ಅನ್ಯ ರಾಷ್ಟ್ರಗಳ ಸಮುದ್ರದಲ್ಲಿನ ದೇವಾಲಯ ಮತ್ತು ಆವಾಸಸ್ಥಾನಗಳ ಫೋಟೋಗಳನ್ನು ಭಾರತದ ದ್ವಾರಕಾ ನಗರವು ನೀರೊಳಗಿನ ಚಿತ್ರಗಳೆಂದು ಹಂಚಿಕೊಳ್ಳಲಾಗಿದೆ

5500 ವರ್ಷಗಳ ಹಿಂದೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಮುಳುಗಿಹೋದ ದ್ವಾರಕಾ ನಗರದ ನೀರೊಳಗಿನ ಚಿತ್ರಗಳು ಎಂದು ಹೇಳಿಕೊಳ್ಳುವ ಹಲವು ಫೋಟೋಗಳ ಕೊಲಾಜ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ಭಾರತದ ದ್ವಾರಕಾ ನಗರದ ನೀರೊಳಗಿನ ಚಿತ್ರಗಳು.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ನಾಲ್ಕು ಫೋಟೋಗಳಲ್ಲಿ ಮೂರು ಚಿತ್ರಗಳು ಬಹಾಮಾಸ್‌ನ ಪ್ಯಾರಡೈಸ್‌ ದ್ವೀಪದಲ್ಲಿರುವ ‘ದಿ ಡಿಐಜಿ ಅಟ್ಲಾಂಟಿಸ್’ನ ಸಮುದ್ರ ಆವಾಸಸ್ಥಾನದ ಚಿತ್ರಗಳಾಗಿವೆ. ಇನ್ನೊಂದು ಫೋಟೋ ಅಮೆರಿಕಾದ ಫ್ಲೋರಿಡಾ ರಾಜ್ಯದಲ್ಲಿರುವ ನೆಪ್ಚೂನ್ ಮೆಮೋರಿಯಲ್ ರೀಫ್ ನೀರೊಳಗಿನ ಕೊಲಂಬೊರಿಯಂನ ಚಿತ್ರವಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಚಿತ್ರ 1 & 4:

ಪೋಸ್ಟ್‌ನಲ್ಲಿ ಹಂಚಲಾದ ಫೋಟೋವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ‘Pinterest’ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಇದೇ ರೀತಿಯ ಚಿತ್ರವು ಕಂಡುಬಂದಿದೆ. ಆ ಫೋಟೋದ ವಿವರಣೆಯಲ್ಲಿ, ಬಹಾಮಾಸ್‌ನ ಪ್ಯಾರಡೈಸ್ ದ್ವೀಪದಲ್ಲಿರುವ ‘ದಿ ಡಿಗ್ ಅಟ್ಲಾಂಟಿಸ್’ ಸಮುದ್ರ ಆವಾಸಸ್ಥಾನದೊಳಗೆ ರೂಪುಗೊಂಡಿರುವ ‘ದಿ ಲಾಸ್ಟ್ ಸಿಟಿ ಆಫ್ ಅಟ್ಲಾಂಟಿಸ್’ನ ಕಲಾತ್ಮಕ ಚಿತ್ರವೆಂದು ಉಲ್ಲೇಖಿಸಲಾಗಿದೆ. ಈ ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ವಿಶ್ವಾಸಾರ್ಹ ಮೂಲಗಳಿಗಾಗಿ ಹುಡುಕಿದಾಗ, ‘ಪ್ರಾಕ್ಟಿಕಲ್ ಪ್ಯಾರಡೈಸ್ ಐಲ್ಯಾಂಡ್’ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಅದೇ ಚಿತ್ರವು ಕಂಡುಬಂದಿದೆ. ವೆಬ್‌ಸೈಟ್‌ನಲ್ಲಿ, ಈ ಚಿತ್ರವನ್ನು ಬಹಾಮಾಸ್‌ನ ಪ್ಯಾರಡೈಸ್ ದ್ವೀಪದಲ್ಲಿರುವ ‘ದಿ ಡಿಐಜಿ ಅಟ್ಲಾಂಟಿಸ್’ನೀರಿನೊಳಿಗಿನ (ಅಂಡರ್ವಾಟರ್ ವಂಡರ್ಲ್ಯಾಂಡ್‌) ದೃಶ್ಯ ಎಂದು ಉಲ್ಲೇಖಿಸಲಾಗಿದೆ. ಅಟ್ಲಾಂಟಿಸ್ ಬಹಾಮಾಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ ಪೋಸ್ಟ್ ಮಾಡಿರುವ ವೀಡಿಯೊದಲ್ಲಿಯೂ ಇದೇ ರೀತಿಯ ದೃಶ್ಯ ಕಂಡುಬಂದಿದೆ.

