21 ನವೆಂಬರ್ 2024 ರಂದು (ಇಲ್ಲಿ, ಇಲ್ಲಿ) ಮಾಜಿ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು ಅಮೃತಸರದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಪತ್ನಿ ನವಜೋತ್ ಕೌರ್ ಅವರು ಸ್ಟೇಜ್ -4 ಕ್ಯಾನ್ಸರ್ (ಸ್ತನ ಕ್ಯಾನ್ಸರ್) ಅನ್ನು ಸರಳ ಆಹಾರ ಮತ್ತು ಜೀವನಶೈಲಿಯ ಮೂಲಕ 40 ದಿನಗಳಲ್ಲಿ ಜಯಿಸಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನವಜೋತ್ ಸಿಂಗ್ ಸಿಧು ಅವರು ಬೇವಿನ ಸೊಪ್ಪು, ಅರಿಶಿನ, ಆಪಲ್ ಸೈಡರ್ ವಿನೆಗರ್, ನಿಂಬೆ ವಿನೆಗರ್ ಮತ್ತು ಮಧ್ಯಂತರ ಉಪವಾಸದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂದು ಹೇಳಿರುವ ಪತ್ರಿಕಾಗೋಷ್ಠಿಯ ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ (ಇಲ್ಲಿ). ವೀಡಿಯೊದಲ್ಲಿ, ನವಜೋತ್ ಸಿಂಗ್ ಸಿಧು ಅವರು ಬೇವಿನ ಎಲೆಗಳು, ಅರಿಶಿನ ಮತ್ತು ಸೇಬು ಮತ್ತು ನಿಂಬೆ ವಿನೆಗರ್ ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎಂದು ಹೇಳಿಕೊಂಡಿದ್ದಾರೆ. ದೇಹವು ಆಹಾರವನ್ನು ಕಸಿದುಕೊಳ್ಳುವ ಮೂಲಕ, ಕ್ಯಾನ್ಸರ್ ಕೋಶಗಳು ಸ್ವಾಭಾವಿಕವಾಗಿ ಸಾಯಲು ಪ್ರಾರಂಭಿಸುತ್ತವೆ ಎಂದು ತಿಳಿಸಿದ್ದಾರೆ. ಹಾಗಾದರೆ ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಅರಿಶಿನ, ಬೇವಿನ ಎಲೆಗಳು, ಆಪಲ್ ಸೈಡರ್ ವಿನೆಗರ್, ನಿಂಬೆ ನೀರು, ಸರಿಯಾದ ಉಪವಾಸ ಮತ್ತು ಜೀವನಶೈಲಿಯ ಬದಲಾವಣೆಗಳು ನನ್ನ ಹೆಂಡತಿಯ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಗುಣಪಡಿಸಿದೆ – ನವಜೋತ್ ಸಿಂಗ್ ಸಿಧು.
ಫ್ಯಾಕ್ಟ್: ಅರಿಶಿನ, ಬೇವಿನ ಎಲೆಗಳು, ಆಪಲ್ ಸೈಡರ್ ವಿನೆಗರ್, ನಿಂಬೆ ನೀರು, ಇಂಟರ್ಮಿಟೆಂಟ್ ಉಪವಾಸ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಒಳಗೊಂಡಿರುವ ಆಹಾರದ ಬಗ್ಗೆ ಸಿಧು ಅವರ ಹೇಳಿಕೆಗಳು ವೈರಲ್ ಆಗಿದ್ದು, ಹಲವಾರು ವೈದ್ಯಕೀಯ ಮತ್ತು ಆರೋಗ್ಯ ತಜ್ಞರು ಪ್ರತಿಕ್ರಿಯಿಸಿದ್ದಾರೆ. ಅಂತಹ ಕ್ಲೇಮ್ಗಳು ಉತ್ತಮ ಗುಣಮಟ್ಟದ ಕೊರತೆಯನ್ನು ಹೊಂದಿವೆ ಎಂದು ಹೇಳಿದ್ದಾರೆ. ಈ ಪರಿಣಾಮವಾಗಿ, ಸಿಧು ಅವರು ಸ್ಪಷ್ಟೀಕರಣವನ್ನು ನೀಡಿದ್ದಾರೆ. ಕ್ಯಾನ್ಸರ್ ವಿರುದ್ಧದ ಅವರ ಪತ್ನಿಯ ಹೋರಾಟವು ಶಸ್ತ್ರಚಿಕಿತ್ಸೆಗಳು, ಕೀಮೋಥೆರಪಿ, ಹಾರ್ಮೋನ್ ಮತ್ತು ಸರಿಯಾದ ಚಿಕಿತ್ಸೆಗಳು, ಕಟ್ಟುನಿಟ್ಟಾದ ಆಹಾರ ಯೋಜನೆ ಮತ್ತು ರೋಗವನ್ನು ಎದುರಿಸುವ ನಿರ್ಣಯವನ್ನು ಒಳಗೊಂಡಿತ್ತು ಎಂದು ಹೇಳಿದ್ದಾರೆ. ಬೇವಿನ ಎಲೆಗಳು, ಅರಿಶಿನ ಮತ್ತು ಉಪವಾಸವು ಕ್ಯಾನ್ಸರ್ನ ಬೆಂಬಲ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ. ಕ್ಯಾನ್ಸರ್ ನಿರ್ವಹಣೆಯಲ್ಲಿ ಸೇಬು ಸೈಡರ್ ವಿನೆಗರ್ ಮತ್ತು ನಿಂಬೆಯ ಪರಿಣಾಮಕಾರಿ ಎನ್ನಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದಲ್ಲದೆ, ಬೇವಿನ ಎಲೆಗಳು, ಅರಿಶಿನ, ಸೇಬು ಸೈಡರ್ ವಿನೆಗರ್, ನಿಂಬೆ ನೀರು ಅಥವಾ ಉಪವಾಸವು ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂಬ ಸಮರ್ಥನೆಯನ್ನು ಸಮರ್ಥಿಸಲು ಯಾವುದೇ ವೈದ್ಯಕೀಯ ಒಮ್ಮತ ಅಥವಾ ವೈಜ್ಞಾನಿಕ ಪುರಾವೆಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಬೇವಿನ ಎಲೆಗಳು, ಅರಿಶಿನ ಮತ್ತು ಇಂಟರ್ಮಿಟೆಂಟ್ ಉಪವಾಸವು ಕ್ಯಾನ್ಸರ್ ಚಿಕಿತ್ಸೆ ಮತ್ತು ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ, ಆದರೆ ಅವು ಮಾತ್ರವೇ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ.
21 ನವೆಂಬರ್ 2024 ರಂದು, ನವಜೋತ್ ಸಿಂಗ್ ಸಿಧು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಪತ್ನಿ ನವಜೋತ್ ಕೌರ್ ಅವರು ಸರಳವಾದ ಆಹಾರ ಮತ್ತು ಕಟ್ಟುನಿಟ್ಟಾದ ಜೀವನಶೈಲಿಯ ಮೂಲಕ ಕೇವಲ 40 ದಿನಗಳಲ್ಲಿ ಸ್ಟೇಜ್- 4 ಕ್ಯಾನ್ಸರ್ ಅನ್ನು ಜಯಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಅದೇ ಪತ್ರಿಕಾಗೋಷ್ಠಿಯಲ್ಲಿ ಸಿಧು, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ನಿರ್ವಹಿಸುವಲ್ಲಿ ಆರೋಗ್ಯ ವ್ಯವಸ್ಥೆ ಮತ್ತು ವೈದ್ಯಕೀಯ ಚಿಕಿತ್ಸೆಗಳು ಸಹ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ. ತಮ್ಮ ಪತ್ನಿಯ ಪ್ರಯಾಣವನ್ನು ಹಂಚಿಕೊಂಡಾ ಅವರು, ಅವರ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳ ಮಹತ್ವದ ಕೊಡುಗೆಯನ್ನು ನೀಡಿದೆ ಎಂದು ಒತ್ತಿ ಹೇಳಿದ್ದಾರೆ. ಸಿಧು ಅವರು ಆರೋಗ್ಯಕ್ಕೆ ಶಿಸ್ತುಬದ್ಧ ಜೀವನಶೈಲಿಯ ಪ್ರಾಮುಖ್ಯತೆ ಮತ್ತು ವೈದ್ಯಕೀಯ ಆರೈಕೆಗೆ ಅಗತ್ಯವಾದ ಆರೋಗ್ಯಕರ ಆಹಾರ ಪದ್ಧತಿಯಾಗಿದೆ ಎಂದು ತಿಳಿಸಿದ್ದಾರೆ. ಈ ಪತ್ರಿಕಾಗೋಷ್ಠಿಯ ವೀಡಿಯೊವನ್ನು ಇಲ್ಲಿ ನೋಡಬಹುದು (ಆರ್ಕೈವ್ ಲಿಂಕ್).
