ಕರ್ನಾಟಕದ ಪ್ರಸಿದ್ಧ ಜೈನ ಸನ್ಯಾಸಿ ಆಚಾರ್ಯ ಕಾಮಕುಮಾರ್ ನಂದಿನಿ ಅವರ ಹತ್ಯೆ ಪ್ರಕರಣದಲ್ಲಿ, ಇಬ್ಬರು ಆರೋಪಿಗಳಲ್ಲಿ ಒಬ್ಬ ಹಿಂದೂ ಮತ್ತು ಇನ್ನೊಬ್ಬ ಮುಸ್ಲಿಂ

ಕರ್ನಾಟಕದಲ್ಲಿ ಖ್ಯಾತ ಜೈನ ಸನ್ಯಾಸಿ ಆಚಾರ್ಯ ಕಾಮಕುಮಾರ್ ನಂದಿಯನ್ನು ಇಬ್ಬರು ಇಸ್ಲಾಮಿಕ್ ಭಯೋತ್ಪಾದಕರು ಕೊಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತಿತ್ತು. ಆ ಸುದ್ದಿಯ ನಿಜಾಂಶ ಏನು ಎಂಬುದನ್ನು ಪರಿಶೀಲಿಸೋಣ.

ಕ್ಲೇಮ್ : ಖ್ಯಾತ ಜೈನ ಸನ್ಯಾಸಿ ಆಚಾರ್ಯ ಕಾಮಕುಮಾರ್ ನಂದಿನಿ  ಅವರನ್ನು ಕರ್ನಾಟಕದಲ್ಲಿ ಇಬ್ಬರು ಇಸ್ಲಾಮಿಕ್ ಭಯೋತ್ಪಾದಕರು ಕೊಂದಿದ್ದಾರೆ.

ಫ್ಯಾಕ್ಟ್ : ಕರ್ನಾಟಕದ ಪ್ರಸಿದ್ಧ ಜೈನ ಸನ್ಯಾಸಿ ಆಚಾರ್ಯ ಕಾಮಕುಮಾರ್ ನಂದಿನಿ ಅವರ ಹತ್ಯೆಗೆ ಸಂಬಂಧಿಸಿದಂತೆ ಹಸನ್ ದಲಾಯತ್ ಮತ್ತು ನಾರಾಯಣ ಬಸಪ್ಪ ಮಡಿ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿ ನಾರಾಯಣ ಬಸಪ್ಪ ಮಡಿ ಅವರನ್ನು ಎ1 ಮತ್ತು ಹಸನ್ ಡಾಲಾಯತ್ ಅವರನ್ನು ಎ2 ಎಂದು ಗುರುತಿಸಲಾಗಿದೆ. ಅವರಲ್ಲಿ ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಮುಸ್ಲಿಂ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದಲಾದ ಕ್ಲೇಮ್ ತಪ್ಪು.

ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮವೊಂದರ ಆಶ್ರಮದಲ್ಲಿ ಇತ್ತೀಚೆಗೆ ನಾಪತ್ತೆಯಾಗಿದ್ದ ಖ್ಯಾತ ಜೈನ ಸನ್ಯಾಸಿ ಆಚಾರ್ಯ ಕಾಮಕುಮಾರ್ ನಂದಿನಿ  ಅವರನ್ನು ಹತ್ಯೆ ಮಾಡಲಾಗಿದೆ. ಜಿಲ್ಲೆಯ ಬೋರ್‌ವೆಲ್‌ನಲ್ಲಿ ಜೈನ ಸನ್ಯಾಸಿಯ ದೇಹದ ಭಾಗಗಳು ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಹಸನ್ ದಲಾಯತ್ ಹಾಗೂ ನಾರಾಯಣ ಬಸಪ್ಪ ಮಡಿ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಇಬ್ಬರು ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಶ್ರಮದಲ್ಲಿ ತನ್ನ ಭಕ್ತನೊಂದಿಗೆ ಹಣದ ವಿವಾದದ ಕಾರಣ ಜುಲೈ 6 ರಂದು ಜೈನ ಸನ್ಯಾಸಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ (ಇಲ್ಲಿ, ಇಲ್ಲಿ).

ಈ ಕೊಲೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಚಿಕ್ಕೋಡಿ ಪೊಲೀಸರನ್ನು ಸಂಪರ್ಕಿಸಿದಾಗ, ಈ ಕೊಲೆಯ ಪ್ರಮುಖ ಆರೋಪಿ ಎ1 ಹಿಂದೂ ಮತ್ತು ಎ2 ಮುಸ್ಲಿಂ ಎಂದು ಹೇಳಿದ್ದಾರೆ. ಈ ಕೊಲೆಯಲ್ಲಿ ಯಾವುದೇ ಧಾರ್ಮಿಕ ಆಯಾಮ/ಧಾರ್ಮಿಕ ದ್ವೇಷ ಇಲ್ಲ, ಹಣಕಾಸಿನ ವಹಿವಾಟು ಮಾತ್ರ ಕಾರಣ ಎಂದು ತಿಳಿದು ಬಂದಿದೆ.

ಪ್ರಚಾರವಾದ ಲೇಖನಗಳಲ್ಲಿ ಇಬ್ಬರು ಆರೋಪಿಗಳ ಫೋಟೋಗಳನ್ನು ಸಹ ಹೊಂದಿದ್ದವು (ಇಲ್ಲಿವೆ). ಮೇಲೆ ಹೇಳಿದಂತೆ ಇಬ್ಬರಲ್ಲಿ ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಮುಸ್ಲಿಂ. ಆದರೆ ವೈರಲ್ ಪೋಸ್ಟ್‌ನಲ್ಲಿ ಮುಸ್ಲಿಂ ಆರೋಪಿಗಳ ಫೋಟೋ ಮಾತ್ರ ಶೇರ್ ಆಗುತ್ತಿದೆ.

ಅಂತಿಮವಾಗಿ, ಕರ್ನಾಟಕದ ಪ್ರಸಿದ್ಧ ಜೈನ ಸನ್ಯಾಸಿ ಆಚಾರ್ಯ ಕಾಮಕುಮಾರ್ ನಂದಿನಿ ಅವರ ಹತ್ಯೆ ಪ್ರಕರಣದಲ್ಲಿ, ಇಬ್ಬರು ಆರೋಪಿಗಳಲ್ಲಿ ಒಬ್ಬ ಹಿಂದೂ ಮತ್ತು ಇನ್ನೊಬ್ಬ ಮುಸ್ಲಿಂ.