ಅದೇ ಚಿತ್ರವು ‘ದಿ ಡಿಐಜಿ ಅಟ್ಲಾಂಟಿಸ್’ ಸಮುದ್ರ ಆವಾಸಸ್ಥಾನದ ಗೂಗಲ್ ಚಿತ್ರಗಳಲ್ಲಿಯೂ ಕಂಡುಬಂದಿದೆ. ಕೆಲವು ಪ್ರವಾಸಿಗರು ಪೋಸ್ಟ್ ಮಾಡಿದ ಯೂಟ್ಯೂಬ್ ವೀಡಿಯೊಗಳಲ್ಲಿ ಅದೇ ಚಿತ್ರ ಕಾಣಿಸುವ ದೃಶ್ಯಗಳನ್ನು ನೋಡಬಹುದು. ಪ್ರವಾಸಿಗರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ದಿ ಡಿಐಜಿ ಅಟ್ಲಾಂಟಿಸ್’ ಸಮುದ್ರ ಆವಾಸಸ್ಥಾನದ ಸಂಪೂರ್ಣ ಒಳನೋಟವೆಂದು ಹಂಚಿಕೊಂಡಿದ್ದಾರೆ. ವಿಭಿನ್ನ ಆಂಗಲ್‌ಗಳಿಂದ ಸೆರೆಹಿಡಿಯಲಾದ ಅದೇ ಫೋಟೋ ಅಟ್ಲಾಂಟಿಸ್ ಬಹಾಮಾಸ್‌ನ ಅಧಿಕೃತ ಇನ್ಸ್ಟಾಗ್ರಾಮ್ ಚಾನೆಲ್‌ನಲ್ಲಿಯೂ ಸಹ ಕಂಡುಬರುತ್ತದೆ.

ಚಿತ್ರ 2:

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ಮತ್ತೊಂದು ಪೋಟೋವನ್ನೇ ಹೋಲುವ ಅಂತದ್ದೇ ಚಿತ್ರವು ‘ಪ್ರಾಕ್ಟಿಕಲ್ ಪ್ಯಾರಡೈಸ್ ಐಲ್ಯಾಂಡ್’ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಕಂಡುಬಂದಿದೆ. ಈ ಫೋಟೋವನ್ನು ಬಹಾಮಾಸ್‌ನ ಪ್ಯಾರಡೈಸ್‌ ದ್ವೀಪದಲ್ಲಿರುವ ‘ದಿ ಡಿಐಜಿ ಅಟ್ಲಾಂಟಿಸ್’ ಸಮುದ್ರ ಆವಾಸಸ್ಥಾನದ ಚಿತ್ರವೆಂದು ಎಂದು ಉಲ್ಲೇಖಿಸಲಾಗಿದೆ. ಅಟ್ಲಾಂಟಿಸ್ ಬಹಾಮಾಸ್ ಅಧಿಕೃತ Pinterest ಹ್ಯಾಂಡಲ್ ಕೂಡ ಅದೇ ಚಿತ್ರವನ್ನು ಹಂಚಿಕೊಂಡಿದೆ.