ಪತ್ರಿಕಾಗೋಷ್ಠಿಯ ನಂತರ, ಹಲವಾರು ಮಾಧ್ಯಮಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಿಧು ಉಲ್ಲೇಖಿಸಿದ ಆಹಾರಕ್ರಮವನ್ನು ಹೈಲೈಟ್ ಮಾಡುವ ಆರ್ಟಿಕಲ್ಸ್ ಅನ್ನು ಪ್ರಕಟಿಸಿದೆ. ಅಲ್ಲಿ ಅವರು ತಮ್ಮ ಪತ್ನಿ ನವಜೋತ್ ಕೌರ್ ಸರಿಯಾದ ಕ್ರಮಗಳ ಮೂಲಕ ಕೇವಲ 40 ದಿನಗಳಲ್ಲಿ ಸ್ಟೇಜ್-4 ಕ್ಯಾನ್ಸರ್ ಅನ್ನು ಜಯಿಸಿದ್ದಾರೆ ಎಂದು ಹೇಳಿದ್ದಾರೆ. ಆಹಾರದ ಬಗ್ಗೆ ಸಿಧು ಅವರ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ, ಇದು ಅವರ ಪತ್ನಿಯನ್ನು ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳಲು ಆಹಾರ ಕ್ರಮಗಳು ಮಾತ್ರವಲ್ಲದೆ ವೈದ್ಯಕೀಯ ಸಮುದಾಯ ಮತ್ತು ಸಾರ್ವಜನಿಕ ಆರೋಗ್ಯ ವಕೀಲರಿಂದ ಪ್ರತಿಕ್ರಿಯೆಗಳು ಬಂದಿವೆ ಎಂದು ಸಿಧು ಅವರು ಸ್ಪಷ್ಟೀಕರಣವನ್ನು ನೀಡಿದ್ದಾರೆ. ಕ್ಯಾನ್ಸರ್ ವಿರುದ್ಧದ ಹೋರಾಟವು ಶಸ್ತ್ರಚಿಕಿತ್ಸೆಗಳು, ಕೀಮೋಥೆರಪಿ, ಹಾರ್ಮೋನ್ ಮತ್ತು ಸರಿಯಾದ ಚಿಕಿತ್ಸೆ, ಕಟ್ಟುನಿಟ್ಟಾದ ಆಹಾರ ಯೋಜನೆ ಮತ್ತು ರೋಗವನ್ನು ಎದುರಿಸುವ ನಿರ್ಣಯವನ್ನು ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಈ ಎಲ್ಲಾ ಪ್ರಯತ್ನಗಳು ಇಮ್ಯುನೊಥೆರಪಿಯ ಒಂದು ರೂಪವಾಗಿ ಕಾರ್ಯನಿರ್ವಹಿಸಿದವು (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯ ಪ್ರಕಾರ, ಸಿಧು ಅವರ ಪತ್ನಿ ನವಜೋತ್ ಕೌರ್ ಅವರು ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ್ದಾರೆ. ಟಾಟಾ ಮೆಮೋರಿಯಲ್ ಆಸ್ಪತ್ರೆಯ ಮಾಜಿ ಆಂಕೊಲಾಜಿಸ್ಟ್ ಡಾ. ರೂಪಿಂದರ್ ಬಾತ್ರಾ ಅವರ ನಿರ್ದೇಶನದಲ್ಲಿ ಹರಿಯಾಣದ ಯಮುನಾನಗರದಲ್ಲಿರುವ ವಾರ್ಯಮ್ ಸಿಂಗ್ ಆಸ್ಪತ್ರೆಯಲ್ಲಿ ಆಕೆಗೆ ಹೆಚ್ಚಿನ ಚಿಕಿತ್ಸೆ ನಡೆಯಿತು. ಸಿದ್ದು ಅವರು ಡಾ. ಬಾತ್ರಾ ಅವರಿಗೆ ತಮ್ಮ ಧನ್ಯವಾದ ಮತ್ತು ಕೃತಜ್ಞತೆಯನ್ನು ಪೋಸ್ಟ್‌ನಲ್ಲಿ (ಇಲ್ಲಿ) ವ್ಯಕ್ತಪಡಿಸಿದ್ದಾರೆ. ನವಜೋತ್ ಕೌರ್ ಅನೇಕ ಶಸ್ತ್ರಚಿಕಿತ್ಸೆಗಳು ಮತ್ತು ಕೀಮೋಥೆರಪಿ ಸೆಷನ್‌ಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಒಳಗಾಗಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ತಮ್ಮ ಪತ್ನಿ ನವಜೋತ್ ಕೌರ್ ಅವರು ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳ ಮೂಲಕ ಸ್ಟೇಜ್- 4 ಕ್ಯಾನ್ಸರ್ ಅನ್ನು ಜಯಿಸಿದ್ದಾರೆ ಎಂದು ಸಿಧು ಅವರ ಪತ್ರಿಕಾಗೋಷ್ಠಿಯ ವೀಡಿಯೊ ವೈರಲ್ ಆಗುತ್ತಿದ್ದಂತೆ, ಹಲವಾರು ವೈದ್ಯಕೀಯ ಮತ್ತು ಆರೋಗ್ಯ ತಜ್ಞರು ಪ್ರತಿಕ್ರಿಯಿಸಿದ್ದು, ಅಂತಹ ಕ್ಲೇಮ್ ಗಳಿಗೆ ಸರಿಯಾದ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಸಾಂಪ್ರದಾಯಿಕ ಕ್ಯಾನ್ಸರ್ ಚಿಕಿತ್ಸೆಗಳನ್ನು (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಿರ್ಲಕ್ಷಿಸಬೇಡಿ ಎಂದು ಅವರು ಸಾರ್ವಜನಿಕರಿಗೆ ತಿಳಿಸಿದ್ದಾರೆ. 262 ಆಂಕೊಲಾಜಿಸ್ಟ್‌ಗಳನ್ನು ಒಳಗೊಂಡಿರುವ ಟಾಟಾ ಮೆಮೋರಿಯಲ್ ಹಾಸ್ಪಿಟಲ್ ಅಲುಮ್ನಿ (ಟಿಎಮ್‌ಎಚ್‌ಎ), 23 ನವೆಂಬರ್ 2024 ರಂದು ಔಪಚಾರಿಕ ಹೇಳಿಕೆಯನ್ನು ನೀಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ (ಇಲ್ಲಿ) ತಪ್ಪು ಮಾಹಿತಿಯ ಹರಡುವಿಕೆಯ ವಿರುದ್ಧ ಎಚ್ಚರಿಕೆ ನೀಡಿದೆ.
ಅರಿಶಿನ, ಬೇವಿನ ಎಲೆಗಳು, ಆಪಲ್ ಸೈಡರ್ ವಿನೆಗರ್, ನಿಂಬೆ ನೀರು, ಸರಿಯಾದ ಉಪವಾಸ ಮತ್ತು ಜೀವನಶೈಲಿಯ ಬದಲಾವಣೆಗಳು ಕ್ಯಾನ್ಸರ್ ಅನ್ನು ಗುಣಪಡಿಸಬಹುದೇ?
ವಿವಿಧ ಅಧ್ಯಯನಗಳು ಮತ್ತು ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಬೇವು ಕೆಲವು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ತೋರಿಸಿದೆ. ಆದರೆ, ಈ ಗುಣಲಕ್ಷಣಗಳನ್ನು ಸಂಪೂರ್ಣವಾಗಿ ಅನ್ವೇಷಿಸಲು ಮತ್ತು ಕ್ಯಾನ್ಸರ್ ನಿರ್ವಹಣೆಯಲ್ಲಿ ಬೇವನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಕ್ಯಾನ್ಸರ್ ವಿರೋಧಿ ಕಾರ್ಯವಿಧಾನಗಳನ್ನು ಗುರುತಿಸಲು, ಸ್ಪಷ್ಟಪಡಿಸಲು, ಪ್ರಾಣಿ ಅಧ್ಯಯನಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ಮೂಲಕ ಅದರ ಪರಿಣಾಮಕಾರಿತ್ವವನ್ನು ಖಚಿತಪಡಿಸಲು ಹೆಚ್ಚುವರಿ ಅಧ್ಯಯನಗಳು ಅಗತ್ಯವಿದೆ.
