ಭಾರತದಲ್ಲಿ ‘ಪ್ರತಿ ವ್ಯಕ್ತಿಗೆ ಹಾಲಿನ ಲಭ್ಯತೆಯನ್ನು’ ಲೆಕ್ಕ ಮಾಡುವಾಗ ಅಳತೆಗೋಲಾಗಿ ‘ಗ್ರಾಂ/ದಿನದ’ ಎಂದು ಬಳಸಲಾಗುತ್ತದೆ

2021ರಲ್ಲಿ ಭಾರತದಲ್ಲಿ ಹಾಲಿನ ಉತ್ಪಾದನೆಯು 40 ಗ್ರಾಂನಿಂದ 155 ಗ್ರಾಂಗೆ ಏರಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ, ಹಾಲನ್ನು ಅಳೆಯಲು ಅವರು ಲೀಟರ್/ಮಿಲಿ ಲೀಟರ್ ಬದಲಿಗೆ, ಗ್ರಾಂ ಬಳಸಿದ್ದಾರೆ ಎಂದು ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಅಮಿತ್ ಶಾ ಅವರು ಭಾಷಣದ ಸಮಯದಲ್ಲಿ ಹಾಲಿನ ಅಳತೆಯನ್ನು ಲೀಟರ್/ಮಿಲಿ-ಲೀಟರ್ ನಲ್ಲಿ ಹೇಳುವ  ಬದಲಿಗೆ, ಗ್ರಾಂ ಎಂದು ತಪ್ಪಾಗಿ ಹೇಳಿದ್ದಾರೆ.

ನಿಜಾಂಶ : ಅಮಿತ್ ಶಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ಮೂಲ ವೀಡಿಯೊದಲ್ಲಿ ಅವರು ದೇಶದಲ್ಲಿ ಹಾಲಿನ ಲಭ್ಯತೆ’ ಕುರಿತು ಮಾತನಾಡುತ್ತಿದ್ದಾರೆ. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಪ್ರಕಾರ, ಭಾರತದಲ್ಲಿ ಹಾಲಿನ ‘ತಲಾವಾರು ಲಭ್ಯತೆ’ಯನ್ನು ‘ಗ್ರಾಂ/ದಿನ’ದಲ್ಲಿ ಅಳೆಯಲಾಗುತ್ತದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಮತ್ತು ಆರ್ಥಿಕ ಸಮೀಕ್ಷೆಯ ವೆಬ್‌ಸೈಟ್‌ಗಳಲ್ಲಿಯೂ ಅದನ್ನೆ ಉಲ್ಲೇಖಿಸಲಾಗಿದೆ. ಅಲ್ಲದೆ, ಆಹಾರ ಮತ್ತು ಕೃಷಿ ಸಂಸ್ಥೆಯು ಜಾಗತಿಕವಾಗಿ ಹಾಲಿನ ‘ತಲಾವಾರು ಲಭ್ಯತೆ’ಯನ್ನು ಅಳೆಯಲು ಕಿಲೋಗ್ರಾಮ್/ವರ್ಷವನ್ನು ಬಳಸುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಅಮಿತ್ ಶಾ ಅವರ ವಿಡಿಯೋದಿದಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, 12 ಸೆಪ್ಟೆಂಬರ್ 2022 ರಂದು ಅಮಿತ್ ಶಾ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಿದ ವೀಡಿಯೊ ಲಭ್ಯವಾಗಿದ್ದು, ಗ್ರೇಟರ್ ನೋಯ್ಡಾದಲ್ಲಿ ನಡೆದ ಅಂತರಾಷ್ಟ್ರೀಯ ಡೈರಿ ಫೆಡರೇಶನ್‌ನ ವಿಶ್ವ ಡೈರಿ ಶೃಂಗಸಭೆ 2022 ರಲ್ಲಿ “ಡೈರಿ ವಲಯಕ್ಕೆ ಸಹಕಾರಿ ಸಂಸ್ಥೆಗಳ ಪ್ರಸ್ತುತತೆ” ಕುರಿತು ಅಮಿತ್ ಶಾ ಮಾತನಾಡಿದ್ದರು.

