Fake News - Kannada
 

ಭದ್ರತಾ ಕಾರಣಕ್ಕೆ 2017 ರಲ್ಲಿಯೇ ರಾಷ್ಟ್ರಪತಿಗಳ ಮಗಳನ್ನು ಏರ್ ಇಂಡಿಯಾ ಫ್ಲೈಟ್ ಅಟೆಂಡೆಂಟ್ ಹುದ್ದೆಯಿಂದ ಕಚೇರಿಯ ಆಂತರಿಕ ವ್ಯವಹಾರಗಳ ವಿಭಾಗಕ್ಕೆ ನಿಯೋಜಿಸಲಾಗಿದೆ

0

ಭಾರತದ ಅಧ್ಯಕ್ಷರ ಮಗಳು ಏರ್ ಇಂಡಿಯಾದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಏರ್ ಇಂಡಿಯಾವನ್ನು ಇತ್ತೀಚೆಗೆ ಟಾಟಾ ಕಂಪನಿ ಖರೀದಿಸಿದ ನಂತರ ಅವರನ್ನು ಭದ್ರತಾ ಕಾರಣಗಳಿಗಾಗಿ ಆಂತರಿಕ ವ್ಯವಹಾರಗಳ ವಿಭಾಗಕ್ಕೆ ನಿಯೋಜಿಸಲಾಗಿದೆ ಎಂದು ಹೇಳುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಇತ್ತೀಚೆಗೆ ಟಾಟಾ ಕಂಪನಿಯು ಏರ್ ಇಂಡಿಯಾವನ್ನು ಖರೀದಿಸಿದ ನಂತರ ಭದ್ರತಾ ಕಾರಣಗಳಿಗಾಗಿ ಅಧ್ಯಕ್ಷರ ಮಗಳನ್ನು ಫ್ಲೈಟ್ ಅಟೆಂಡೆಂಟ್ ಹುದ್ದೆಯಿಂದ ಆಂತರಿಕ ವ್ಯವಹಾರಗಳ ವಿಭಾಗಕ್ಕೆ ನಿಯೋಜಿಸಲಾಗಿದೆ.

ನಿಜಾಂಶ: ಭಾರತದ ರಾಷ್ಟ್ರಪತಿಯವರ ಪುತ್ರಿ, ಶ್ರೀಮತಿ ಸ್ವಾತಿ ಕೋವಿಂದ್ ಅವರು ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರು ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು. ಭದ್ರತಾ ಕಾರಣಗಳಿಗಾಗಿ ಅವರನ್ನು 2017 ರಲ್ಲಿಯೇ ಏರ್ ಇಂಡಿಯಾದ ಮತ್ತೊಂದು ಇಲಾಖೆಗೆ ನಿಯೋಜಿಸಲಾಗಿದೆ. ಅದಕ್ಕೂ ಅವರು ಮೊದಲು ಬೋಯಿಂಗ್ 787, ಬೋಯಿಂಗ್ 777 ವಿಮಾನಗಳಲ್ಲಿ ಕೆಲಸ ಮಾಡಿದ್ದರು. TATA ಸಮೂಹವು ಭಾರತ ಸರ್ಕಾರದಿಂದ ಏರ್ ಇಂಡಿಯಾವನ್ನು ಇತ್ತೀಚೆಗೆ ಅಂದರೆ 2022 ರ ಜನವರಿಯಲ್ಲಿ  ಖರೀದಿಸಿದ ನಂತರ  ಏರ್‌ಲೈನ್‌ನ ನಿರ್ವಹಣೆ ಮತ್ತು ನಿಯಂತ್ರಣವನ್ನು ವಹಿಸಿಕೊಂಡಿತು. ಆದರೆ ಅಧ್ಯಕ್ಷರ ಮಗಳನ್ನು 2017 ರಲ್ಲಿಯೇ ಬೇರೆ ಹುದ್ದೆಗೆ ನಿಯೋಜಿಸಲಾಗಿತ್ತು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಭಾರತದ ರಾಷ್ಟ್ರಪತಿಯವರ ಪುತ್ರಿ, ಶ್ರೀಮತಿ ಸ್ವಾತಿ ಕೋವಿಂದ್ ಅವರು ಏರ್ ಇಂಡಿಯಾದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿದ್ದರು. ಭದ್ರತಾ ಕಾರಣಗಳಿಗಾಗಿ ಅವರು 2017 ರಲ್ಲಿ ಏರ್ ಇಂಡಿಯಾದ ಬೇರೊಂದು ಇಲಾಖೆಗೆ ನಿಯೋಜಿಸುವ ಮೊದಲು ಬೋಯಿಂಗ್ 787, ಬೋಯಿಂಗ್ 777 ವಿಮಾನಗಳಲ್ಲಿ ಕೆಲಸ ಮಾಡಿದ್ದರು.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಮಗಳ ಬಗ್ಗೆ ಗೂಗಲ್‌ನಲ್ಲಿ ಹುಡುಕಿದಾಗ, 2017 ರ ಹಲವು ವರದಿಗಳು ಲಭ್ಯವಾಗಿವೆ. ಅವುಗಳಲ್ಲಿ ಭದ್ರತಾ ಕಾರಣಗಳಿಗಾಗಿ ರಾಷ್ಟ್ರಪತಿಯವರ ಮಗಳನ್ನು ಏರ್ ಇಂಡಿಯಾದ ಫ್ಲೈಟ್ ಅಟೆಂಡೆಂಟ್ ಹುದ್ದೆಯಿಂದ ಕಚೇರಿಯ ಆಂತರಿಕ ವ್ಯವಹಾರಗಳ ವಿಭಾಗಕ್ಕೆ ಮೂಲ ಕೆಲಸಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ಹೇಳಲಾಗಿದೆ.

TATA ಗ್ರೂಪ್ ಭಾರತ ಸರ್ಕಾರದಿಂದ ಏರ್ ಇಂಡಿಯಾವನ್ನು ಖರೀದಿಸಿದ ನಂತರ 2022 ರ ಜನವರಿಯಲ್ಲಿ ಏರ್‌ಲೈನ್‌ನ ನಿರ್ವಹಣೆ ಮತ್ತು ನಿಯಂತ್ರಣವನ್ನು ವಹಿಸಿಕೊಂಡಿತು. ಆದರೆ ಅದಕ್ಕೂ ಮೊದಲೆ 2017 ರಲ್ಲಿ ರಾಷ್ಟ್ರಪತಿಗಳ ಮಗಳನ್ನು ಬೇರೊಂದು ಹುದ್ದೆಗೆ ನಿಯೋಜನೆ ಮಾಡಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭದ್ರತಾ ಕಾರಣಗಳಿಗಾಗಿ 2017 ರಲ್ಲಿ ಭಾರತದ ರಾಷ್ಟ್ರಪತಿಯವರ ಮಗಳನ್ನು ಕ್ಯಾಬಿನ್ ಸಿಬ್ಬಂದಿಯಿಂದ ಏರ್ ಇಂಡಿಯಾದ ಆಂತರಿಕ ವ್ಯವಹಾರಗಳ ವಿಭಾಗಕ್ಕೆ ನಿಯೋಜಿಸಲಾಗಿದೆಯೆ ಹೊರತು ಇತ್ತೀಚೆಗೆ ಟಾಟಾ ಸಂಸ್ಥೆ ಏರ್ ಇಂಡಿಯಾ ಖರೀದಿಸಿದ ನಂತರವಲ್ಲ.

Share.

Comments are closed.

scroll