ಬಾಂಗ್ಲಾದೇಶಿಯರು ಭಾರತದೊಳಗೆ ನುಸುಳುತ್ತಿದ್ದಾರೆ ಎನ್ನುವ ಸಂಬಂಧವಿಲ್ಲದ ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ

ಪ್ರಸ್ತುತ ಬಾಂಗ್ಲಾದೇಶದ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಅಸ್ಸಾಂ ಗಡಿ ಮೂಲಕ ಭಾರತಕ್ಕೆ ಬಾಂಗ್ಲಾದೇಶಿಗಳು ನುಸುಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಭದ್ರತಾ ಬೇಲಿಯ ಎರಡೂ ಬದಿಗಳಲ್ಲಿ ಅನೇಕ ಜನರು ನಿಂತಿರುವುದನ್ನು ನೀವು ನೋಡಬಹುದು. ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಬಾಂಗ್ಲಾದೇಶದ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ, ಅಸ್ಸಾಂ ಗಡಿಯ ಮೂಲಕ ಅನೇಕ ಜನರು ಭಾರತಕ್ಕೆ ಪ್ರವೇಶಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. 

ಫ್ಯಾಕ್ಟ್: ಈ ವಿಡಿಯೋ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಎರಡು ದೇಶಗಳ ಜನರು ಭೇಟಿಯಾಗುವ ‘ಭಾರತ-ಬಾಂಗ್ಲಾದೇಶ ಮಿಲನ್ ಮೇಳ’ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಈ ಸಮಾರಂಭವನ್ನು ಪ್ರತಿ ವರ್ಷ ಬೈಸಾಖಿ ದಿನದಂದು ನಡೆಸಲಾಗುತ್ತದೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧವಾಗಿ  ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿವೆ. ಈ ಗಲಭೆಯಲ್ಲಿ ಈಗಾಗಲೇ ಹಲವಾರು ಸಾವು- ನೋವುಗಳ ಸುದ್ದಿಗಳು ವರದಿ ಆಗಿವೆ. ಈ ಹಿನ್ನೆಲೆಯಲ್ಲಿ, ಕೆಲವು ಬಾಂಗ್ಲಾದೇಶಿಗಳು ಬಂಗಾಳದ ಗಡಿಯ ಮೂಲಕ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸಿದರು ಆದರೆ ಬಿಎಸ್ಎಫ್ (ಇಲ್ಲಿ ಮತ್ತು ಇಲ್ಲಿ) ಅವರನ್ನು ಹಿಂದಕ್ಕೆ ಕಳುಹಿಸದರು ಎಂದು ಸುದ್ದಿಗಳು ವರದಿ ಮಾಡಿವೆ. 

ಆದರೆ, ಈ ಹಿನ್ನೆಲೆಯಲ್ಲಿ ಶೇರ್ ಆಗುತ್ತಿರುವ ವಿಡಿಯೋಗೂ ಬಾಂಗ್ಲಾದೇಶದ ಸದ್ಯದ ಸ್ಥಿತಿಗೂ ಯಾವುದೇ ಸಂಬಂಧವಿಲ್ಲ. ಕಳೆದ ಕೆಲವು ವರ್ಷಗಳಿಂದ ಈ ವಿಡಿಯೋ ಅಂತರ್ಜಾಲದಲ್ಲಿ ಲಭ್ಯವಿದೆ.  ಪ್ರಸ್ತುತ ಹಂಚಿಕೊಂಡ ವೀಡಿಯೊದ ಸ್ಕ್ರೀನ್‌ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಅದೇ ವೀಡಿಯೊವನ್ನು 2018 ರಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

‘ಇಂಡಿಯಾ ಬಾಂಗ್ಲಾದೇಶ ಮಿಲನ್ ಮೇಳ’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ ದೊರೆತ ಮಾಹಿತಿಯ ಪ್ರಕಾರ ಪ್ರತಿ ವರ್ಷ ಬೈಸಾಖಿಯ ದಿನದಂದು ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಎರಡು ದೇಶಗಳ ಜನರು ಭೇಟಿಯಾಗುವ ಸಮಾರಂಭವನ್ನು ‘ಭಾರತ-ಬಾಂಗ್ಲಾದೇಶ ಮಿಲನ್ ಮೇಳ’ ಎಂದು ಕರೆಯಲಾಗುತ್ತದೆ.

ಈ ಸಮಾರಂಭವನ್ನು ಪ್ರತಿ ವರ್ಷ ನಡೆಯುತ್ತದೆ. ಸಮಾರಂಭದ ಹಿಂದಿನ ಸುದ್ದಿಗಳು ಮತ್ತು ವೀಡಿಯೊಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಇದೀಗ ಶೇರ್ ಆಗುತ್ತಿರುವ ವೀಡಿಯೋದಲ್ಲಿ ಜನರು ಬೇಲಿಯ ಎರಡೂ ಬದಿಯಲ್ಲಿ ನಿಂತಿರುವುದನ್ನು ಕಾಣಬಹುದು. ಈ ಮಾಹಿತಿಯ ಆಧಾರದ ಮೇಲೆ, ಶೇರ್ ಆಗುತ್ತಿರುವ ವಿಡಿಯೋಗೂ  ಬಾಂಗ್ಲಾದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಗಲಭೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಕೊನೆಯದಾಗಿ ಹೇಳುವಾದದದರೆ, ಬಾಂಗ್ಲಾದೇಶಿಗಳು ಭಾರತದೊಳಗೆ ನುಸುಳುತ್ತಿದ್ದಾರೆ ಎಂದು ಹೇಳುವ ಸಂಬಂಧವಿಲ್ಲದ ಹಳೆಯ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.