗೆ ನಮ್ಮನ್ನು ಕರೆದೊಯ್ಯಿತು. ಈ ಬ್ಲಾಗ್‌ಗಳ ಪ್ರಕಾರ, ವ್ಯಕ್ತಿಯ ಹೆಸರು ಮಜಿದ್ ಕಾವೂಸಿಫರ್, ಮತ್ತು ನ್ಯಾಯಾಧೀಶರನ್ನು ಕೊಂದಿದ್ದಕ್ಕಾಗಿ ಈತನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ.

ಇನ್ನಷ್ಟು ವಿವರಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಸರ್ಚ್ ಮಾಡಿದಾಗ,  ಗಲ್ಲಿಗೇರಿಸಲ್ಪಟ್ಟ ವ್ಯಕ್ತಿಯ ಮತ್ತಷ್ಟು  ಸ್ಟಾಕ್ ಫೋಟೋಗಳು ನಮಗೆ ದೊರಕಿದೆ  (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ದೊರೆತ ಫೋಟೋಗಳ ಪ್ರಕಾರ, ವ್ಯಕ್ತಿಯನ್ನು ಮಜಿದ್ ಕವೂಸಿಫರ್ ಎಂದು ಗುರುತಿಸಲಾಗಿದೆ. 2007ರಲ್ಲಿ ನ್ಯಾಯಾಧೀಶರೊಬ್ಬರನ್ನು ಕೊಂದ ಕಾರಣಕ್ಕಾಗಿ ಆತನನ್ನು ತನ್ನ ಸೋದರಳಿಯ ಹೊಸೆನ್ ಕವೂಸಿಫರ್ ಜೊತೆಗೆ ಕೇಂದ್ರ ಟೆಹ್ರಾನ್‌ನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಈ ಘಟನೆಯ ಕುರಿತು ಸುದ್ದಿ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ಯಾವುದೇ ವರದಿಗಳಲ್ಲಿ ಆತನನ್ನು ತನ್ನ ಐದು ವರ್ಷದ ಮಗಳ ಮುಂದೆ ನೇಣು ಹಾಕಿಸಲಾಗಿದೆ ಎಂಬ ಉಲ್ಲೇಖವಿಲ್ಲ. ಆದಾಗ್ಯೂ, ಕೆಲವು ವರದಿಗಳು ನೇಣು ಹಾಕುವ ಸಮಯದಲ್ಲಿ ಹಂಚಿಕೊಂಡ ಫೋಟೋದಲ್ಲಿರುವ ಹುಡುಗಿ ಇದ್ದಳು ಎಂದು ಸೂಚಿಸಿವೆ. ಅದೇನೇ ಇದ್ದರೂ, ಈ ಹುಡುಗಿ ಮಜಿದ್ ಕಾವೂಸಿಫರ್ ಮಗಳು ಎಂಬುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ.

ಬ್ಯಾಂಕ್‌ಗಳನ್ನು ಹ್ಯಾಕ್ ಮಾಡಿ ಆಫ್ರಿಕಾ ಮತ್ತು ಪ್ಯಾಲೆಸ್ಟೈನ್‌ಗೆ ಹಣವನ್ನು ದೇಣಿಗೆ ನೀಡಿದ ಹಮ್ಜಾ ಬೆಂಡೆಲ್ಲಾಡ್ಜ್‌ನ ನೇಣುಗಂಬವನ್ನು ಚಿತ್ರಿಸುತ್ತದೆ ಎನ್ನುವ ಕ್ಲೇಮ್ ಮೂಲಕ ಈ  ಹಿಂದೆಯೂ ಇದೆ ತರಹದ ಪೋಸ್ಟ್ ಅನ್ನು ಶೇರ್ ಮಾಡಲಾಗಿತ್ತು. ಈ ಕುರಿತು ಫಾಕ್ಳ್ಯ್ ನೀಡಿದ  ಫ್ಯಾಕ್ಟ್ ಚೆಕ್ ಲೇಖನವನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಈ ಫೋಟೋದಲ್ಲಿರುವ ವ್ಯಕ್ತಿಯನ್ನು 2007 ರಲ್ಲಿ ನ್ಯಾಯಾಧೀಶರ ಹತ್ಯೆಗಾಗಿ ಗಲ್ಲಿಗೇರಿಸಲಾಗಿದೆ, ಹೊರತು  ಇರಾನ್ ಅಧ್ಯಕ್ಷರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅಲ್ಲ.