ಭಾರತದಲ್ಲಿ ತಯಾರಿಸಿ, ಮಾರಾಟವಾಗುವ ತನ್ನ ಎಲ್ಲಾ ಉತ್ಪನ್ನಗಳು 100% ಸಸ್ಯಾಹಾರಿ ಎಂದು ಕ್ಯಾಡ್ಬರಿ ಸ್ಪಷ್ಟಪಡಿಸಿದೆ

ಕ್ಯಾಡ್ಬರಿ ಬ್ರ್ಯಾಂಡ್ ವೆಬ್ಪೇಜ್ನಲ್ಲಿ ತಮ್ಮಉತ್ಪನ್ನಗಳಲ್ಲಿ ಹಲಾಲ್ ಸೂಚಿಸುವ ಗೆಲೆಟಿನ್ ಮತ್ತು ಗೋಮಾಂಸವನ್ನು ಉಪಯೋಗಿಸಲಾಗುತ್ತಿದೆ ಎನ್ನುವ  ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳಲಾಗಿತ್ತು. ಇದನ್ನು ಉಲ್ಲೇಖಿಸಿ, ಭಾರತದ ಅನೇಕ ಸಾಮಾಜಿಕ ಜಾಲತಾಣದಲ್ಲಿ ಈ ಬ್ರಾಂಡ್ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.  ಹಾಗಾದರೆ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಕ್ಯಾಡ್ಬರಿಯ ವೆಬ್‌ಸೈಟ್ ಪೇಜ್ ನಲ್ಲಿ ಭಾರತದಲ್ಲಿ ಮಾರಾಟವಾಗುವ ತಮ್ಮ ಉತ್ಪನ್ನಗಳನ್ನು ಗೋಮಾಂಸದಿಂದ ಮಾಡಲಾಗಿದೆ ಎಂದು ಉಲ್ಲೇಖಿಸಿದೆ.

ಫ್ಯಾಕ್ಟ್:  ಈ  ಸ್ಕ್ರೀನ್‌ಶಾಟ್ ಆಸ್ಟ್ರೇಲಿಯಾದ ಕ್ಯಾಡ್ಬರಿ ವೆಬ್‌ಸೈಟ್‌ ಅನ್ನು ಸೂಚಿಸುತ್ತದೆ. 2021 ರಲ್ಲಿ ಈ  ಸ್ಕ್ರೀನ್‌ಶಾಟ್  ವೈರಲ್ ಆಗಿದ್ದಾಗ, ಕಂಪೆನಿ ಭಾರತದಲ್ಲಿ ತಯಾರಾಗುವ ಮತ್ತು ಮಾರಾಟವಾಗುವ ತಮ್ಮ ಉತ್ಪನ್ನಗಳು 100% ಸಸ್ಯಾಹಾರಿ ಎಂದು ಸ್ಪಷ್ಟಿಕರಣ ನೀಡಿತ್ತು.  ಇದನ್ನು FSSAI ನಿಯಮಗಳ ಪ್ರಕಾರ ಪ್ಯಾಕ್‌ಗಳ ಮೇಲೆ ಹಸಿರು ಚುಕ್ಕೆಯಿಂದ ಸೂಚಿಸಲಾಗುತ್ತದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಡೊಮೇನ್ ಹೆಸರನ್ನು ಸ್ಕ್ರೀನ್‌ಶಾಟ್‌ನಲ್ಲಿ ನೀಡಲಾದ ವೆಬ್‌ಸೈಟ್‌ನ ಉನ್ನತ ಮಟ್ಟದಲ್ಲಿ ನೋಡಿದಾಗ, ಇದು ಆಸ್ಟ್ರೇಲಿಯಾ(.au)ಗೆ ಸೇರಿದ್ದು, ಭಾರತ(.in) ಅಲ್ಲ ಎಂಬುದು ಸ್ಪಷ್ಟವಾಗಿದೆ. ಈ ಕಂಪನಿಯ ಭಾರತೀಯ ವೆಬ್‌ಸೈಟ್ ನಲ್ಲಿ ವೈರಲ್ ಪೋಸ್ಟ್‌ಗೆ ಸಂಬಂದಿಸಿದ  ಯಾವುದೇ ಮಾಹಿತಿಯಿಲ್ಲ.

