2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡ್ ಮತ್ತು ರಾಯ್ ಬರೇಲಿ ಎರಡರಿಂದಲೂ ಸ್ಪರ್ಧಿಸಿ ಗೆದಿದ್ದಾರೆ. ಜೂನ್ 2024 ರಲ್ಲಿ ಅವರು ವಯನಾಡ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರಿಂದ ಅಲ್ಲಿನ ಸ್ಥಾನ ಖಾಲಿಯಾಗಿತ್ತು. ಇತ್ತೀಚೆಗೆ, 15 ಅಕ್ಟೋಬರ್ 2024 ರಂದು, ಭಾರತದ ಚುನಾವಣಾ ಆಯೋಗವು (ಇಸಿಐ) ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿತು, ಜೊತೆಗೆ ದೇಶದಾದ್ಯಂತ ಖಾಲಿ ಇರುವ 48 ವಿಧಾನಸಭಾ ಕ್ಷೇತ್ರಗಳು ಮತ್ತು 2 ಸಂಸದೀಯ ಕ್ಷೇತ್ರಗಳಿಗೆ ಉಪಚುನಾವಣೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತು. ವಯನಾಡ್ ಸಂಸದೀಯ ಸ್ಥಾನಕ್ಕೆ 23 ಅಕ್ಟೋಬರ್ 2024 ರಂದು, ಪ್ರಿಯಾಂಕಾ ಗಾಂಧಿ ವಯನಾಡ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಯನಾಡಿನಲ್ಲಿ ಬೃಹತ್ ರ‍್ಯಾಲಿ ಹಾಗೂ ರೋಡ್ ಶೋ ಆಯೋಜಿಸಿದ್ದವು. ಈ ಸಂದರ್ಭದಲ್ಲಿ, ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಯವರ ನಾಮನಿರ್ದೇಶನ ರಾಲಿಯಲ್ಲಿ ಇಸ್ಲಾಮಿಕ್/ಪಾಕಿಸ್ತಾನದ ಧ್ವಜಗಳನ್ನು ಬೀಸಲಾಗಿದೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾದರೆ ಈ ಲೇಖನದ ಮೂಲಕ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೈಮ್‌ಗಳನ್ನು ಪರಿಶೀಲಿಸೋಣ.
ಕ್ಲಾಯ್: 23 ಅಕ್ಟೋಬರ್ 2024 ರಂದು ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಯವರ ನಾಮನಿರ್ದೇಶನ ರಾಲಿಯಲ್ಲಿ ಇಸ್ಲಾಮಿಕ್/ಪಾಕಿಸ್ತಾನಿ ಧ್ವಜಗಳನ್ನು ಎತ್ತುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಫ್ಯಾಕ್ಟ್: ಈ ವೈರಲ್ ವೀಡಿಯೊ 23 ಅಕ್ಟೋಬರ್ 2024 ರಂದು ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಯವರ ನಾಮನಿರ್ದೇಶನ ರಾಲಿಗೆ ಸಂಬಂಧಿಸಿಲ್ಲ. ಬದಲಾಗಿ, ಇದು ಕಾಸರಗೋಡಿನಲ್ಲಿ ರಾಜ್ಮೋಹನ್ ಉನ್ನಿತಾನ್ ಅವರ 2019 ರ ಚುನಾವಣಾ ಪ್ರಚಾರದಗಿದೆ. ಕಾಸರಗೋಡಿನ ಹಾಲಿ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿತಾನ್ ಅವರು 2019 ರ ಲೋಕಸಭಾ ಸ್ಥಾನವನ್ನೂ ಗೆದ್ದಿದ್ದಾರೆ. ವೀಡಿಯೊದಲ್ಲಿ ಕಂಡುಬರುವ ಧ್ವಜಗಳು ಪಾಕಿಸ್ತಾನಿ ರಾಷ್ಟ್ರೀಯ ಧ್ವಜ ಅಥವಾ ಇಸ್ಲಾಮಿಕ್ ಧ್ವಜಗಳಲ್ಲ. ಬದಲಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷದ ಧ್ವಜಗಳಾಗಿವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಈ ವೈರಲ್ ವೀಡಿಯೊದ ವಿವರಗಳನ್ನು ಪರಿಶೀಲಿಸಲು, ನಾವು ವೀಡಿಯೊದಿಂದ ಸೂಕ್ತ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ನಮ್ಮನ್ನು 