ಮಾಜಿ ಮಿಸ್ ಉಕ್ರೇನ್ ಅನಸ್ತಾಸಿಯಾ ಲೆನ್ನಾ ರಷ್ಯಾದ ಸೈನ್ಯದ ವಿರುದ್ಧ ಹೋರಾಡಲು ಉಕ್ರೇನ್ ಸೈನ್ಯಕ್ಕೆ ಸೇರಲಿಲ್ಲ

ಮಾಜಿ ಮಿಸ್ ಉಕ್ರೇನ್ ಅನಸ್ತಾಸಿಯಾ ಲೆನ್ನಾ ಅವರು ಗನ್ ಹಿಡಿದು ರಷ್ಯಾದ ಆಕ್ರಮಣದ ವಿರುದ್ಧ ತನ್ನ ದೇಶವನ್ನು ರಕ್ಷಿಸುತ್ತಿರುವ ಇತ್ತೀಚಿನ ಚಿತ್ರಗಳೆಂದು ಹೇಳಿಕೊಳ್ಳುವ ಕೊಲಾಜ್  ಮಾಡಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅನಸ್ತಾಸಿಯಾ ಲೆನ್ನಾ ತನ್ನ ದೇಶಕ್ಕಾಗಿ ಮಾಡೆಲಿಂಗ್‌ ಕ್ಷೇತ್ರವನ್ನು ತ್ಯಜಿಸಿ ರಷ್ಯಾದ ಸೈನ್ಯದ ವಿರುದ್ಧ ಹೋರಾಡಲು ಉಕ್ರೇನ್ ಸೈನ್ಯವನ್ನು ಸೇರಿಕೊಂಡಿದ್ದಾರೆ ಎಂದು ಈ ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ. ರಷ್ಯಾದ ಸೈನಿಕರ ವಿರುದ್ಧ ತಮ್ಮ ದೇಶವನ್ನು ರಕ್ಷಿಸಲು ಬಯಸುವ ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಕರೆಕೊಟ್ಟ ಹಿನ್ನೆಲೆಯಲ್ಲಿ, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಮಾಜಿ ಮಿಸ್ ಉಕ್ರೇನ್ ಅನಸ್ತಾಸಿಯಾ ಲೆನ್ನಾ ರಷ್ಯಾದ ಸೈನ್ಯದ ವಿರುದ್ಧ ತನ್ನ ದೇಶವನ್ನು ರಕ್ಷಿಸಲು ಸೈನ್ಯಕ್ಕೆ ಸೇರಿದರು.

ನಿಜಾಂಶ: ಅನಸ್ತಾಸಿಯಾ ಲೆನ್ನಾ ಇತ್ತೀಚೆಗೆ ತನ್ನ ಅಧಿಕೃತ Instagram ಹ್ಯಾಂಡಲ್‌ನಲ್ಲಿ ಗನ್ ಹಿಡಿದಿರುವ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಂತರ ರಷ್ಯಾ ವಿರುದ್ಧ ಹೋರಾಡುತ್ತಿರುವ ಜನರನ್ನು ಪ್ರೇರೇಪಿಸಲು ಈ ಚಿತ್ರವನ್ನು ಹಂಚಿಕೊಂಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅನಸ್ತಾಸಿಯಾ ಲೆನ್ನಾ ಸ್ವತಃ ಆಟಿಕೆ ಗನ್‌ನೊಂದಿಗೆ ಫೋಟೋ ಶೇರ್‌ ಮಾಡಿದ್ದಾರೆ. ಇದು ಏರ್‌ಸಾಫ್ಟ್ ಆಟಿಕೆ ಎಂದು ಉಲ್ಲೇಖಿಸಿದ್ದಾರೆ ಮತ್ತು ರಷ್ಯಾದ ಸೈನ್ಯದ ವಿರುದ್ಧ ಹೋರಾಡಲು ಉಕ್ರೇನ್ ಸೈನ್ಯಕ್ಕೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪುದಾರಿಗೆಳೆಯುವಂತಿದೆ.

ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಲಾಗಿದ್ದು, ಅದೇ ಫೋಟೋವನ್ನು ಮಾಜಿ ಮಿಸ್ ಉಕ್ರೇನ್ ಅನಸ್ತಾಸಿಯಾ ಲೆನ್ನಾ ಅವರ ಅಧಿಕೃತ Instagram ಹ್ಯಾಂಡಲ್‌ನಲ್ಲಿ 22 ಫೆಬ್ರವರಿ 2022 ರಂದು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಅನಸ್ತಾಸಿಯಾ ಲೆನ್ನಾ ಈ ಫೋಟೊವನ್ನು #standwithukraine, #handsoffukraine ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಹಂಚಿಕೊಂಡಿದ್ದಾರೆ.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ದೇಶವನ್ನು ರಕ್ಷಿಸಲು ಅನಸ್ತಾಸಿಯಾ ಲೆನ್ನಾಅವರು ಶಸ್ತ್ರಾಸ್ತ್ರಗಳನ್ನು ತಹಿಡಿದ್ದಾರೆ ಎಂದು ಭಾವಿಸಿ ಈ ಚಿತ್ರವನ್ನು ಹಂಚಿಕೊಂಡಾಗ, ಅನಸ್ತಾಸಿಯಾ ಲೆನ್ನಾ ಮತ್ತೊಂದು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ಚಿತ್ರದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದ್ದರು. ಅದರಲ್ಲಿ ಅನಸ್ತಾಸಿಯಾ ಲೆನ್ನಾ, “ನಾನು ಮಿಲಿಟರಿ ಅಲ್ಲ, ಕೇವಲ ಒಬ್ಬ ಮನುಷ್ಯ. ಪ್ರಸ್ತುತ ಪರಿಸ್ಥಿತಿಯಿಂದಾಗಿ ನಾನು ಮಾತನಾಡಲು ಬಯಸುತ್ತೇನೆ! ನಾನು ಮಿಲಿಟರಿ ಅಲ್ಲ, ಕೇವಲ ಮಹಿಳೆ, ಕೇವಲ ಸಾಮಾನ್ಯ ಮನುಷ್ಯ. ನನ್ನ ದೇಶದ ಎಲ್ಲ ಜನರಂತೆ ಒಬ್ಬ ವ್ಯಕ್ತಿ. ನಾನು ಕೆಲ ವರ್ಷಗಳಿಂದ ಏರ್‌ಸಾಫ್ಟ್ ಆಟಗಾರಳಾಗಿದ್ದೇನೆ. #airsoft ಎಂದರೆ ಏನು ಎಂದು ನೀವು ಗೂಗಲ್ ಮಾಡಬಹುದು. ನನ್ನ ಪ್ರೊಫೈಲ್‌ನಲ್ಲಿರುವ ಎಲ್ಲಾ ಚಿತ್ರಗಳು ಜನರನ್ನು ಪ್ರೇರೇಪಿಸಲು ಮಾತ್ರ ಎಂದು ಹೇಳಿದ್ದು. ಅನಸ್ತಾಸಿಯಾ ಲೆನ್ನಾ ಅವರು ಯಾವುದೇ ಪ್ರಚಾರಕ್ಕಾಗಿ ಈ ಚಿತ್ರವನ್ನು ಹಂಚಿಕೊಂಡಿಲ್ಲ ಆದರೆ, ಉಕ್ರೇನಿಯನ್ ಮಹಿಳೆಯರು ಎಷ್ಟು ಪ್ರಬಲ, ಆತ್ಮವಿಶ್ವಾಸ ಮತ್ತು ಶಕ್ತಿಶಾಲಿ ಎಂಬುದನ್ನು ತೋರಿಸಲು ಎಂದು ಸ್ಪಷ್ಟಪಡಿಸಿದ್ದಾರೆ.

ಹಲವು ಸುದ್ದಿ ವೆಬ್‌ಸೈಟ್‌ಗಳು ಅನಸ್ತಾಸಿಯಾ ಲೆನ್ನಾ ಅವರ ಗನ್‌ ಹಿಡಿದಿರುವ ವೈರಲ್ ಫೋಟೋ ಬಗ್ಗೆ ಸ್ಪಷ್ಟೀಕರಣವನ್ನು ವರದಿ ಮಾಡುವ ಲೇಖನಗಳನ್ನು ಪ್ರಕಟಿಸಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ಎಲ್ಲಾ ಪುರಾವೆಗಳಿಂದ, ಅನಸ್ತಾಸಿಯಾ ಲೆನ್ನಾ ರಷ್ಯಾದ ಸೈನ್ಯದ ವಿರುದ್ಧ ಹೋರಾಡಲು ಉಕ್ರೇನ್ ಸೈನ್ಯವನ್ನು ಸೇರಲಿಲ್ಲ ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮಾಜಿ ಮಿಸ್ ಉಕ್ರೇನ್ ಅನಸ್ತಾಸಿಯಾ ಲೆನ್ನಾ ರಷ್ಯಾದ ಸೈನ್ಯದ ವಿರುದ್ಧ ಹೋರಾಡಲು ಉಕ್ರೇನ್ ಸೈನ್ಯಕ್ಕೆ ಸೇರಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.