ರ ಮಹಾಕುಂಭ ಮೇಳದಲ್ಲಿ ಅನುಮಾನದ ಮೇಲೆ ಸಿಕ್ಕಿಬಿದ್ದ ಅಯೂಬ್ ಅಲಿ ಭಯೋತ್ಪಾದಕನಲ್ಲ ಎಂದು ತಮ್ಮ ತನಿಖೆಯಿಂದ ತಿಳಿದುಬಂದಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ

“2025 ರ ಮಹಾಕುಂಭ ಮೇಳದ ಸಮಯದಲ್ಲಿ ಪೊಲೀಸರು ಆಯುಬ್ ಖಾನ್ ಎಂಬ ಭಯೋತ್ಪಾದಕನನ್ನು ಹಿಡಿದಿದ್ದು, ಅವನು ಸಂತನ ಮಾರುವೇಷ ಧರಿಸಿ ಬಂದು ನಮ್ಮ ಸಂತರನ್ನು ಭೇಟಿಯಾದನೆಂದು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ನೀರಿನಲ್ಲಿ ಹಿಡಿದಿಟ್ಟುಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: 2025 ರ ಮಹಾಕುಂಭ ಮೇಳದಲ್ಲಿ ಸಂತನ ವೇಷ ಧರಿಸಿದ್ದ ಅಯೂಬ್ ಖಾನ್ ಎಂಬ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿರುವ ಫೋಟೋ.  

ಫ್ಯಾಕ್ಟ್: 2025 ರ ಜನವರಿ 14 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಮಹಾಕುಂಭ ಮೇಳದ ಯತಿ ನರಸಿಂಹಾನಂದ ಶಿಬಿರದ ಬಳಿ ಅಯೂಬ್ ಅಲಿ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದಾಗ, ನರಸಿಂಹಾನಂದರ ಕೆಲವು ಶಿಷ್ಯರು ಅವನನ್ನು ಹಿಡಿದು ಪ್ರಶ್ನಿಸಿದ್ದರು. ಆ ಸಮಯದಲ್ಲಿ ಅವನು ತನ್ನ ಹೆಸರು ಆಯುಷ್ ಎಂದು ಹೇಳಿದ್ದ. ಅಲ್ಲಿದ್ದ ಸಂತರು ಅವನ ವರ್ತನೆಯಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ, ಅವನ ನಿಜವಾದ ಹೆಸರು ಅಯೂಬ್ ಅಲಿ ಎಂದು ತಿಳಿದುಬಂದಿದೆ. ಆದರೆ,  ಅಯೂಬ್ ಅಲಿಯನ್ನು ವಶಕ್ಕೆ ಪಡೆದ ಮಹಾಕುಂಭ ಮೇಳ ಅಖ್ರಾ ಪೊಲೀಸ್ ಠಾಣೆಯ ಉಸ್ತುವಾರಿ ಭಾಸ್ಕರ್ ಮಿಶ್ರಾ  ನಮಗೆ (ಫಾಕ್ಟ್ಲಿ)ತಿಳಿಸಿದ್ದಾರೆ.  ಪೊಲೀಸ್ ತನಿಖೆಯಲ್ಲಿ ಅವನು ಭಯೋತ್ಪಾದಕನಲ್ಲ ಮತ್ತು ಅವನು ಯಾವುದೇ ಭಯೋತ್ಪಾದಕನ ವೇಷದಲ್ಲಿ ಇರಲಿಲ್ಲ, ಬದಲಾಗಿ ಸಂತನ ವೇಷದಲ್ಲಿದ್ದ ಎಂದು ಹೇಳಿದ್ದಾರೆ. ಅಲ್ಲದೆ, ಈ ವೈರಲ್ ಫೋಟೋವನ್ನು AI ಬಳಸಿ ರಚಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.