ಆಸ್ಟ್ರೇಲಿಯಾದ ಕ್ಯಾಡ್ಬರಿ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿಗಾಗಿ ಹುಡುಕಾಡಿದಾಗ,  ಪ್ರಸ್ತುತ  ವೈರಲ್ ಚಿತ್ರದಲ್ಲಿ ವೆಬ್‌ಸೈಟ್ ನಲ್ಲಿ ಕಂಡು ‘ಉತ್ಪನ್ನಗಳ’ ಬದಲಿಗೆ ‘ಆಸ್ಟ್ರೇಲಿಯನ್ ಉತ್ಪನ್ನಗಳ’ ಪದಗಳನ್ನು ಬಳಸಲಾಗಿದೆ.

18 ಜುಲೈ 2021 ರಂದು ‘ಕ್ಯಾಡ್ಬರಿ ಡೈರಿ ಮಿಲ್ಕ್’ ಮಾಡಿದ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ, ವೈರಲ್ ಸ್ಕ್ರೀನ್‌ಶಾಟ್ ಭಾರತದಲ್ಲಿ ತಯಾರಿಸಲಾದ ಮೊಂಡೆಲೆಜ್ ಉತ್ಪನ್ನಗಳಿಗೆ (ಕ್ಯಾಡ್ಬರಿಯ ಮೂಲ ಕಂಪನಿ) ಸಂಬಂಧಿಸಿಲ್ಲ ಹಾಗೂ ಭಾರತದಲ್ಲಿ ತಯಾರಿಸಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳು ಮೇಲೆ ಹಸಿರು ಚುಕ್ಕಿಗಳನ್ನು ನೋಡಬಹುದು ಇದು 100% ಸಸ್ಯಾಹಾರಿ ಎಂದು ಕಂಪನಿ ತಿಳಿಸಿದೆ. 

ಅಲ್ಲದೆ, ಕಂಪನಿಯು ಅದೇ ದಿನ ಈ ಸಮಸ್ಯೆಗೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ನೀಡಿದ್ದು, ವಿಚಾರಗಳನ್ನು ಹಂಚಿಕೊಳ್ಳುವ ಮೊದಲು ಸತ್ಯವನ್ನು ಪರಿಶೀಲಿಸಬೇಕಾಗಿ ಬಳಕೆದಾರರಲ್ಲಿ ವಿನಂತಿಸಿಕೊಂಡಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ನಿಯಮಗಳ ಪ್ರಕಾರ, ಪ್ರತಿಯೊಂದು ಸಸ್ಯಾಹಾರಿ ಆಹಾರದ ಪ್ಯಾಕೇಜ್‌ನಲ್ಲಿ ಹಸಿರು ಚೌಕದೊಳಗೆ ಹಸಿರು ಚುಕ್ಕೆಗಳ ಸಂಕೇತವನ್ನು ಪ್ರದರ್ಶಿಸಬೇಕು.

ಜುಲೈ 17, 2022 ರಿಂದ ವೆಬ್‌ಪುಟದ ಆರ್ಕೈವ್ ಆವೃತ್ತಿಯ ವೈರಲ್ ಪೋಸ್ಟ್‌ನಲ್ಲಿ ಈಗಾಗಲೇ ಕಂಡುಕೊಂಡಂತೆ  ‘ಉತ್ಪನ್ನಗಳು’ ಎಂಬ ಪದವನ್ನು ಬಳಸಿರುವುದನ್ನು ಕಂಡುಕೊಂಡಿದ್ದೇವೆ. ಆದರೆ, ಅಕ್ಟೋಬರ್ 2021ರಿಂದ, ಇಂತಹ ಗೊಂದಲವನ್ನು ತಪ್ಪಿಸಲು ‘ಉತ್ಪನ್ನಗಳ’ ಬದಲಿಗೆ ‘ಆಸ್ಟ್ರೇಲಿಯನ್ ಉತ್ಪನ್ನಗಳು’ ಎಂಬುದನ್ನು ತೋರಿಸುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕ್ಯಾಡ್ಬರಿಯು ಭಾರತದಲ್ಲಿ ತಯಾರಿಸಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳನ್ನು 100% ಸಸ್ಯಾಹಾರಿ ಎಂದು ಸ್ಪಷ್ಟಪಡಿಸಿದೆ ಮತ್ತು ವೈರಲ್ ಸ್ಕ್ರೀನ್‌ಶಾಟ್  ಆಸ್ಟ್ರೇಲಿಯಾದ ಹಳೆಯ ವೆಬ್‌ಸೈಟ್ ಅನ್ನು ತೋರಿಸುತ್ತದೆ.