ಜಮ್ಮುವಿನ ಹಳೆಯ ವೀಡಿಯೊವನ್ನು ಕರ್ನಾಟಕದ ಮದರ್ಸಾ ವಿದ್ಯಾರ್ಥಿಗಳು ಮೊಹಮ್ಮದ್ ಅಸ್ಲಾಂ ಹುಸೇನ್ ಅವರನ್ನು ತಮ್ಮ ಪ್ರಧಾನಿ ಎಂದು ಉಲ್ಲೇಖಿಸುವ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ

ಕರ್ನಾಟಕದ ಇಸ್ಲಾಮಿಕ್ ಶಾಲೆಯ (ಮದರಸಾ) ವಿದ್ಯಾರ್ಥಿಗಳನ್ನು ವರದಿಗಾರರೊಬ್ಬರು ದೇಶದ ಪ್ರಧಾನಿಯ ಬಗ್ಗೆ ಕೇಳಿದಾಗ, ಅವರು ಅನಾಮಧೇಯ ವ್ಯಕ್ತಿ ಮೊಹಮ್ಮದ್ ಅಸ್ಲಾಂ ಹುಸೇನ್ ಅವರನ್ನು ತಮ್ಮ ಪ್ರಧಾನಿ ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋವನ್ನು ಶೇರ್ ಮಾಡಿರುವ ಪೋಸ್ಟ್‌ನಲ್ಲಿ ಇದು ಸಿದ್ದರಾಮಯ್ಯ ಸರ್ಕಾರದ ಹೊಸ ಶಿಕ್ಷಣ ನೀತಿಯೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಹಾಗಾದರೆ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಕರ್ನಾಟಕದ ಮದರ್ಸಾ ವಿದ್ಯಾರ್ಥಿಗಳು ಮೊಹಮ್ಮದ್ ಅಸ್ಲಾಂ ಹುಸೇನ್ ಅವರನ್ನು ಭಾರತದ ಪ್ರಧಾನಿ ಎಂದು ಉಲ್ಲೇಖಿಸುತ್ತಿರುವ ವೀಡಿಯೊ.

ಫ್ಯಾಕ್ಟ್: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪತ್ರಕರ್ತರೊಬ್ಬರು ವಿದ್ಯಾರ್ಥಿಗಳನ್ನು ಸಂದರ್ಶಿಸುತ್ತಿರುವ ವಿಡಿಯೋ ಇದಾಗಿದೆ. ಆಗಸ್ಟ್ 2022 ರಲ್ಲಿ ಜಮ್ಮುವಿನ ಪತ್ರಕರ್ತ ಅಮಿತ್ ಶರ್ಮಾ ಅವರು ಈ ವೀಡಿಯೊವನ್ನು ಸೆರೆಹಿಡಿದಿದ್ದಾರೆ. ಈ ವೀಡಿಯೊಗೂ  ಕರ್ನಾಟಕದ  ಸಿದ್ದರಾಮಯ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳ ರಿವರ್ಸ ಇಮೇಜ್  ಹುಡುಕಾಟದಲ್ಲಿ ಮತ್ತು ಅಂತರ್ಜಾಲದಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕುವ ಮೂಲಕ, 2022 ರಲ್ಲಿ ಅಮಿತ್ ಶರ್ಮಾ ಎಂಬ ಪತ್ರಕರ್ತ ಪ್ರಕಟಿಸಿದ ಅದೇ ವೀಡಿಯೊವನ್ನು ಹಂಚಿಕೊಳ್ಳುವ ಫೇಸ್‌ಬುಕ್ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಜಮ್ಮುವಿನ ಪತ್ರಕರ್ತ ಅಮಿತ್ ಶರ್ಮಾ, ಈ ವೀಡಿಯೊವನ್ನು 12 ಆಗಸ್ಟ್ 2022 ರಂದು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದರು. ಜಮ್ಮುವಿನ ರಾಜೌರಿ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 7 ನೇ ತರಗತಿಯ ಮಕ್ಕಳಿಗೆ ದೇಶದ ಪ್ರಧಾನಿಯ ಹೆಸರೇ ತಿಳಿದಿಲ್ಲ ಎಂದು ಅಮಿತ್ ಶರ್ಮಾ ಅವರು ವೀಡಿಯೊದಲ್ಲಿ ವರದಿ ಮಾಡಿ,  ಅನಾಮಧೇಯ ವ್ಯಕ್ತಿ ಮೊಹಮ್ಮದ್ ಅಸ್ಲಾಂ ಹುಸೇನ್ ಅವರ ಪ್ರಧಾನಿ ಎಂದು ಅವರು ಉಲ್ಲೇಖಿಸಿದ್ದಾರೆ.

ಈ ವಿಡಿಯೋದಲ್ಲಿ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟದ ಬಗ್ಗೆ ಸರ್ಕಾರವು ದಿಟ್ಟ ಹೇಳಿಕೆಗಳನ್ನು ನೀಡುತ್ತಿದ್ದರೆ, ನೆಲದ ವಾಸ್ತವ ಪರಿಸ್ಥಿತಿಯು ವಿಭಿನ್ನ ಕಥೆಯನ್ನು ಹೇಳುತ್ತದೆ. ಈ ಎಲ್ಲಾ ಪುರಾವೆಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಹಳೆಯದು ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದಾಗಿದ್ದು,  ಕರ್ನಾಟಕಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಜಮ್ಮುವಿನ ಹಳೆಯ ವೀಡಿಯೊವನ್ನು ಕರ್ನಾಟಕದ ಮದರ್ಸಾ ವಿದ್ಯಾರ್ಥಿಗಳು ಮೊಹಮ್ಮದ್ ಅಸ್ಲಾಂ ಹುಸೇನ್ ಅವರನ್ನು ತಮ್ಮ ಪ್ರಧಾನಿ ಎಂದು ಉಲ್ಲೇಖಿಸುವ ದೃಶ್ಯಗಳಾಗಿ ಹಂಚಿಕೊಳ್ಳಲಾಗಿದೆ.