ಈ ವೈರಲ್ ಪೋಸ್ಟ್‌ನಲ್ಲಿ ಮೊದಲೇ ಹೇಳಿದಂತೆ, 2025 ರ ಕುಂಭಮೇಳದಲ್ಲಿ ಸಂತನ ವೇಷ ಧರಿಸಿದ್ದ ಅಯೂಬ್ ಖಾನ್ ಎಂಬ ಭಯೋತ್ಪಾದಕನನ್ನು ಪೊಲೀಸರು ಬಂಧಿಸಿದ್ದಾರೆಯೇ? ಎಂದು ಸೂಕ್ತ ಕೀವರ್ಡ್‌ಗಳನ್ನು ಬಳಸಿ ಇಂಟರ್ನೆಟ್ ನಲ್ಲಿ ಹುಡುಕಿದಾಗ, ಕುಂಭಮೇಳದಲ್ಲಿ ಪೊಲೀಸರು ಅಯೂಬ್ ಎಂಬ ವ್ಯಕ್ತಿಯನ್ನು ಬಂಧಿಸಿದ ಬಗ್ಗೆ ಹಲವಾರು ನ್ಯೂಸ್ ರಿಪೋರ್ಟ್ ಗಳು ನಮಗೆ ದೊರಕಿದೆ (ಇಲ್ಲಿ, ಇಲ್ಲಿ, ಇಲ್ಲಿ). ಇದರ ಪ್ರಕಾರ, ಜನವರಿ 14, 2025 ರಂದು, ಬೆಳಗಿನ ಜಾವ 2 ಗಂಟೆ ಸುಮಾರಿಗೆ, ಮಹಾಕುಂಭ ಮೇಳದ ಯೇತಿ ನರಸಿಂಹಾನಂದ ಶಿಬಿರದ ಬಳಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ, ನರಸಿಂಹಾನಂದರ ಕೆಲವು ಶಿಷ್ಯರು ಅವನನ್ನು ಹಿಡಿದು ಪ್ರಶ್ನಿಸಿದ್ದರು. ಮೊದಲು ಅವನು ಯತಿ ನರಸಿಂಹಾನಂದರನ್ನು ಭೇಟಿಯಾಗಲು ಬಂದಿದ್ದೇನೆ ಹಾಗೂ ಅವನ ಹೆಸರು ಆಯುಷ್ ಎಂದು ಹೇಳಿದ್ದಾನೆ. ಆದರೆ, ಅಲ್ಲಿದ್ದ ಕೆಲ ಸಂತರು ಅವನ ವರ್ತನೆಯಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ವಿಚಾರಣೆಯ ಸಮಯದಲ್ಲಿ, ಅವನ ನಿಜವಾದ ಹೆಸರು ಅಯೂಬ್ ಮತ್ತು ಅವನು ಮುಸ್ಲಿಂ ಎಂದು ತಿಳಿದುಬಂದಿದೆ.

ಹಿಂದೂಸ್ತಾನ್ ಮತ್ತು ಇಂಡಿಯಾ ಟಿವಿ ಪ್ರಕಟಿಸಿದ ವರದಿಗಳ ಪ್ರಕಾರ, ಅಯೂಬ್ ಅಲಿ ಉತ್ತರ ಪ್ರದೇಶದ ಇಟಾದ ಅಲಿಗಂಜ್‌ನವರು. ಆತನ ತಂದೆ ಶಕೀರ್ ಅಲಿ ಮತ್ತು ಅವರಿಗೆ ಯಾವುದೇ ಕ್ರಿಮಿನಲ್ ದಾಖಲೆಗೆಲಿಲ್ಲ. ಅಲ್ಲದೆ, ಈ ವರದಿಗಳ ಪ್ರಕಾರ, ಅಖಾರಾ ಪೊಲೀಸ್ ಠಾಣೆಯ ಉಸ್ತುವಾರಿ ಭಾಸ್ಕರ್ ಮಿಶ್ರಾ ಅವರು ತಿಳಿಸಿದ ಪ್ರಕಾರ  ಅಯೂಬ್ ಅಲಿ ಇಟಾದವನಾಗಿದ್ದು, ಆತನನ್ನು ಎಸ್‌ಒಟಿ ಮತ್ತು ಎಸ್‌ಟಿಎಫ್ ಬಂಧಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 

ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ನಾವು ಮಹಾಕುಂಭ ಮೇಳ ಅಖ್ರಾ ಪೊಲೀಸ್ ಠಾಣೆಯ ಉಸ್ತುವಾರಿ ಭಾಸ್ಕರ್ ಮಿಶ್ರಾ ಅವರನ್ನು ಸಂಪರ್ಕಿಸಿದ್ದೇವೆ. ಅವರು  “ಎಸ್‌ಒಟಿ ಮತ್ತು ಎಟಿಎಸ್ ಪೊಲೀಸರ ತನಿಖೆಯಲ್ಲಿ ಮಹಾಕುಂಭಮೇಳದಲ್ಲಿ ಅನುಮಾನದ ಮೇಲೆ ಸಿಕ್ಕಿಬಿದ್ದ ಅಯೂಬ್ ಅಲಿ ಭಯೋತ್ಪಾದಕನಲ್ಲ ಎಂದು ತಿಳಿದುಬಂದಿದೆ. ಅವರು ಉತ್ತರ ಪ್ರದೇಶದ ಇಟಾಹ್‌ನಲ್ಲಿರುವ ಅಲಿಗಂಜ್‌ನವರು. ಅವರ ತಂದೆ ಶಕೀರ್ ಅಲಿ.” ಅವನ ಮೇಲೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ. ಅವನು ದಿನಗೂಲಿ ಕಾರ್ಮಿಕ. “ಅಲ್ಲದೆ, ಅವನು ಸಿಕ್ಕಿಬಿದ್ದಾಗ ಸಂತನ ವೇಷದಲ್ಲಿರಲಿಲ್ಲ” ಎಂದು ಅವರು ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಹ ತಿಳಿಸಿದ್ದಾರೆ. 

ಈ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವನ್ನು ನೀವು ಸರಿಯಾಗಿ ಪರಿಶೀಲಿಸಿದರೆ, ಅದು AI- ರಚಿತವಾದ ಫೋಟೋ ಎಂದು ತಿಳಿಯುತ್ತದೆ. ಮುಂದೆ ನಾವು ಈ ವೈರಲ್ ಫೋಟೋವನ್ನು AI- ರಚಿತವಾದದ್ದೇ? ಅಥವಾ ಇಲ್ಲವೇ? ಇದನ್ನು ದೃಢೀಕರಿಸಲು, ಈ ವೈರಲ್ ಫೋಟೋವನ್ನು Hive, wasitAI ನಂತಹ AI-ರಚಿತ ಇಮೇಜ್ ಡಿಟೆಕ್ಟಿಂಗ್ ಪರಿಕರಗಳನ್ನು ಬಳಸಿಕೊಂಡು ಪರೀಕ್ಷಿಸಲಾಯಿತು ಮತ್ತು ಹೈವ್ ಈ ವೈರಲ್ ಫೋಟೋ 99.8% ರಷ್ಟು AI-ರಚಿತ ಫೋಟೋ ಆಗಿರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅಲ್ಲದೆ, ಇದು AI- ರಚಿತವಾದ ಫೋಟೋ ಎಂಬ ಫಲಿತಾಂಶವನ್ನು wasitAI ಸಹ ನೀಡಿದೆ.

ಕೊನೆಯದಾಗಿ ಹೇಳುವುದಾದರೆ, 2025 ರ ಮಹಾಕುಂಭಮೇಳದ ಸಮಯದಲ್ಲಿ ಅನುಮಾನಾಸ್ಪದವಾಗಿ ಸಿಕ್ಕಿಬಿದ್ದ ಅಯೂಬ್ ಅಲಿ ಭಯೋತ್ಪಾದಕನಲ್ಲ ಮತ್ತು ಸಿಕ್ಕಿಬಿದ್ದಾಗ ಅವನು ಸಂತನ ವೇಷದಲ್ಲಿರಲಿಲ್ಲ ಎಂದು ತಮ್ಮ ತನಿಖೆಯಿಂದ ತಿಳಿದುಬಂದಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.