ಅರಿಶಿನದಲ್ಲಿನ ಮುಖ್ಯ ಸಕ್ರಿಯ ಅಂಶವೆಂದರೆ ಕರ್ಕ್ಯುಮಿನ್, ಇದನ್ನು ಡಿಫೆರುಲೋಯ್ಲ್ಮೆಥೇನ್ ಎಂದೂ ಕರೆಯುತ್ತಾರೆ. ವಿವಿಧ ಅಧ್ಯಯನಗಳು ಮತ್ತು ವರದಿಗಳು (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಅರಿಶಿನದಲ್ಲಿ ಕಂಡುಬರುವ ಕರ್ಕ್ಯುಮಿನ್ ಎಂಬ ಸಂಯುಕ್ತವು ಕೆಲವು ರೀತಿಯ ಕ್ಯಾನ್ಸರ್‌ಗಳಲ್ಲಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರಬಹುದು ಎಂದು ಸೂಚಿಸುತ್ತದೆ. ಕೆಲವು ಪ್ರಯೋಗಾಲಯ ಅಧ್ಯಯನಗಳು ಶ್ವಾಸಕೋಶ, ಸ್ತನ, ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಎಂದು ಸೂಚಿಸಿವೆ. ಇತರ ಅಧ್ಯಯನಗಳು ಕರ್ಕ್ಯುಮಿನ್ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಅದರ ಹರಡುವಿಕೆಯನ್ನು ನಿಧಾನಗೊಳಿಸಿ ಕೀಮೋಥೆರಪಿಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ವಿಕಿರಣ ಚಿಕಿತ್ಸೆಯಿಂದ ಉಂಟಾಗುವ ಹಾನಿಯಿಂದ ಆರೋಗ್ಯಕರ ಕೋಶಗಳನ್ನು ಸಹ ರಕ್ಷಿಸುತ್ತದೆ. ಆದರೆ, ಅರಿಶಿನ ಮತ್ತು ಕ್ಯಾನ್ಸರ್ ಬಗ್ಗೆ ಹೆಚ್ಚಿನ ಪುರಾವೆಗಳು ಪ್ರಾಣಿಗಳ ಅಧ್ಯಯನಗಳು ಅಥವಾ ಪ್ರಯೋಗಾಲಯ ಸಂಶೋಧನೆಯಿಂದ ಬಂದಿವೆ. ಪ್ರಸ್ತುತ, ಈ ಅಧ್ಯಯನಗಳು ಕ್ಯಾನ್ಸರ್ ಹೊಂದಿರುವ ವ್ಯಕ್ತಿಗಳಿಗೆ ಅಥವಾ ಅದನ್ನು ತಡೆಯಲು ಬಯಸುವವರಿಗೆ ಹೇಗೆ ಎಂಬುದು ಅಸ್ಪಷ್ಟವಾಗಿದೆ.
ಚಿಕಾಗೋ ವಿಶ್ವವಿದ್ಯಾನಿಲಯದ ಪ್ರಕಾರ, ಆಪಲ್ ಸೈಡರ್ ವಿನೆಗರ್ ಕೆಲವು ಸಾಬೀತಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ ತೂಕ ನಷ್ಟಕ್ಕೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ, ಇದು ಕ್ಯಾನ್ಸರ್ ಅನ್ನು ಗುಣಪಡಿಸುವ ಯಾವುದೇ ಗುಣಗಳನ್ನು ಹೊಂದಿಲ್ಲ.
