ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿದೆ ಎಂಬ ಹೇಳಿಕೆ ಸುಳ್ಳು

“ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿದೆ.  ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಒಪ್ಪಂದಕ್ಕೆ ಸಹಿ ಹಾಕಿ ತನ್ನ 28 ದ್ವೀಪಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ ”ಎಂದು ಪೋಸ್ಟ್ ನಲ್ಲಿ ಹೇಳಿಕೊಳ್ಳಲಾಗಿದೆ.  ಹೀಗೆಂದು ಸಾಮಾಜಿಕ ಜಾಲತಾಣದಲ್ಲಿವಿಡಿಯೋ ವೈರಲ್ ಆಗಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿದೆ,ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಝು ಅಗ್ರಿಮೆಂಟ್ ಗೆ ಸಹಿ ಹಾಕುವುದರ ಮೂಲಕ ಅವರು ದ್ವೀಪಗಳನ್ನು ಅಧಿಕೃತವಾಗಿ ಭಾರತಕ್ಕೆ ಬಿಟ್ಟುಕೊಟ್ಟಿದ್ದಾರೆ.

ಫ್ಯಾಕ್ಟ್: ಭಾರತ ಸರ್ಕಾರವು ಮಾಲ್ಡೀವ್ಸ್‌ನಿಂದ ದ್ವೀಪಗಳನ್ನು ಖರೀದಿಸುವ ಬಗ್ಗೆ ಯಾವುದೇ ಅಧಿಕೃತ ವರದಿಗಳಿಲ್ಲ. ಆದಾಗ್ಯೂ, ಭಾರತ ಸರ್ಕಾರವು ಇತ್ತೀಚೆಗೆ ಆಗಸ್ಟ್ 2024 ರಲ್ಲಿ ಮಾಲ್ಡೀವ್ಸ್‌ನಲ್ಲಿ ನೀರು ಮತ್ತು ನೈರ್ಮಲ್ಯ ಯೋಜನೆಗೆ ಧನಸಹಾಯ ನೀಡಲು ಪ್ರಾರಂಭಿಸಿದೆ. ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು X ನಲ್ಲಿ 28 ದ್ವೀಪಗಳಲ್ಲಿರುವ  ನೀರು ಮತ್ತು ಒಳಚರಂಡಿ ಯೋಜನೆಯನ್ನು ಭಾರತಕ್ಕೆ ನಿಗದಿಪಡಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಇದು ಸುಳ್ಳು ಮಾಹಿತಿ ಎಂದು ಭಾರತ ಸರ್ಕಾರದ PIB ಸತ್ಯ-ಪರೀಕ್ಷೆ ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪಾಗಿದೆ.

ಭಾರತ ಸರ್ಕಾರವು ಮಾಲ್ಡೀವ್ಸ್‌ನಲ್ಲಿ 28 ದ್ವೀಪಗಳನ್ನು ಖರೀದಿಸಿದೆ ಎಂಬುದನ್ನು ತಿಳಿಯಲು ಸಂಬಂಧಿತ ಕೀವರ್ಡ್ಗಳೊಂದಿಗೆ ರಿವೆರ್ಸೆ ಇಮೇಜ್ ಹುಡುಕಾಟವನ್ನು ನಡೆಸಿದಾಗ, ನಮಗೆ ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಆದಾಗ್ಯೂ, ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿನ  (ಇಲ್ಲಿ, ಇಲ್ಲಿ ಮತ್ತು ಇಲ್ಲಿ)  ನೀರು ಮತ್ತು ನೈರ್ಮಲ್ಯ ಯೋಜನೆಯನ್ನು ಭಾರತ ಪ್ರಾರಂಭಿಸುತ್ತಿರುವ ಕುರಿತು ನಾವು ಹಲವಾರು ಸುದ್ದಿ ಲೇಖನಗಳನ್ನು ನೋಡಿದ್ದೇವೆ.

