ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2023 ರಲ್ಲಿ ಜ್ಯೋತಿ ಯರ್ರಾಜಿ ಚಿನ್ನದ ಪದಕವನ್ನು ಗೆದ್ದ ಹಳೆಯ ವೀಡಿಯೊವನ್ನು ಏಷ್ಯನ್ ಗೇಮ್ಸ್ 2023 ರ ಸರಣಿಯದ್ದು ಎಂದು ಶೇರ್ ಮಾಡಲಾಗಿದೆ

ಆಂಧ್ರಪ್ರದೇಶದ ಭಾರತದ ಅಥ್ಲೀಟ್ ಜ್ಯೋತಿ ಯರ್ರಾಜಿ 2023 ರ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. 2023 ರ ಏಷ್ಯನ್ ಗೇಮ್ಸ್‌ನ 100 ಮೀಟರ್ ಹರ್ಡಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಜ್ಯೋತಿ ಯರ್ರಾಜಿ ಪಾತ್ರರಾಗಿದ್ದಾರೆ ಎನ್ನುವ ಕೆಲವು ಪೋಸ್ಟ್‌ಗಳು ಹರಿದಾಡುತ್ತಿದ್ದು. ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಅನ್ನು  ಪರಿಶೀಲಿಸೋಣ.

ಕ್ಲೇಮ್ : ಭಾರತದ ಅಥ್ಲೀಟ್ ಜ್ಯೋತಿ ಯರ್ರಾಜಿ   2023 ರ ಏಷ್ಯನ್ ಗೇಮ್ಸ್ ನ 100 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಫ್ಯಾಕ್ಟ್ : ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊವು ಜುಲೈ 2023 ರಲ್ಲಿ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2023 ರಲ್ಲಿ ನಡೆದ 100 ಮೀ ಹರ್ಡಲ್ಸ್ ಈವೆಂಟ್ ಅನ್ನು ತೋರಿಸುತ್ತದೆ. ಜ್ಯೋತಿ ಯರ್ರಾಜಿ ಅವರು ಏಷ್ಯನ್ ಗೇಮ್ಸ್ 2023 ರಲ್ಲಿ ಭಾಗವಹಿಸಲಿರುವ ಮಹಿಳೆಯರ 100 ಮೀ ಹರ್ಡಲ್ಸ್ ಓಟವು ಇನ್ನೂ ಪ್ರಾರಂಭವಾಗಿರಲಿಲ್ಲ. ಏಷ್ಯನ್ ಗೇಮ್ಸ್ 2023 ರಲ್ಲಿ ಅವರ ಮೊದಲ ರೇಸ್ ಅನ್ನು 30 ಸೆಪ್ಟೆಂಬರ್ 2023 ರಂದು ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೀಡಿಯೋವನ್ನು ಕೂಲಂಕುಷವಾಗಿ ಗಮನಿಸಿದಾಗ, ಓಟದ ಆರಂಭಕ್ಕೂ ಮುನ್ನ ಅಥ್ಲೀಟ್‌ಗಳ ಹಿಂದೆ ಇರಿಸಲಾದ ಬೋರ್ಡ್‌ನಲ್ಲಿ ‘ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023’ ಎಂದು ಬರೆಯಲಾಗಿದೆ. ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ವೀಡಿಯೊವನ್ನು ಹುಡುಕಿದಾಗ, ಜುಲೈ 2023 ರಲ್ಲಿ ಸಾಯಿ ಮೀಡಿಯಾ ಮತ್ತು ಇತರ ಸ್ಪೋರ್ಟ್ಸ್ ಫೌಂಡೇಶನ್‌ಗಳು ಟ್ವೀಟ್ ಮಾಡಿದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ರಿಲಯನ್ಸ್ ಫೌಂಡೇಶನ್ ಯೂತ್ ಸ್ಪೋರ್ಟ್ಸ್ ಅದೇ ವೀಡಿಯೊವನ್ನು 2023 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 13.09 ಸೆಕೆಂಡುಗಳ ಸಮಯದೊಂದಿಗೆ “100 ಮೀ ಹರ್ಡಲ್ಸ್ ಈವೆಂಟ್‌ನಲ್ಲಿ ಚಿನ್ನವನ್ನು ಗೆದ್ದುಕೊಂಡರು” ಎಂಬ ವಿವರಣೆಯೊಂದಿಗೆ ಪ್ರಕಟಿಸಿದೆ.

