ಹಳೆಯ ಸಂಬಂಧವಿಲ್ಲದ ವೀಡಿಯೊವನ್ನು ನೂಪುರ್ ಶರ್ಮಾರನ್ನು ಬೆಂಬಲಿಸಿ ನಾಗಾ ಸಾಧುಗಳ ರ್ಯಾಲಿ ಎಂದು ಹಂಚಿಕೊಳ್ಳಲಾಗುತ್ತಿದೆ

ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ನಾಗಾ ಸಾಧುಗಳ ರ್ಯಾಲಿಯನ್ನು ಮಾಡಿದ್ದಾರೆ  ಎನ್ನುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನೂಪುರ್ ಶರ್ಮಾ  ಪ್ರವಾದಿ ಮುಹಮ್ಮದ್ ಬಗ್ಗೆ ಕೆಲವು ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು ಎಂದು ಆರೋಪಿಸಿ ಅವರ ವಿರುದ್ದ ಪ್ರತಿಭಟಿಸಲಾಗಿತ್ತು. ಅದಕ್ಕೆ ಪ್ರತಿಯಾಗಿ ಅವರನ್ನು ಬೆಂಬಲಿಸಿ ಈ ಪ್ರತಿಭಟನೆ ನಡೆದಿದೆ ಎನ್ನಲಾಗಿದೆ. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ನಾಗಾ ಸಾಧುಗಳ ರ್ಯಾಲಿಯನ್ನು ವೀಡಿಯೊ ತೋರಿಸುತ್ತದೆ.

ನಿಜಾಂಶ : ಇದು ಹಳೆಯ ವಿಡಿಯೋವಾಗಿದ್ದು, ಹರಿದ್ವಾರದಲ್ಲಿ ಚಿತ್ರೀಕರಿಸಲಾಗಿದೆ. ಇದು ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಯಾವುದೇ ಇತ್ತೀಚಿನ ರ್ಯಾಲಿಗೆ ಸಂಬಂಧಿಸಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದಾಗ, ವೈರಲ್ ವಿಡಿಯೊ ಕುರಿತು ಸರಿಯಾದ ಮಾಹಿತಿ ಕಂಡುಬಂದಿಲ್ಲ. ನಂತರ ಕೆಲವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿ, ಸರ್ಚ್ ಮಾಡಿದಾಗ ಇದೇ ರೀತಿಯ ವೀಡಿಯೊವನ್ನು 2021 ರಲ್ಲಿ YouTube ನಲ್ಲಿ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ವಿಡಿಯೊದ ಮಾಹಿತಿ ಪ್ರಕಾರ ಹರಿದ್ವಾರ ಕುಂಭಮೇಳಕ್ಕೆ ಸಂಬಂಧಿಸಿದೆ ಎಂದು ಯೂಟ್ಯೂಬ್ ಬಳಕೆದಾರರು ಶೀರ್ಷಿಕೆ ನೀಡಿದಾರೆ.

ಕುಂಭಮೇಳದ ಸಂದರ್ಭದಲ್ಲಿ ನಾಗಾ ಸಾಧುಗಳು ಮೆರವಣಿಗೆಯಲ್ಲಿ ಸಾಗಿದ ದೃಶ್ಯಗಳಾಗಿದ್ದು, ಒಂದೇ ಸ್ಥಳದಿಂದ ಅನೇಕ ರೀತಿಯ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ವೀಡಿಯೊದ ಸ್ಥಳ ಹರಿದ್ವಾರ. ವೀಡಿಯೊದಲ್ಲಿನ ಅಂಗಡಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆದರೆ, ಇತ್ತೀಚೆಗೆ ಕೆಲವು ಹಿಂದೂ ಸಂತರು ನೂಪುರ್ ಶರ್ಮಾ ಬೆಂಬಲಕ್ಕೆ ಬಂದಿದ್ದರು. ಅದಕ್ಕೆ ಸಂಬಂಧಿತ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಹಳೆಯ ಸಂಬಂಧವಿಲ್ಲದ ವೀಡಿಯೊವನ್ನು ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ನಾಗಾ ಸಾಧುಗಳ ಪ್ರತಿಭಟನಾ ಮೆರವಣಿಗೆ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.