ಈ ವರದಿಗಳ ಪ್ರಕಾರ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, 10 ಆಗಸ್ಟ್ 2024 ರಂದು  ನೀರು ಮತ್ತು ನೈರ್ಮಲ್ಯ ಯೋಜನೆಯನ್ನು ಅಧಿಕೃತವಾಗಿ ಮಾಲ್ಡೀವ್ಸ್‌ಗೆ ಹಸ್ತಾಂತರಿಸಿದರು. ಸರಿಸುಮಾರು 923 ಕೋಟಿ ರೂಪಾಯಿಗಳ ಹೂಡಿಕೆಯ ಪ್ರಾಜೆಕ್ಟ್ ಇದಾಗಿದ್ದು, ಭಾರತದ  ಈ ಯೋಜನೆಯು 28 ದ್ವೀಪಗಳಿಗೆ ಅಂದರೆ ಮಾಲ್ಡೀವಿಯನ್ ಜನಸಂಖ್ಯೆಯ 7% ದಷ್ಟು ಜನರಿಗೆ ಪ್ರಯೋಜನವನ್ನು ನೀಡಲಿದೆ. ಭಾರತೀಯ ಲೈನ್ ಆಫ್ ಕ್ರೆಡಿಟ್ ಸೌಲಭ್ಯದ ಅಡಿಯಲ್ಲಿ EXIM ಬ್ಯಾಂಕ್ ಆಫ್ ಇಂಡಿಯಾ ಈ ನಗದು ಮೊತ್ತವನ್ನುನೀಡಿದೆ. ಜೈಶಂಕರ್ ಈ ಯೋಜನೆಯನ್ನು “the largest climate adaptation implemented in Maldives with international collaboration ”ಎಂದು ಹೇಳಿದ್ದಾರೆ. 

ಹೆಚ್ಚಿನ ತನಿಖೆಯ ನಂತರ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು 11 ಆಗಸ್ಟ್ 2024 ರಂದು ಪತ್ರಿಕಾ ಪ್ರಕಟಣೆಯನ್ನು(ಪ್ರೆಸ್ ರಿಲೀಸ್) ಹೊರಡಿಸಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.  “ಇಎಎಂ ಮತ್ತು ವಿದೇಶಾಂಗ ಸಚಿವರು ಜಂಟಿಯಾಗಿ ಅಧ್ಯಕ್ಷ ಮುಯಿಝು ಅವರ ಉಪಸ್ಥಿತಿಯಲ್ಲಿ ಅಧ್ಯಕ್ಷರ ಕಚೇರಿಯಲ್ಲಿ, ಇಂಡಿಯನ್ ಲೈನ್ ಆ ಕ್ರೆಡಿಕ್ ಅನ್ನು (ಎಲ್‌ಒಸಿ) – ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಜಾಲದ ನೆರವಿನ ಯೋಜನೆಯನ್ನು ಉದ್ಘಾಟಿಸಿದ್ದಾರೆ.’’

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಎಲ್ಲಾ ಸಭೆಗಳನ್ನು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ್ದು,  “Virtual Inauguration of Water and Sanitation Projects in 28 Islands of Maldives.” ಎಂಬ ಕ್ಯಾಪ್ಶನ್ ಅನ್ನು ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು X ನಲ್ಲಿ ಈವೆಂಟ್ ಬಗ್ಗೆ ಹಂಚಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು X ನಲ್ಲಿ ಪೋಸ್ಟ್ ಮಾಡಿದ್ದು, “ಇಂದು @DrSJaishankar ಅವರನ್ನು ಭೇಟಿ ಮಾಡಿ ಮಾಲ್ಡೀವ್ಸ್ ನ 28 ದ್ವೀಪಗಳಲ್ಲಿ ನೀರು ಮತ್ತು ಒಳಚರಂಡಿ ಯೋಜನೆಗಳ ಅಫೀಷಿಯಲ್ ಆಗಿ ಹಸ್ತಾಂತರಿಸಿ ಸಂತೋಷವಾಗಿದೆ.” ಎಂದು ಹೇಳಿಕೊಂಡಿದ್ದಾರೆ.  

ಭಾರತ ಸರ್ಕಾರವು ಮಾಲ್ಡೀವ್ಸ್‌ನಿಂದ ದ್ವೀಪಗಳನ್ನು ಖರೀದಿಸಿದೆ ಎಂಬ ನಕಲಿ ಸುದ್ದಿ ಬಗ್ಗೆ ಭಾರತ ಸರ್ಕಾರದ ಪಿಐಬಿ ಫ್ಯಾಕ್ಟ್ – ಚೆಕ್ ಕೂಡ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿದೆ ಎನ್ನುವುದು ಸುಳ್ಳು.