2023 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜ್ಯೋತಿ ಯರ್ರಾಜಿ 100 ಮೀ ಹರ್ಡಲ್ಸ್ ಸ್ಪರ್ಧೆಯನ್ನು 13.09 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಹೆಚ್ಚುವರಿಯಾಗಿ, ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಜ್ಯೋತಿ ಯರ್ರಾಜಿ 13:09 ಸೆಕೆಂಡ್ ನಲ್ಲಿ ಓಟವನ್ನು ಪೂರ್ಣಗೊಳಿಸಿದ್ದಾರೆ ಎಂದು ಸ್ಕೋರ್‌ಬೋರ್ಡ್ ತೋರಿಸುತ್ತದೆ.  2023 ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜ್ಯೋತಿ ಯರ್ರಾಜಿ ಚಿನ್ನದ ಪದಕವನ್ನು ಗಳಿಸಿದ ಬಗ್ಗೆ ವರದಿ ಮಾಡುವ ಲೇಖನಗಳು ಮತ್ತು ವೀಡಿಯೊಗಳನ್ನು ಹಲವಾರು ಸುದ್ದಿ ಸೈಟ್‌ಗಳು ಪ್ರಕಟಿಸಿವೆ.

ಏಷ್ಯನ್ ಗೇಮ್ಸ್ 2023 ಅನ್ನು ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8,  ರವರೆಗೆ ಆಯೋಜಿಸಲಾಗಿದೆ. ಆದರೆ, ಮಹಿಳೆಯರ 100 ಮೀಟರ್ ಹರ್ಡಲ್ಸ್ ಓಟ ಇನ್ನೂ ಆರಂಭವಾಗಿರಲಿಲ್ಲ. ಏಷ್ಯನ್ ಗೇಮ್ಸ್ 2023 ರಲ್ಲಿ ಜ್ಯೋತಿ ಯರ್ರಾಜಿ ಭಾಗವಹಿಸಲಿರುವ ಮಹಿಳೆಯರ 100 ಮೀ ಹರ್ಡಲ್ಸ್ ಓಟವನ್ನು 30 ಸೆಪ್ಟೆಂಬರ್ 2023 ರಂದು ನಿಗದಿಪಡಿಸಲಾಗಿದೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊ 100 ಮೀ ಹರ್ಡಲ್ಸ್ ಸ್ಪರ್ಧೆಯನ್ನು ತೋರಿಸುತ್ತದೆ ಎಂದು ತೀರ್ಮಾನಿಸಬಹುದು. ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರ ಸಮಯದಲ್ಲಿ ಆಯೋಜಿಸಲಾಗಿದೆ, ಏಷ್ಯನ್ ಗೇಮ್ಸ್ 2023 ರ ಸಮಯದಲ್ಲಿ ಅಲ್ಲ.

ಚೀನಾದಲ್ಲಿ ನಡೆದ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಜ್ಯೋತಿ ಯರ್ರಾಜಿ  ಬೆಳ್ಳಿ ಪದಕ ಗೆದ್ದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2023 ರಲ್ಲಿ ಜ್ಯೋತಿ ಯರ್ರಾಜಿ ಚಿನ್ನದ ಪದಕವನ್ನು ಗೆದ್ದಿರುವ ವೀಡಿಯೊವನ್ನು ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಿಂದ ಹಂಚಿಕೊಳ್ಳಲಾಗಿದೆ.