‘ದಿ ಡಿಐಜಿ ಅಟ್ಲಾಂಟಿಸ್’ ಸಮುದ್ರ ಆವಾಸಸ್ಥಾನದ ಕೆಲವು ಪ್ರವಾಸಿಗರು ಪ್ರಕಟಿಸಿದ ಯೂಟ್ಯೂಬ್ ವೀಡಿಯೊಗಳಲ್ಲಿಯೂ ಇದೇ ರೀತಿಯ ದೃಶ್ಯವನ್ನು ನೋಡಬಹುದು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಚಿತ್ರ 3:

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, ಅಮ್ಯೂಸಿಂಗ್ ಪ್ಲಾನೆಟ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಇದೇ ರೀತಿಯ ದೃಶ್ಯ ಕಂಡುಬಂದಿದೆ. ಲೇಖನದಲ್ಲಿ, ಇದನ್ನು ಫ್ಲೋರಿಡಾದ ನೆಪ್ಚೂನ್ ಮೆಮೋರಿಯಲ್ ರೀಫ್ ನೀರೊಳಗಿನ ಕೊಲಂಬರಿಯಂನ ದೃಶ್ಯ ಎಂದು ಉಲ್ಲೇಖಿಸಲಾಗಿದೆ. ಈ ಬಂಡೆಯನ್ನು ಆರಂಭದಲ್ಲಿ ‘ದಿ ಲಾಸ್ಟ್ ಸಿಟಿ ಆಫ್ ಅಟ್ಲಾಂಟಿಸ್’ನ ಪ್ರತಿರೂಪವಾಗಿ ನಿರ್ಮಿಸಲಾಗಿತ್ತು. ಆದರೆ ನಂತರ ಇದು ವಿಶ್ವದ ಮೊದಲ ನೀರೊಳಗಿನ ಸ್ಮಶಾನ ಮತ್ತು ಸ್ಮಾರಕ ಉದ್ಯಾನವನವಾಗುವ ಮೂಲಕ ಹೆಚ್ಚು ಲಾಭದಾಯಕ ಸ್ಥಳವಾಗಿ ಮಾರ್ಪಟ್ಟಿತು. ಅಲ್ಲದೆ,   ಕೆಲವು ಇತರ ವೆಬ್‌ಸೈಟ್‌ಗಳು ನೆಪ್ಚೂನ್ ಮೆಮೋರಿಯಲ್ ರೀಫ್ ಸ್ಮಾರಕ ಉದ್ಯಾನವನದ ಬಗ್ಗೆ ಲೇಖನಗಳನ್ನು ಪ್ರಕಟಿಸಿವೆ.

‘ನೆಪ್ಚೂನ್ ಮೆಮೋರಿಯಲ್ ರೀಫ್’ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳಲ್ಲಿ ಇದೇ ರೀತಿಯ ಶಿಲ್ಪಕಲೆ ದೃಶ್ಯಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಅಲ್ಲದೆ, ಅದೇ ಚಿತ್ರವನ್ನು ನೆಪ್ಚೂನ್ ಮೆಮೋರಿಯಲ್ ರೀಫ್‌ನ ಫೋಟೋ ಗ್ಯಾಲರಿಯಲ್ಲಿ ಕಾಣಬಹುದು. ಈ ಎಲ್ಲ ಸಾಕ್ಷ್ಯಗಳಿಂದ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಈ ಫೋಟೋ ಫ್ಲೋರಿಡಾದ ನೆಪ್ಚೂನ್ ಮೆಮೋರಿಯಲ್ ರೀಫ್‌ನಿಂದ ಬಂದಿದೆ ಎಂದು ತೀರ್ಮಾನಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವದ ವಿವಿಧ ಸಮುದ್ರ ಆವಾಸಸ್ಥಾನಗಳ ಫೋಟೋಗಳನ್ನು ಭಾರತದ ದ್ವಾರಕಾ ನಗರದ ನೀರೊಳಗಿನ ಚಿತ್ರಗಳೆಂದು ಹಂಚಿಕೊಳ್ಳಲಾಗಿದೆ.