ಪ್ರಾಯೋಗಿಕವಾಗಿ ಸಂಬಂಧಿತ ಕ್ಯಾನ್ಸರ್-ಸಂಬಂಧಿತ ಪರಿಣಾಮಗಳ ಮೇಲೆ ಇಂಟರ್ಮಿಟೆಂಟ್ ಉಪವಾಸದ ಪರಿಣಾಮಗಳು ಅಸ್ಪಷ್ಟವಾಗಿ ಉಳಿದಿವೆ. ಕೆಲವು ಅಧ್ಯಯನಗಳು ಮತ್ತು ವರದಿಗಳು (ಇಲ್ಲಿ, ಇಲ್ಲಿ) ಈ ಉಪವಾಸವು ದೇಹದ ದ್ರವ್ಯರಾಶಿಯನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದರಿಂದ ಕ್ಯಾನ್ಸರ್ ರೋಗಶಾಸ್ತ್ರದ ಮೇಲೆ ಪ್ರಭಾವ ಬೀರುತ್ತದೆ ಎಂದು ಸೂಚಿಸುತ್ತದೆ. ದೇಹದ ತೂಕದಲ್ಲಿ ಯಾವುದೇ ಕಡಿತ ಮತ್ತು ಸರಿಯಾದ ಸಮತೋಲಿತ ಆಹಾರ ಮತ್ತು ವ್ಯಾಯಾಮವಿಲ್ಲದೆ ಇಂಟರ್ಮಿಟೆಂಟ್ ಉಪವಾಸವು ಕ್ಯಾನ್ಸರ್ ಫಲಿತಾಂಶಗಳನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಕಡಿಮೆ ಪುರಾವೆಗಳಿವೆ. ಒಟ್ಟಾರೆಯಾಗಿ, ಆಹಾರ ತಜ್ಞರು/ವೈದ್ಯರ ಮೇಲ್ವಿಚಾರಣೆಯಲ್ಲಿ ಸರಿಯಾಗಿ ಮಾಡಿದರೆ, ಇಂಟರ್ಮಿಟೆಂಟ್ ಉಪವಾಸವು ಕ್ಯಾನ್ಸರ್ ರೋಗಿಗಳಿಗೆ ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಅಪಾಯಕಾರಿಯಲ್ಲ. ಆದ್ದರಿಂದ, ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡುವಾಗ ಅದರ ಪ್ರಯೋಜನವನ್ನು ಹೆಚ್ಚಿಸಲು ಪ್ರಮಾಣಿತ ಕ್ಯಾನ್ಸರ್ ವಿರೋಧಿ ಚಿಕಿತ್ಸೆಗಳಿಗೆ ಸೇರಿಸಬಹುದು ಎಂದು ಪುರಾವೆಗಳು ಸೂಚಿಸುತ್ತವೆ.
ಆದರೆ, ಬೇವು ಮತ್ತು ಅರಿಶಿನದಂತಹ ಯಾವುದೇ ಪದಾರ್ಥಗಳು ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಅಥವಾ ಉಪಶಮನ ಮಾಡುತ್ತದೆ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಈ ಅಂಶಗಳು ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆಗಳಿಗೆ ಪೂರಕವಾಗಿ ಕ್ಯಾನ್ಸರ್ ನಿರ್ವಹಣೆಯಲ್ಲಿ ಸಹಾಯ ಮಾಡುತ್ತವೆ ಎಂದು ಅಧ್ಯಯನಗಳು ಸೂಚಿಸುತ್ತವೆ. .
ಫಾಕ್ಟ್ಲಿ ಈ ಹಿಂದೆ ವಿವಿಧ ಕ್ಯಾನ್ಸರ್ ಪರಿಹಾರಗಳ ಬಗ್ಗೆ ತಪ್ಪು ಮಾಹಿತಿಯನ್ನು ಹೊರಹಾಕುವ ಅನೇಕ ಫ್ಯಾಕ್ಟ್ – ಚೆಕ್ ಆರ್ಟಿಕಲ್ಸ್ ಬರೆದಿದೆ (ಇಲ್ಲಿ, ಇಲ್ಲಿ).
ಒಟ್ಟಾರೆಯಾಗಿ ಹೇಳುವುದಾದರೆ, ಸಿಧು ಅವರ ಪತ್ನಿಯ ಸ್ಟೇಜ್ -4 ಕ್ಯಾನ್ಸರ್ ಅನ್ನು ಆಹಾರ ಮತ್ತು ಇಂಟರ್ಮಿಟೆಂಟ್ ಉಪವಾಸದ ಮೂಲಕ ಗುಣಪಡಿಸಲಾಗಿದೆ ಎಂಬ ಸಿಧು ಅವರ ಹೇಳಿಕೆಯು ತಪ್ಪಾಗಿದೆ. ಏಕೆಂದರೆ ಆ ಕ್ಲೇಮ್ ಗಳನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹಾಗಾಗಿ ತದನಂತರ ಕ್ಯಾನ್ಸರ್ ವಿರುದ್ಧದ ಹೋರಾಡಲು ಅವರ ಪತ್ನಿ ಶಸ್ತ್ರಚಿಕಿತ್ಸೆಗಳು, ಕೀಮೋಥೆರಪಿ, ಹಾರ್ಮೋನ್ ಮತ್ತು ಸರಿಯಾದ ಚಿಕಿತ್ಸೆಗಳು, ಕಟ್ಟುನಿಟ್ಟಾದ ಆಹಾರ ಯೋಜನೆಯನ್ನು ಮಾಡಿದ್ದರು ಎಂದು ಸ್ಪಷ್ಟೀಕರಣ ನೀಡಿದರು.