ಎಎಪಿಯ ಸಂಬಳ ಸಹಿತ ಕಾರ್ಯಕರ್ತರ ಹಳೆಯ ವಿಡಿಯೋವನ್ನು ರೈತರ ಪ್ರತಿಭಟನೆಯದ್ದು ಎಂದು ಹಂಚಿಕೊಳ್ಳಲಾಗಿದೆ!

ಎಎಪಿ ನಾಯಕರು ಸಭೆಗೆ ಹಾಜರಾಗಲು ಮೊದಲೇ ನಿಗದಿ ಮಾಡಿದ್ದ ಮೊತ್ತವನ್ನು ಪಾವತಿಸುತ್ತಿಲ್ಲವೆಂದು ದೂರುತ್ತಿರುವ ವೀಡಿಯೊವನ್ನು ಈಗ ನಡೆಯುತ್ತಿರುವ ರೈತರ ಪ್ರತಿಭಟನೆಯದ್ದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ  ಸತ್ಯಾ-ಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ಎಎಪಿ ಪಾವತಿಸಿದ ಕಾರ್ಯಕರ್ತರನ್ನು ರೈತರ ಪ್ರತಿಭಟನೆಗೆ ನೀಡುತ್ತಿದೆ.

ಸತ್ಯ: ಇದು ಹಳೆಯ ವಿಡಿಯೋ ಆಗಿದ್ದು, 2018ರಲ್ಲಿ ಹರಿಯಾಣದ ಹಿಸಾರ್‌ನಲ್ಲಿ ನಡೆದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಭೆಯ ನಂತರ ಇದು ವೈರಲ್ ಆಗಿದೆ. ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಗೂ ಈ ವೀಡಿಯೊಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿನ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, 2018ರಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದ್ದ ವಿಡಿಯೋ ದೊರೆತಿದೆ. ಅದು ಪೋಸ್ಟ್‌ನಲ್ಲಿನ ವೀಡಿಯೊಗೆ ಹೋಲುವ ದೃಶ್ಯಗಳನ್ನು ಒಳಗೊಂಡಿದೆ.

ಸಂಬಂಧಿತ ಕೀವರ್ಡ್‌ಗಳೊಂದಿಗೆ ಯೂಟ್ಯೂಬ್‌ನಲ್ಲಿ ಮತ್ತಷ್ಟು ಹುಡುಕಿದಾಗ, 2018ರ ಸುದ್ದಿ ವೀಡಿಯೊ ದೊರೆತಿದೆ. ಅದು ವೈರಲ್ ವೀಡಿಯೊದಲ್ಲಿ ಕಂಡುಬಂದಿರುವ ಜನರಲ್ಲಿ ಒಬ್ಬರ ದೃಶ್ಯಗಳನ್ನು ಹೊಂದಿದೆ. ಈ ಸುದ್ದಿ ವಿಡಿಯೋ ಪ್ರಕಾರ, ಹಿಸಾರ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸಭೆಯ ನಂತರ, ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಸಭೆಗೆ ಹಾಜರಾದ ಕಾರ್ಯಕರ್ತರು ಎಎಪಿ ನಾಯಕರು ಮೊದಲೇ ನಿಗದಿ ಮಡಿದ್ದ ಮೊತ್ತವನ್ನು ಪಾವತಿಸಲು ವಿಫಲರಾಗಿದ್ದಾರೆ ಎಂದು ದೂರಿದ್ದಾರೆ.

ಎಎಪಿ ಸೋಷಿಯಲ್ ಮೀಡಿಯಾ ತಂಡದ ಸದಸ್ಯರೊಬ್ಬರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿಯ ಮತ್ತೊಂದು ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ಅವರ ಟ್ವೀಟ್‌ನಲ್ಲಿ ವೈರಲ್ ವೀಡಿಯೊದಲ್ಲಿ ಅದೇ ವ್ಯಕ್ತಿಯ ಬೇರೊಂದು ವಿಡಿಯೋವನ್ನು ಎಡಿಟ್‌ ಮಾಡಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಎಎಪಿ ವಿರುದ್ಧದ ಆರೋಪಗಳನ್ನು ವೀಡಿಯೊದಲ್ಲಿ ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೂ, ವೈರಲ್‌ ಆಗಿರುವ ವಿಡಿಯೋಗೂ, ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಎಎಪಿ ಸಂಬಳ ಪಡೆಯುವ ಕಾರ್ಯಕರ್ತರ ಹಳೆಯ ವೀಡಿಯೋವನ್ನು ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಯದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.