ಆಗಸ್ಟ್ 2024 ರ ಇಸ್ರೇಲಿ ದಾಳಿಯಲ್ಲಿ ಗಾಯಗೊಂಡ 15 ವರ್ಷದ ದಿಯಾ ಅಲ್-ಅದಿನಿಯ ಫೋಟೋವನ್ನು ಹಮಾಸ್ ಉಗ್ರಗಾಮಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಕೈಗಳಿಲ್ಲದ ವ್ಯಕ್ತಿ ಬಿಳಿ ಟೇಪ್‌ನಲ್ಲಿ ಸುತ್ತಿಕೊಂಡಿರುವಂತೆ ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ). ಆತ ಗಾಜಾದ ಹಮಾಸ್ ಉಗ್ರಗಾಮಿ ಮೊಹಮ್ಮದ್ ಮಹ್ರೂಫ್ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. 07 ಅಕ್ಟೋಬರ್ 2023 ರಂದು, ಇಸ್ರೇಲಿ ಮಕ್ಕಳನ್ನು ಕೊಂದು ಅವರ ದೇಹಗಳನ್ನು ಒಲೆಯಲ್ಲಿ ಬೇಯಿಸುವ ಮತ್ತು ಕೆಲವರನ್ನು ಜೀವಂತವಾಗಿ ಸುಡುವಂತಹ ಭಯಾನಕ ಕೃತ್ಯಗಳಿಗೆ ಆತ ಕಾರಣ. ಇಸ್ರೇಲ್ ಅವನನ್ನು ವಶಪಡಿಸಿಕೊಂಡು, ಅವನ ತೋಳುಗಳನ್ನು ಕತ್ತರಿಸಿ ಜೀವಂತವಾಗಿ ಬಿಟ್ಟಿದೆ ಎಂದು ಪೋಸ್ಟ್ನಲ್ಲಿ ಆರೋಪಿಸಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: 2023 ರಲ್ಲಿ ಇಸ್ರೇಲಿ ಮಕ್ಕಳನ್ನು ಕೊಂದ ಆರೋಪದಲ್ಲಿ ಗಾಜಾದ ಹಮಾಸ್ ಉಗ್ರಗಾಮಿ ಮೊಹಮ್ಮದ್ ಮಹ್ರೂಫ್ ನ ತೋಳುಗಳನ್ನು ಇಸ್ರೇಲ್ ತುಂಡರಿಸಿ ಅವನನ್ನು ಜೀವಂತವಾಗಿ ಬಿಟ್ಟಿತು.

ಫ್ಯಾಕ್ಟ್: ವೈರಲ್ ಚಿತ್ರದಲ್ಲಿರುವುದು ಹಮಾಸ್ ಉಗ್ರಗಾಮಿ ಮೊಹಮ್ಮದ್ ಮಹ್ರೂಫ್ ಅಲ್ಲ. ಬದಲಾಗಿ 15 ವರ್ಷದ ಪ್ಯಾಲೆಸ್ತೀನ್ ದಿಯಾ ಅಲ್-ಅದಿನಿಯದ್ದು. 13 ಆಗಸ್ಟ್ 2024 ರಂದು ಗಾಜಾದ ಅಲ್-ಕ್ವಾಸ್ಟಲ್ ಟವರ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್ ಅನ್ನು ಗುರಿಯಾಗಿಸಿಕೊಂಡ ಇಸ್ರೇಲಿ ಸೇನೆಯ ದಾಳಿಯಲ್ಲಿ ದಿಯಾ ಅಲ್-ಅದಿನಿ ತೀವ್ರವಾಗಿ ಗಾಯಗೊಂಡರು. ವೈದ್ಯಕೀಯ ಕೊರತೆಯಿಂದಾಗಿ ವೈದ್ಯರು ಜೀವ ಉಳಿಸಲು ಕೈಕಾಲುಗಳನ್ನು ಕತ್ತರಿಸಬೇಕಾಯಿತು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ಚಿತ್ರದ ಗೂಗಲ್ ಲೆನ್ಸ್ ಹುಡುಕಾಟವು ಆಗಸ್ಟ್ 2024 ರ ಹಲವಾರು ವರದಿಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಾರಣವಾಯಿತು. ವೈರಲ್ ಚಿತ್ರದಲ್ಲಿ ಅದೇ ಹುಡುಗನನ್ನು 15 ವರ್ಷದ ಪ್ಯಾಲೆಸ್ಟೀನಿಯನ್ ದಿಯಾ ಅಲ್-ಅದಿನಿ ಎಂದು ಗುರುತಿಸಲಾಗಿದೆ. 13 ಆಗಸ್ಟ್ 2024 ರಂದು ಇಸ್ರೇಲಿ ದಾಳಿಯ ನಂತರ ಗಾಯಗೊಂಡ ಆತನ ಎರಡೂ ಕೈಗಳನ್ನು ಕತ್ತರಿಸಲಾಗಿದೆ.  ಇಸ್ರೇಲಿ ಸ್ಥಳಾಂತರಿಸುವ ಆದೇಶದ ಕಾರಣ ಅದಿನಿಯನ್ನು ಅಲ್-ಅಕ್ಸಾ ಆಸ್ಪತ್ರೆಯಿಂದ ವರ್ಗಾಯಿಸಲಾಯಿತು. ನಂತರ ಅವರು ಅಮೇರಿಕನ್ ಫೀಲ್ಡ್ ಆಸ್ಪತ್ರೆಯಲ್ಲಿ ಆಶ್ರಯ ಪಡೆದರು. ಅದಿನಿಯಂತಹ ಅನೇಕ ಪ್ಯಾಲೆಸ್ಟೀನಿಯಾದವರು ಈ ಸಂಘರ್ಷದ ಸಮಯದಲ್ಲಿ ಅವ್ಯವಸ್ಥೆಯ ನಡುವೆ ವೈದ್ಯಕೀಯ ಆರೈಕೆ ಮತ್ತು ಸುರಕ್ಷತೆಯನ್ನು ಕಾಪಾಡಲು ಸ್ಥಳಾಂತರಗೊಂಡರು. 