10 ಜೂನ್ 2019 ರಂದು ಅನ್ವೆರಿಫೈಎಡ್ YouTube ಚಾನೆಲ್ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊ (ಆರ್ಕೈವ್ ಮಾಡಲಾಗಿದೆ) ಗೆ ಕರೆದೊಯ್ಯಿತು. ಇದು 2019 ರಲ್ಲಿ ನಡೆದ IUML ರಾಲಿಗೆ ಸಂಬಂಧಿಸಿದೆ ಎಂದು ಕ್ಯಾಪ್ಶನ್ ನಲ್ಲಿ ಹೇಳಲಾಗಿದೆ. ಈ ವೀಡಿಯೊವು 23 ಅಕ್ಟೋಬರ್ 2024 ರಂದು ವಯನಾಡ್ನಲ್ಲಿ ನಡೆದ ಪ್ರಿಯಾಂಕಾ ಗಾಂಧಿಯವರ ನಾಮನಿರ್ದೇಶನ ರಾಲಿಗಿಂತ ಹಳೆಯದಾಗಿದೆ. ಹಾಗಾಗಿ ಈ ವೀಡಿಯೊ ಆಕೆಯ ನಾಮನಿರ್ದೇಶನ ರಾಲಿಗೆ ಯಾವುದೇ ಸಂಬಂಧಿಸಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ.
ವೈರಲ್ ವೀಡಿಯೊದಲ್ಲಿರುವ ಧ್ವಜಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವು ಪಾಕಿಸ್ತಾನಿ ರಾಷ್ಟ್ರೀಯ ಧ್ವಜ ಅಥವಾ ಇಸ್ಲಾಮಿಕ್ ಧ್ವಜಗಳಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಇದು ಕೇರಳ ಮೂಲದ ರಾಜಕೀಯ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನ ಅಧಿಕೃತ ಧ್ವಜ. IUML ಕೇರಳ ಮೂಲದ ಪಕ್ಷವಾಗಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಸದಸ್ಯತ್ವವನ್ನು ಪಡೆದಿದೆ. ರಾಷ್ಟ್ರೀಯ ಮಟ್ಟದಲ್ಲಿ, ಇದು I.N.D.I.A ಬ್ಲಾಕ್‌ನ ಭಾಗವಾಗಿದೆ. ಹಾಗಾಗಿ ವೈರಲ್ ವೀಡಿಯೊದಲ್ಲಿ ಕಂಡುಬರುವ ಧ್ವಜಕ್ಕೂ IUML ಪಕ್ಷದ ಧ್ವಜದ ನಡುವಿನ ಹೋಲಿಕೆಯನ್ನು ಕೆಳಗೆ ತೋರಿಸಲಾಗಿದೆ.
ಈ ವೈರಲ್ ವೀಡಿಯೊದಲ್ಲಿ, ಜನರು ಮಲಯಾಳಂನಲ್ಲಿ “ಈ ಕೋಲಂ ಸತೀಶ್ ಚಂದ್ರನ್ ವೀಟ್ಟಿಲ್ ಇರಿಕ್ಟ್ಟೆ… ಪಾರ್ಲಿಯಮೆಂಟಿಲ್ ಉನ್ನಿಥನ್ ವಿಜಯಿಚು ಪೊಕಟ್ಟೆ” (ಈ ವರ್ಷ ಸತೀಶ್ ಚಂದ್ರನ್ ಮನೆಯಲ್ಲಿ ಕುಳಿತುಕೊಳ್ಳಲಿ; ಉನ್ನಿಥಾನ್ ಗೆದ್ದು ಸಂಸತ್ತಿಗೆ ಹೋಗಲಿ) ಎಂಬ ಘೋಷಣೆಗಳನ್ನು ನಾವು ಕೇಳಬಹುದು. ಇದರ ಆಧಾರದ ಮೇಲೆ, ನಾವು ಗೂಗಲ್‌ನಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ರಾಜ್‌ಮೋಹನ್ ಉನ್ನಿಥಾನ್ ಅವರು ಕಾಸರಗೋಡಿನ ಲೋಕಸಭಾ ಸಂಸದರಾಗಿದ್ದು, ಅವರು 2019 ಮತ್ತು 2024 ರ ಲೋಕಸಭೆ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಸರಗೋಡು ಕ್ಷೇತ್ರದಿಂದ (ಇಲ್ಲಿ, ಇಲ್ಲಿ) ಗೆದ್ದಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಸರಗೋಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಮೋಹನ್ ಉನ್ನಿಥಾನ್ ಸ್ಪರ್ಧಿಸಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಅಭ್ಯರ್ಥಿ ಕೆ.ಪಿ. ಸತೀಶ್ ಚಂದ್ರನ್ ಅವರನ್ನು ಸೋಲಿಸಿದ್ದಾರೆ. ಈ ವಿಡಿಯೋ ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ್ದು, 2019 ಕ್ಕೆ ಸೀಮಿತವಾಗಿದೆ ಎಂಬುವುದು ಸ್ಪಷ್ಟವಾಗಿದೆ.
