ತಾಲಿಬಾನ್‌ ಬಂಡುಕೋರ ಖುಷಿಯಿಂದ ಐಸ್‌ಕ್ರೀಮ್‌ ತಿನ್ನುತ್ತಿದ್ದಾನೆಂದು ಅಫಘಾನ್‌ ನಾಗರಿಕನೊಬ್ಬನ ಹಳೆಯ ಪೋಟೋ ಹಂಚಿಕೊಳ್ಳಲಾಗಿದೆ

ತಾಲಿಬಾನ್‌ ಬಂಡುಕೋರ ಐಸ್‌ಕ್ರೀಮ್‌ ಸವಿಯುತ್ತಿರುವ ಫೋಟೋ ನೋಡಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ. ಪೋಸ್ಟ್‌‌ನ ಸತ್ಯಾಸತ್ಯತೆ ತಿಳಿಯೋಣ.

ಪ್ರತಿಪಾದನೆ: ತಾಲಿಬಾನ್ ಬಂಡುಕೋರ ಐಸ್‌ಕ್ರಿಸ್‌ ತಿನ್ನುತ್ತಿರುವುದು.

ನಿಜಾಂಶ: ಪೋಸ್ಟ್‌ನಲ್ಲಿ ಶೇರ್‍ ಆಗಿರುವ ಫೋಟೋವು ಸ್ಟೀವ್‌ ಮೆಕ್ಕ್ರಿ ತೆಗೆದಿರುವುದಾಗಿದೆ. ಈ ಪೊಟೋ ಅಫಘಾನಿನ ಒಬ್ಬ ವ್ಯಕ್ತಿ ತನ್ನ ಮಕ್ಕಳಿಗೆ ಐಸ್‌ಕ್ರೀಮ್‌ ಖರೀದಿಸಿರುವುದನ್ನು ತೋರಿಸುತ್ತಿದೆ. ಈ ಫೋಟೋವನ್ನು ಅಫಘಾನಿಸ್ತಾನದ ಪೋಲ್‌-ಇ-ಕೋಮ್ರಿ ನಗರದಲ್ಲಿ ಸ್ಟೀವ್‌ ಮೆಕ್ಕ್ರಿ ಅವರು 2002ರಲ್ಲಿ ತೆಗೆದಿದ್ದರು. ಈ ಫೋಟೋಗೂ ತಾಲಿಬಾನ್‌ಗೂ ಯಾವುದೇ ಸಂಬಂಧವಿಲ್ಲ. ಆದುದ್ದರಿಂದ ಪೋಸ್ಟ್‌ನಲ್ಲಿ ಬಿಂಬಿಸಿರುವುದು ತಪ್ಪಾಗಿದೆ.

ಈ ಪೋಸ್ಟ್‌ನಲ್ಲಿ ಶೇರ್‍ ಆಗಿರುವ ಪೋಟೋ ಹಿನ್ನೆಲೆ ಕುರಿತು ಹುಡುಕಾಡಿದಾಗ ಇದೇ ರೀತಿಯ ಫೋಟೋ “ಇನ್ಮುರ್‌” ಜಾಲತಾಣದಲ್ಲಿ ಪ್ರಕಟವಾಗಿರುವುದು ಕಂಡು ಬಂದಿದೆ. ಐಸ್‌‌ಕ್ರೀಮ್‌ ಕೋನ್‌ಗಳನ್ನು ಹಿಡಿದಿರುವ ಅಫಘಾನಿಗ ಎಂದು ಫೋಟೋದ ವಿವರಣೆ ಹೇಳುತ್ತದೆ. ಅಫಘಾನಿಸ್ತಾನದ ಪೋಲ್‌‌ ಇ ಕೋಮ್ರಿ (ಪುಲಿ ಕೂಮ್ರಿ ಎಂದೂ ಕರೆಯುತ್ತಾರೆ) ನಗರದಲ್ಲಿ ತೆಗೆದುವುದು ತಿಳಿಯುತ್ತದೆ. ಇತರ ಕೆಲವು ಜಾಲತಾಣಗಳು ಕೂಡ ಇದೇ ಫೋಟೋವನ್ನು ಪ್ರಕಟಿಸಿದ್ದು, ಸ್ಟೀವ್‌ ಮೆಕ್ಕ್ರಿ ಅವರು ಫೋಟೋ ತೆಗೆದಿದ್ದಾರೆಂದು ಹೇಳಿವೆ.

ಈ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮೂಲಗಳಿಗಾಗಿ ಹುಡುಕಿದಾಗ ಇದೇ ರೀತಿಯ ಫೋಟೋ ಸ್ಟೀವ್‌ ಮೆಕ್ಕ್ರಿ ಅವರ ಅಧಿಕೃತ ಇನ್ಸ್‌ಸ್ಟಾ ಖಾತೆಯಲ್ಲೂ ಸಿಕ್ಕಿದೆ. ಅಫಘಾನಿಸ್ತಾನ ಪೋಲ್-ಇ-ಕೋಮ್ರಿ ನಗರದಲ್ಲಿ 2002ರಲ್ಲಿ ತೆಗೆದ ಫೋಟೋ ಇದು ಎಂದೂ ಅವರು ಉಲ್ಲೇಖಿಸಿದ್ದಾರೆ.

ಅಪಘಾನಿಸ್ತಾನದ ರಾಜಧಾನಿ ಕಾಬೂಲ್‌ ಅನ್ನು ತಾಲಿಬಾನ್‌ ಸಂರ್ಪೂರ್ಣ ವಶಕ್ಕೆ ಪಡೆದ ಬಳಿಕ ತಾಲಿಬಾನಿಗಳು ಐಸ್‌ಕ್ರೀಮ್‌ ಸವಿಯುವಂತಹ ಹಲವು ವಿಶ್ರಾಂತಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಐಸ್‌ಕ್ರೀಮ್‌ನೊಂದಿಗಿನ ಫೋಟೋಗಳು ಹರಿದಾಡಿದ್ದವು. ಫೋಟೋಗಳು ಹಾಗೂ ವಿಡಿಯೋಗಳನ್ನು ಆಧರಿಸಿ ಹಲವು ಸುದ್ದಿ ಜಾಲತಾಣಗಳಲ್ಲಿ ವರದಿಗಳೂ ಪ್ರಕಟವಾಗಿದ್ದವು. ಇದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದರೆ ಇಲ್ಲಿ ಶೇರ್‌ ಆಗಿರುವ ಪೋಸ್ಟ್‌ನಲ್ಲಿನ ಪೋಟೋ ಹಳೆಯದ್ದಾಗಿದೆ. ಅಫಘಾನಿಸ್ತಾನದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳಿಗೂ ಈ ಫೋಟೋಗೂ ಯಾವುದೇ ಸಂಬಂಧವಿಲ್ಲ.

ಒಟ್ಟಾರೆ ಹೇಳಬೇಕೆಂದರೆ ಹಳೆಯ ಫೋಟೋವನ್ನು ಈಗಿನ ವಿದ್ಯಮಾನಕ್ಕೆ ತಳುಕು ಹಾಕಿ ವೈರಲ್ ಮಾಡಲಾಗಿದೆ.