ಇಂಡೋನೇಷ್ಯಾದಲ್ಲಿ ನಡದ ವಿಮಾನ ಅಪಘಾತ ಎಂದು ಗ್ರಾಫಿಕ್ಸ್ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ

ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತದ ವಿಡಿಯೋ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಇದು ಎಷ್ಟು ಸತ್ಯ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪ್ರತಿಪಾದನೆ: ಇಂಡೋನೇಷ್ಯಾದಲ್ಲಿ ನಡೆದ ಭೀಕರ ವಿಮಾನ ಅಪಘಾತದ ದೃಶ್ಯಗಳು.

ನಿಜಾಂಶ: ವೀಡಿಯೊದ ವಿಮಾನ ಅಪಘಾತದ ದೃಶ್ಯಗಳು ನಿಜವಾಗಿಯೂ ಅಲ್ಲಿ ಏನಾಯಿತು ಎಂಬುದಕ್ಕೆ ಸಂಬಂಧಿಸಿಲ್ಲ. ‘ಎಕ್ಸ್-ಪ್ಲೇನ್ 11’ ಎಂಬ ಫ್ಲೈಟ್ ಸಿಮ್ಯುಲೇಶನ್ ಸಾಫ್ಟ್‌ವೇರ್ ಬಳಸಿ ಯೂಟ್ಯೂಬರ್ ಬೊಪ್‌ಬಿಬನ್ ಈ ವೀಡಿಯೊವನ್ನು ರಚಿಸಿದ್ದಾರೆ. ವಿವಿಧ ದೇಶಗಳ ವಿಮಾನಗಳ ಕುಸಿತದ ದೃಶ್ಯಗಳನ್ನು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು. ಆದ್ದರಿಂದ, ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಕ್ಲಿಪ್‌ನ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್‌ನಲ್ಲಿ ಹುಡುಕಾಡಿದಾಗ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು 02 ಮೇ 2020 ರಂದು ‘Bopbibun’ ಯೂಟ್ಯೂಬ್ ಚಾನೆಲ್ ಪ್ರಸಾರ ಮಾಡಿದೆ ಎಂದು ತಿಳಿದುಬಂದಿದೆ. “ಕುಡಿತದ ಅಮಲಿನಲ್ಲಿದ್ದ ಪೈಲಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ವಿಡಿಯೊ ಎಂದು ಶೀರ್ಷಿಕೆ ನೀಡಲಾಗಿದೆ. ಆದರೂ, ‘ಎಕ್ಸ್-ಪ್ಲೇನ್ 11’ ಎಂಬ ಫ್ಲೈಟ್ ಸಿಮ್ಯುಲೇಶನ್ ಸಾಫ್ಟ್‌ವೇರ್ ಬಳಸಿ ವೀಡಿಯೊವನ್ನು ರಚಿಸಲಾಗಿದೆ. ಜೊತೆಗೆ ಈ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳು ನಿಜವಾದ ಘಟನೆಗೆ ಸಂಬಂಧಿಸಿಲ್ಲ ಎಂದು ವಿಡಿಯೋದ ವಿವರಣೆಯು ಸ್ಪಷ್ಟಪಡಿಸಿದೆ.

ಬೊಪ್‌ಬಿಬನ್ ಯೂಟ್ಯೂಬ್ ಚಾನೆಲ್‌ನಲ್ಲಿ ವಿವಿಧ ದೇಶಗಳ ವಿಮಾನಗಳ ಕ್ರ್ಯಾಶ್ ಸಿಮ್ಯುಲೇಶನ್ ವೀಡಿಯೊಗಳನ್ನು ನೋಡಬಹುದು. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಸಿಮ್ಯುಲೇಶನ್ ಸಾಫ್ಟ್‌ವೇರ್ ಬಳಸಿ ರಚಿಸಲಾಗಿದೆ ಎಂದು ಹೇಳಬಹುದು.

ಅಂತಿಮವಾಗಿ, ಇಂಡೋನೇಷ್ಯಾದಲ್ಲಿ ನಡದ ವಿಮಾನ ಅಪಘಾತ ಎಂದು ಗ್ರಾಫಿಕ್ಸ್ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.