ದೇಶದ ಹಾಲು ಉತ್ಪಾದನೆಯ ಕುರಿತು ಅಮಿತ್ ಶಾ ಮಾತನಾಡುವುದು 25:10 ಸಮಯದ ಸ್ಟ್ಯಾಂಪ್‌ನಿಂದ ತೋರಿಸುತ್ತದೆ, “1978 ರಲ್ಲಿ, ದೇಶದ ಪ್ರತಿಯೊಬ್ಬ ವ್ಯಕ್ತಿಗೆ 40 ಗ್ರಾಂ ಹಾಲು ಲಭ್ಯವಿತ್ತು. ಸಹಕಾರಿ ಡೈರಿಯಿಂದಾಗಿ, 2021 ರಲ್ಲಿ, ದೇಶದಲ್ಲಿ ಹಾಲಿನ ಉತ್ಪಾದನೆಯು 40 ಗ್ರಾಂನಿಂದ 155 ಗ್ರಾಂಗೆ ಏರಿದೆ. ಇದು ದೊಡ್ಡ ಸಾಧನೆಯಾಗಿದೆ” ಎಂದು ಅವರು ಹೇಳುತ್ತಾರೆ.

ಅಮಿತ್ ಶಾ ಭಾಷಣದಲ್ಲಿ ‘ಪ್ರತಿಯೊಬ್ಬ ವ್ಯಕ್ತಿ’ ಎಂದು ಪ್ರಸ್ತಾಪಿಸಿದಂತೆ, ಅವರು ದೇಶದಲ್ಲಿ ಹಾಲಿನ ತಲಾ ಲಭ್ಯತೆಯ ಬಗ್ಗೆ ಮಾತನಾಡುತ್ತಿದ್ದರು. ಆದ್ದರಿಂದ, ನಾವು ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಬಿಡುಗಡೆ ಮಾಡಿದ 2021-22 ರ ವಾರ್ಷಿಕ ವರದಿಯನ್ನು ನೋಡಿದ್ದೇವೆ ಮತ್ತು ದೇಶದಲ್ಲಿ ‘ಹಾಲಿನ ಉತ್ಪಾದನೆ’ಯನ್ನು ‘ಮಿಲಿಯನ್ ಟನ್’ಗಳಲ್ಲಿ ಅಳೆಯಲಾಗುತ್ತದೆ ಮತ್ತು ‘ತಲಾವಾರು ಲಭ್ಯತೆ’ ಅನ್ನು ಗ್ರಾಂ/ದಿನ’ ಲೆಕ್ಕದಲ್ಲಿ ಅಳೆಯಲಾಗುತ್ತದೆ.

ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಹಾಲಿನ ‘ತಲಾವಾರು ಲಭ್ಯತೆ’ಯನ್ನು ‘ಗ್ರಾಂ/ದಿನ’ದಲ್ಲಿ ಅಳೆಯುತ್ತದೆ

ಅದೇ ಅಳತೆಯ ಘಟಕವನ್ನು ಭಾರತದ ಆರ್ಥಿಕ ಸಮೀಕ್ಷೆ, 2021-22ರಲ್ಲಿಯೂ ಬಳಸಲಾಗಿದೆ.

ಅಲ್ಲದೆ, 01 ಜೂನ್ 2021 ರ ಪತ್ರಿಕಾ ಪ್ರಕಟಣೆಯಲ್ಲಿ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ದೇಶದಲ್ಲಿ ‘ಪ್ರತಿ ವ್ಯಕ್ತಿಗೆ ಹಾಲು ಲಭ್ಯತೆಯ’ ಬೆಳವಣಿಗೆಯನ್ನು ಸೂಚಿಸಲು ‘ಗ್ರಾಮ್ಸ್/ದಿನ’ ಎಂದು ಬಳಸಲಾಗಿದೆ.

ಇದಲ್ಲದೆ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಜಾಗತಿಕ ಹಾಲಿನ ಬಳಕೆಯನ್ನು ಅಳೆಯುವಾಗ ‘ಕಿಲೋಗ್ರಾಮ್/ವರ್ಷ’ ಅನ್ನು ಬಳಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತದಲ್ಲಿ ಹಾಲಿನ ‘ತಲಾವಾರು ಲಭ್ಯತೆ’ಯನ್ನು ‘ಗ್ರಾಂ/ದಿನದ ಲೆಕ್ಕದಲ್ಲಿ ಅಳೆಯಲಾಗುತ್ತದೆ, ಲೀಟರ್ ಅಥವಾ ಮಿಲಿ-ಲೀಟರ್‌ಗಳಲ್ಲ.