ಇದಲ್ಲದೆ, ವೈರಲ್ ವೀಡಿಯೊದಲ್ಲಿ “ಅರಮಣ ಸಿಲ್ಕ್ಸ್” ಎನ್ನುವ ಅಂಗಡಿಯ ಹೆಸರನ್ನು ನಾವು ಗಮನಿಸಿದ್ದೇವೆ. ಇದನ್ನು ಕ್ಯೂ ಆಗಿ ಬಳಸಿಕೊಂಡು, ನಾವು ಕಾಸರಗೋಡಿನ ಎಂಜಿ ರಸ್ತೆಯಲ್ಲಿರುವ “ಅರಮಣ ಸಿಲ್ಕ್ಸ್” ಅಂಗಡಿಯನ್ನು ಗೂಗಲ್ ಮ್ಯಾಪ್‌ನಲ್ಲಿ ಜಿಯೋಲೊಕೇಟ್ ಮಾಡಿದ್ದೇವೆ. ಈ ಎಲ್ಲಾ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊ 2019 ರ ಹಿಂದಿನದಗಿದ್ದು, ಕಾಸರಗೋಡು ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಮೋಹನ್ ಉನ್ನಿಥಾನ್ ಅವರ 2019 ರ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದೆ ಎಂದು ನಾವು ತೀರ್ಮಾನಿಸಬಹುದು. 23 ಅಕ್ಟೋಬರ್ 2024 ರಂದು ವಯನಾಡಿನಲ್ಲಿ ನಡೆದ ಪ್ರಿಯಾಂಕಾ ಗಾಂಧಿಯವರ ನಾಮನಿರ್ದೇಶನ ರಾಲಿಗೆ ಸಂಬಂಧಿಸಿದ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಹಿಂದೆಯೂ ವಯನಾಡ್‌ನಲ್ಲಿ ರಾಹುಲ್ ಗಾಂಧಿಯವರ ರಾಲಿಯಲ್ಲಿ ಪಾಕಿಸ್ತಾನದ ಧ್ವಜಗಳನ್ನು ಹರಿಸಿದ್ದಾರೆ ಎನ್ನುವ ವಿಡಿಯೋ ವೈರಲ್ ಆದಾಗ ಅದೇ ವೀಡಿಯೊವನ್ನು ಫ್ಯಾಕ್ಟ್ ಚೆಕ್ ಮಾಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವೀಡಿಯೊ 23 ಅಕ್ಟೋಬರ್ 2024 ರಂದು ವಯನಾಡ್ನಲ್ಲಿ ನಡೆದ ಪ್ರಿಯಾಂಕಾ ಗಾಂಧಿಯವರ ನಾಮನಿರ್ದೇಶನ ರಾಲಿಗೆ ಸಂಬಂಧಿಸಿಲ್ಲ. ಬದಲಾಗಿ ಇದು 2019 ರದಾಗಿದ್ದು, ಅದರಲ್ಲಿ ಕಂಡುಬಂದ ಧ್ವಜಗಳು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷಕ್ಕೆ ಸೇರಿದ್ದಾಗಿದೆ.