ಈ ಕುರಿತಾದ ಹೆಚ್ಚಿನ ತನಿಖೆಯು ನಮ್ಮನ್ನು ಅಲಾಮಿ ಇಮೇಜ್ ವೆಬ್‌ಸೈಟ್‌ಗೆ ಕರೆದೊಯ್ಯಿತು, ಅಲ್ಲಿ ಅದೇ ಹುಡುಗನ ಫೋಟೋವನ್ನು ಅಪ್‌ಲೋಡ್ ಮಾಡಲಾಗಿದೆ (ಇಲ್ಲಿ ಮತ್ತು ಇಲ್ಲಿ). “ಪ್ಯಾಲೆಸ್ಟೀನಿಯನ್ ಹದಿಹರೆಯದ ದಿಯಾ ಅಲ್-ಅದಿನಿ, ಅಲ್-ಕ್ವಾಸ್ಟಲ್‌ನಲ್ಲಿನ ಅಪಾರ್ಟ್ಮೆಂಟ್, ಡೇರ್ ಅಲ್ ಬಲಾಹ್, ಗಾಜಾದ ಪೂರ್ವಕ್ಕೆ ಗೋಪುರಗಳನ್ನು ಗುರಿಯಾಗಿಸಿಕೊಂಡ ಇಸ್ರೇಲಿ ಸೇನೆಯ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಆತ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದಾನೆ. ಆಸ್ಪತ್ರೆಗಳಲ್ಲಿನ ವೈದ್ಯಕೀಯ ಕೊರತೆಯಿಂದಾಗಿ, ವೈದ್ಯರು ಆತನ  ಜೀವವನ್ನು ಉಳಿಸಲು ರೋಗಿಗಳ ಕೈಕಾಲುಗಳನ್ನು ಕತ್ತರಿಸಬೇಕಾಯಿತು ‘’ಎಂದು ಡೆಸ್ಕ್ರಿಪ್ಟಿವ್ನ್ನಲ್ಲಿ ಹೇಳಲಾಗಿದೆ.

ಅದೇ ಚಿತ್ರವನ್ನು ನಾವು ಗೆಟ್ಟಿ ಇಮೇಜಸ್ ವೆಬ್‌ಸೈಟ್‌ನಲ್ಲಿಯೂ ಕಂಡುಕೊಂಡಿದ್ದೇವೆ ಇಲ್ಲಿ: “ಇಸ್ರೇಲಿ ದಾಳಿಯಲ್ಲಿ ಪ್ಯಾಲೇಸ್ಟಿನಿಯನ್ ಹದಿಹರೆಯದವರು ಎರಡೂ ತೋಳುಗಳನ್ನು ಕಳೆದುಕೊಂಡಿದ್ದಾರೆ. ಗಾಜಾದಲ್ಲಿ ವೈದ್ಯಕೀಯ ಬಿಕ್ಕಟ್ಟಿನ ಮಧ್ಯೆ ಉಳಿವಿಗಾಗಿ ಹೋರಾಡುತ್ತಿದ್ದಾರೆ.”  ಎಂದು ಹೇಳಲಾಗಿದೆ. ಅವರನ್ನು ಇಲ್ಲಿಯೂ ಹದಿಹರೆಯದ ದಿಯಾ ಅಲ್-ಅದಿನಿ ಎಂದು ಗುರುತಿಸಲಾಗಿದೆ ಹೊರತು ಗಾಜಾದ ಹಮಾಸ್ ಉಗ್ರಗಾಮಿ ಮೊಹಮ್ಮದ್ ಮಹ್ರೂಫ್ ಎಂದು ಹೇಳಿಲ್ಲ. 

ಮೊಹಮ್ಮದ್ ಮಹ್ರೂಫ್ ಎಂಬ ಹಮಾಸ್ ಉಗ್ರಗಾಮಿಗಾಗಿ ನಾವು ತನಿಖೆ ನಡೆಸಿದಾಗ, 07 ಅಕ್ಟೋಬರ್ 2023 ರಿಂದ ಇಸ್ರೇಲ್ ಕೊಂದಿರುವ ಉಗ್ರಗಾಮಿಗಳು, ಹಿಜ್ಬುಲ್ಲಾ ಮತ್ತು ಹಮಾಸ್ ಸದಸ್ಯರ ಪಟ್ಟಿಗಳನ್ನು ಒಳಗೊಂಡಿರುವ ಸುದ್ದಿ ವರದಿಗಳನ್ನು (ಇಲ್ಲಿ ಮತ್ತು ಇಲ್ಲಿ) ನಾವು ಕಂಡುಕೊಂಡಿದ್ದೇವೆ. ಆದರೆ ಈ ಪಟ್ಟಿಗಳಲ್ಲಿ ಎಲ್ಲಿಯೂ ಮೊಹಮ್ಮದ್ ಮಹ್ರೂಫ್ ಹೆಸರಿನ ಉಗ್ರಗಾಮಿ ಹೆಸರು ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಆಗಸ್ಟ್ 2024 ರ ಇಸ್ರೇಲಿ ದಾಳಿಯಲ್ಲಿ ಗಾಯಗೊಂಡ 15 ವರ್ಷದ ದಿಯಾ ಅಲ್-ಅದಿನಿಯ ಫೋಟೋವನ್ನು ಹಮಾಸ್ ಉಗ್ರಗಾಮಿ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.