ಬಿಹಾರದಲ್ಲಿ ‘ಜ್ಯೋತಿ ಕುಮಾರಿ’ ಬಾಲಕಿಯ ಸಾವನ್ನು ‘ಸೈಕಲ್ ಹುಡುಗಿ’ ಜ್ಯೋತಿ ಕುಮಾರಿ ಪಾಸ್ವಾನ್ ಅವರೊಂದಿಗೆ ತಪ್ಪಾಗಿ ಸಂಬಂಧಿಸಲಾಗಿದೆ

ಬಿಹಾರದಲ್ಲಿ ನಡೆದ ಘಟನೆಯಲ್ಲಿ ‘ಸೈಕಲ್ ಹುಡುಗಿ’ ಜ್ಯೋತಿ ಕುಮಾರಿ ಪಾಸ್ವಾನ್ ಮೃತಪಟ್ಟಿದ್ದಾರೆ ಎಂದು ಮೂರು ಫೋಟೋಗಳಿರುವ ಕೊಲಾಜ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಂದೆಯೊಂದಿಗೆ ಏಳು ದಿನಗಳಲ್ಲಿ ಗುರುಗ್ರಾಮ್‌ನಿಂದ 1,200 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿರುವ ದರ್ಭಂಗಕ್ಕೆ ಸೈಕ್ಲಿಂಗ್ ಮಾಡಿದ ನಂತರ ಜ್ಯೋತಿ ಕುಮಾರಿ ಪಾಸ್ವಾನ್ ಜನಪ್ರಿಯರಾದರು. ಪೋಸ್ಟ್ ನಲ್ಲಿ, ಜ್ಯೋತಿ ಕುಮಾರಿ ಪಾಸ್ವಾನ್ ಅವರು ಪಟೋರಿ ಗ್ರಾಮದ ಅರ್ಜುನ್ ಮಿಶ್ರಾ ಅವರ ಹಣ್ಣಿನ ತೋಟದಿಂದ ಮಾವಿನಹಣ್ಣನ್ನು ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ. ಪೋಸ್ಟ್ ನಲ್ಲಿ ಮಾಡಿದ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ‘ಸೈಕಲ್ ಹುಡುಗಿ’ ಜ್ಯೋತಿ ಕುಮಾರಿ ಪಾಸ್ವಾನ್ ನಿಧನರಾಗಿದ್ದಾರೆ.

ನಿಜಾಂಶ: ಪಟೋರಿ ಗ್ರಾಮದ ಅರ್ಜುನ್ ಮಿಶ್ರಾ ಅವರ ಹಣ್ಣಿನ ತೋಟದಿಂದ ಮಾವಿನ ಕಳ್ಳತನದಲ್ಲಿ ಸಿಕ್ಕಿಬಿದ್ದ ನಂತರ ‘ಜ್ಯೋತಿ ಕುಮಾರಿ’ ಎಂಬ ಹುಡುಗಿಯನ್ನು ಕೊಲ್ಲಲಾಯಿತು ಎಂಬುದು ನಿಜ, ಆದರೆ ಅವಳು ಗುರುಗ್ರಾಮ್‌ನಿಂದ ದರ್ಭಂಗಕ್ಕೆ ಸೈಕಲ್ ತುಳಿದು ಹೋದ ‘ಸೈಕಲ್ ಹುಡುಗಿ’ ಜ್ಯೋತಿ ಕುಮಾರಿ ಪಾಸ್ವಾನ್ ಅಲ್ಲ. ಆದ್ದರಿಂದ, ‘ಜ್ಯೋತಿ ಕುಮಾರಿ’ ಎಂಬ ಅದೇ ಹೆಸರಿನ ಇನ್ನೊಬ್ಬ ಹುಡುಗಿಯ ಸಾವನ್ನು ‘ಸೈಕಲ್ ಹುಡುಗಿ’ ಜ್ಯೋತಿ ಕುಮಾರಿ ಪಾಸ್ವಾನ್ ಅವರೊಂದಿಗೆ ತಪ್ಪಾಗಿ ಸಂಬಂಧಿಸಲಾಗಿದೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಜ್ಯೋತಿ ಕುಮಾರಿ ಪಾಸ್ವಾನ್ ಗುರುಗ್ರಾಮ್‌ನಿಂದ 1,200 ಕಿ.ಮೀ.ಗೂ ಹೆಚ್ಚು ದೂರವಿರುವ ದರ್ಭಂಗಾಗೆ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಸೈಕಲ್ಲಿನಲ್ಲಿ ಕೂರಿಸಿಕೊಂಡು ಏಳು ದಿನಗಳಲ್ಲಿ ಬಂದರು. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಕೂಡ ಜ್ಯೋತಿ ಕುಮಾರಿ ಪಾಸ್ವಾನ್ ಅವರನ್ನು ತಮ್ಮ ಟ್ವೀಟ್ ನಲ್ಲಿ ಹೊಗಳಿದ್ದರು.

