ಸೂಯೆಜ್ ಕಾಲುವೆಯಿಂದ ಹಡಗು ಬಿಡಿಸಿಕೊಂಡು ಚಲಿಸಿದಾಗ ಧೂಮ್ ಚಿತ್ರದ ಹಾಡನ್ನು ಹಾಕಿರಲಿಲ್ಲ

ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡ ಹಡಗನ್ನು ತೆರವುಗೊಳಿಸುತ್ತಿರುವ ವಿಡಿಯೊ ಜೊತೆಗೆ ಧೂಮ್ ಹಿಂದಿ ಚಿತ್ರದ ಹಾಡು ಹಾಕಿ ಸಂಭ್ರಮಿಸಲಾಗುತ್ತಿದೆ ಎಂಬ ಪೋಸ್ಟ್  ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹಂಚಿಕೊಳ್ಳಲಾಗುತ್ತಿದೆ. ‘ಹಡಗು ಅಂತಿಮವಾಗಿ ಸೂಯೆಜ್ ಕಾಲುವೆಯಿಂದ ಹೊರಬರುತ್ತಿದ್ದಂತೆ ಧೂಮ್ ಹಾರ್ನ್ಸ್ ಹಾಕಿ ಸಂಭ್ರಮಿಸಲಾಗಿದೆ’ಎಂದು ಹಲವು ಮಂದಿ ಪೋಸ್ಟ್ ಶೇರ್‍ ಮಾಡಿದ್ದಾರೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿದೆ

ಪ್ರತಿಪಾದನೆ: ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಹಡಗು ಮತ್ತೆ ನೀರಿನಲ್ಲಿ ಪ್ರಯಾಣಿಸಲು ಪ್ರಾರಂಭಿಸಿದಾಗ ಧೂಮ್ ಚಲನಚಿತ್ರದ ಸಂಗೀತ ಹಾಕಲಾಗಿತ್ತು.

ಸತ್ಯಾಂಶ: ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಹಡಗು ಮತ್ತೆ ಚಲಿಸಲು ಆರಂಭಿಸಿದಾಗ ಧೂಮ್ ಚಲನಚಿತ್ರದ ಸಂಗೀತವನ್ನು ಹಾಕಿರಲಿಲ್ಲ. ವಿಡಿಯೋವನ್ನು ಎಟಿಟ್‌ ಮಾಡಿ ಡಿಜಿಟಲ್‌ನಲ್ಲಿ ಆಡಿಯೋ ಸೇರಿಸಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಟೆನ್ ಟಿವಿಯ ಸುದ್ದಿ ವೀಡಿಯೊಗೆ ನಮ್ಮಗೆ ದೊರೆತಿದೆ. ಇದರಲ್ಲಿ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡ ಹಡಗು ಚಲಿಸುತ್ತಿದೆ ಎಂದು ವರದಿ ಮಾಡಲಾಗಿದೆ. ಈ  ಪೋಸ್ಟ್‌ನಲ್ಲಿ ಹಂಚಲಾಗಿರುವ ವೀಡಿಯೊದಲ್ಲಿ, ನಾವು ಕೇವಲ ಹಡಗುಗಳ ಸದ್ದು ಮತ್ತು ನೀರಿನ ಧ್ವನಿಯನ್ನು ಮಾತ್ರ ಕೇಳಬಹುದು. ಅದರಲ್ಲಿ ಧೂಮ್ ಚಲನಚಿತ್ರದ ಸಂಗೀತ ಇಲ್ಲಿ ಇಲ್ಲ.

ಹಡಗು ಮತ್ತೆ ಚಲಿಸುತ್ತಿರುವುದರ ಬಗ್ಗೆ ಇತರ ಸುದ್ದಿ ವೀಡಿಯೊ ವರದಿಗಳಲ್ಲಿ ಸಹ, ನಾವು ಸಾಮಾನ್ಯವಾಗಿ ಹಡಗಿನ ಸದ್ದನ್ನು ಮಾತ್ರ ಕೇಳಬಹುದು ಆದರೆ ಧೂಮ್ ಚಲನಚಿತ್ರದ ಸಂಗೀತ ಕೇಳಿಸುವುದಿಲ್ಲ.. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಲ್ಲದೆ, ಹಡಗು ಮುಕ್ತವಾದಾಗ ಧೂಮ್ ಸಂಗೀತ ನುಡಿಸುವ ಬಗ್ಗೆ ಯಾವುದೇ ಸುದ್ದಿಗಳಿಲ್ಲ.

ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡ ಹಡಗು ಮತ್ತೆ ನೀರಿನಲ್ಲಿ ಚಲಿಸಿದ ಖುಷಿಯನ್ನು ಈ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಸುಳ್ಳು ಪ್ರತಿಪಾದನೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಹಡಗು ಮತ್ತೆ ನೀರಿನಲ್ಲಿ ಚಲಿಸಲು ಆರಂಭಿಸಿದಾಗ  ಧೂಮ್ ಚಲನಚಿತ್ರದ ಸಂಗೀತವನ್ನು ಹಾಕಿರಲಿಲ್ಲ.