ವಿಡಂಬನಾತ್ಮಕ ಲೇಖನವನ್ನು ‘ಬಡ್ವೈಸರ್ ಉದ್ಯೋಗಿ ಬಿಯರ್ ಟ್ಯಾಂಕ್ ಗಳಲ್ಲಿ ಮೂತ್ರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಶೇರ್ ಮಾಡಲಾಗಿದೆ

‘ಬಡ್‍ವೈಸರ್ ಉದ್ಯೋಗಿ 12 ವರ್ಷಗಳಿಂದ ಬಿಯರ್ ಟ್ಯಾಂಕ್‍ಗಳ ಒಳಗೆ ಮೂತ್ರ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ’ ಎಂಬ ಶೀರ್ಷಿಕೆಯೊಂದಿಗೆ ಲೇಖನದ ಸ್ಕ್ರೀನ್‍ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಪೋಸ್ಟ್ ನಲ್ಲಿ ಮಾಡಿದ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಬಡ್ವೈಸರ್ ಉದ್ಯೋಗಿ 12 ವರ್ಷಗಳಿಂದ ಬಿಯರ್ ಟ್ಯಾಂಕ್‍ಗಳ ಒಳಗೆ ಮೂತ್ರ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ನಿಜಾಂಶ: ಮೊದಲು, ವಿಡಂಬನಾತ್ಮಕ ವೆಬ್‍ಸೈಟ್ ‘ಫೂಲಿಶ್ ಹ್ಯೂಮರ್’ (ಮೂರ್ಖ ಹಾಸ್ಯ) ಅಂತಹ ಮಾಹಿತಿಯನ್ನು ಪೋಸ್ಟ್ ಮಾಡಿದೆ. ಆ ವೆಬ್‍ಸೈಟ್‍ನಲ್ಲಿನ ಲೇಖನಗಳ ವಿಷಯವು ಕೇವಲ ‘ಮನರಂಜನೆ’ ಗಾಗಿರುತ್ತದೆ ಮತ್ತು ಅವು ಕಾಲ್ಪನಿಕವಾಗಿರುತ್ತವೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಹೇಳಿಕೆ ತಪ್ಪಾಗಿದೆ.

ಸ್ಕ್ರೀನ್ ಶಾಟ್ ನಲ್ಲಿ ಕಂಡುಬರುವ ಕೀವರ್ಡ್ ಗಳೊಂದಿಗೆ ನಾವು ಗೂಗಲ್ ನಲ್ಲಿ ಹುಡುಕಿದಾಗ, ಬಡ್ವೈಸರ್ ಉದ್ಯೋಗಿ ವಾಲ್ಟರ್ ಪೊವೆಲ್ (ಹೆಸರನ್ನು ಬದಲಾಯಿಸಲಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ) 12 ವರ್ಷಗಳಿಂದ ಬಿಯರ್ ಟ್ಯಾಂಕ್‍ಗಳ ಒಳಗೆ ಮೂತ್ರ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನುವ ಕಥೆಯನ್ನು ಅನೇಕ ಜಾಲತಾಣಗಳು ಪ್ರಕಟಿಸಿರುವುದು ಕಂಡುಬಂದಿದೆ. ಆದರೆ ಈ ಲೇಖನವನ್ನು ಮೊದಲು 2020 ರ ಮೇ 08 ರಂದು ‘ಫೂಲಿಶ್ ಹ್ಯೂಮರ್’ (ಮೂರ್ಖ ಹಾಸ್ಯ) ಎಂಬ ವೆಬ್ಸೈಟ್ ಪ್ರಕಟಿಸಿದೆ.

ಲೇಖನವನ್ನು ನೋಡಿದಾಗ, ಪುಟದ ಕೆಳಭಾಗದಲ್ಲಿ, ಜಾಲತಾಣ ಒಂದು ‘ಹಾಸ್ಯಮಯ’ ಪುಟವಾಗಿದೆ ಮತ್ತು ಅದರ ಏಕೈಕ ಉದ್ದೇಶವೆಂದರೆ ‘ಮನರಂಜನೆ’ ಎಂದು ಹೇಳಲಾಗಿದೆ. ಅಲ್ಲದೆ, ಜಾಲತಾಣದಲ್ಲಿರುವ ವಿಷಯವು ‘ಕಟ್ಟು ಕಥೆ’ಯಾಗಿದೆ ಮತ್ತು ಅದು ವಾಸ್ತವಕ್ಕೆ ಹೊಂದಿಕೆಯಾಗುವುದಿಲ್ಲ.

ಲೇಖನದಲ್ಲಿನ ಫೋಟೋವನ್ನು ರಿವರ್ಸ್ ಇಮೇಜ್ ಹುಡುಕಾಟಕ್ಕೆ ಒಳಪಡಿಸಿದಾಗ, 2013 ರಲ್ಲಿ ಪ್ರಕಟವಾದ ‘ಟೈಮ್ಸ್ ಯೂನಿಯನ್’ ಲೇಖನವು ಫಲಿತಾಂಶಗಳಲ್ಲಿ ಕಂಡುಬಂದಿದೆ. ಫೋಟೋವು ‘ಅಸೋಸಿಯೇಟೆಡ್ ಪ್ರೆಸ್’ ನ ಕೃಪೆ ಎಂದು ತಿಳಿಸಲಾಗಿದೆ ಮತ್ತು ಫೋಟೋದಲ್ಲಿರುವ ವ್ಯಕ್ತಿ ನ್ಯೂಯಾರ್ಕ್‍ನ ಲೈಸಾಂಡರ್‍ ನಲ್ಲಿರುವ ಬಡ್‍ವೈಸರ್ ಬ್ರೂವರಿಯ ಜನರಲ್ ಮ್ಯಾನೇಜರ್ ನಿಕ್ ಮಿಲ್ಸ್ ಎಂಬ ವಿವರಣೆಯನ್ನು ಅಲ್ಲಿ ನೀಡಿದ್ದಾರೆ.

ಒಟ್ಟಾರೆ ಹೇಳುವುದಾದರೆ, ವಿಡಂಬನಾತ್ಮಕ ವೆಬ್ಸೈಟ್ ‘ಫೂಲಿಶ್ ಹ್ಯೂಮರ್’ ಪ್ರಕಟಿಸಿದ ಲೇಖನವನ್ನು ಬಡ್ವೈಸರ್ ಉದ್ಯೋಗಿ 12 ವರ್ಷಗಳಿಂದ ಬಿಯರ್ ಟ್ಯಾಂಕ್ ಗಳಲ್ಲಿ ಮೂತ್ರ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಹಂಚಿಕೊಳ್ಳಲಾಗಿದೆ.