ಪೋಸ್ಟ್ ನಲ್ಲಿ ಹೇಳಲಾಗಿರುವ ಘಟನೆಯ ಬಗ್ಗೆ ನಾವು ಗೂಗಲ್ ನಲ್ಲಿ ಕೀವರ್ಡ್ ಗಳೊಂದಿಗೆ ಹುಡುಕಿದಾಗ, ಬಿಹಾರದ ಪಟೋರಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ ಎಂದು ಸುದ್ದಿ ವರದಿಗಳು ಕಂಡುಬಂದಿವೆ. ‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ತನ್ನ ಹಣ್ಣಿನ ತೋಟದಿಂದ ಮಾವಿನಹಣ್ಣು ಕದಿಯುತ್ತಿದ್ದಾಗ ಸಿಕ್ಕಿಬಿದ್ದ ಜ್ಯೋತಿ ಕುಮಾರಿ ಎಂಬ ಹುಡುಗಿಯನ್ನು ಅರ್ಜುನ್ ಮಿಶ್ರಾ ಕೊಂದಿದ್ದಾರೆ.

‘ಸೈಕಲ್ ಹುಡುಗಿ’ ಜ್ಯೋತಿ ಕುಮಾರಿ ಪಾಸ್ವಾನ್ ಸಾವಿನ ಸುದ್ದಿ ನಕಲಿ ಮತ್ತು ಆಕೆ ಸಂಪೂರ್ಣ ಆರೋಗ್ಯವಾಗಿದ್ದಾಳೆ ಎಂದು ‘ದರ್ಭಂಗಾ ಪೊಲೀಸರು’ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಮರಣೋತ್ತರ ವರದಿಯ ಪ್ರಕಾರ, ಜ್ಯೋತಿ ಕುಮಾರಿ (ಪಟೋರಿ ಗ್ರಾಮದ) ಸಾವಿಗೆ ಕಾರಣ ವಿದ್ಯುತ್ ಶಾಕ್.

ಖ್ಯಾತ ಎನ್‌ಜಿಒ ‘ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಷನ್ ಬ್ಯೂರೋ’ ಕೂಡ ಫೇಸ್‌ಬುಕ್‌ನಲ್ಲಿ ‘ಸೈಕಲ್ ಹುಡುಗಿ’ ಜ್ಯೋತಿ ಕುಮಾರಿ ಪಾಸ್ವಾನ್ ಸಾವಿನ ಸುದ್ದಿ ನಕಲಿ ಎಂದು ಸ್ಪಷ್ಟಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದಲ್ಲಿ ‘ಜ್ಯೋತಿ ಕುಮಾರಿ’ ಎಂಬ ಹುಡುಗಿಯ ಸಾವು ‘ಸೈಕಲ್ ಹುಡುಗಿ’ ಜ್ಯೋತಿ ಕುಮಾರಿ ಪಾಸ್ವಾನ್ ಅವರಿಗೆ ತಪ್ಪಾಗಿ ಸಂಬಂಧಿಸಿ ಹೇಳಲಾಗಿದೆ.