ಕರ್ನಾಟಕದ ಕಲಾತ್ಮಕ ಆಲದ ಮರದ ಕೆತ್ತನೆಯ ಚಿತ್ರವನ್ನು ಪ್ರಯಾಗದ ನಾಗ ವಾಸುಕಿ ದೇವಸ್ಥಾನದಲ್ಲಿ ಕಲ್ಲಿನಲ್ಲಿ ಕೆತ್ತಿದ ಶಿಲ್ಪವೆಂದು ಹೇಳಿ ಹಂಚಿಕೊಳ್ಳಲಾಗಿದೆ

ಉತ್ತರ ಪ್ರದೇಶದ ಪ್ರಯಾಗ್ ನಗರದಲ್ಲಿರುವ ನಾಗ ವಾಸುಕಿ ದೇವಾಲಯದ ಸುಂದರ ಶಿಲ್ಪ ಎಂದು ಹೇಳಿಕೊಳ್ಳುವ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ನಿಜಾಂಶವನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಉತ್ತರ ಪ್ರದೇಶದ ಪ್ರಯಾಗ್ ನಗರದಲ್ಲಿರುವ ನಾಗ ವಾಸುಕಿ ದೇವಸ್ಥಾನದಲ್ಲಿ ಕಲ್ಲಿನಲ್ಲಿ ಕೆತ್ತಿದ ಶಿಲ್ಪದ ಛಾಯಾಚಿತ್ರ.

ನಿಜಾಂಶ: ಫೋಟೋದಲ್ಲಿನ ಶಿಲ್ಪಕಲೆ ಕರ್ನಾಟಕದ ಹಾವೇರಿ ಜಿಲ್ಲೆಯ ಉತ್ಸವ್ ರಾಕ್ ಗಾರ್ಡನ್‌ಗೆ ಸೇರಿದೆ. ಈ ಶಿಲ್ಪವನ್ನು ಉತ್ಸವ್ ರಾಕ್ ಗಾರ್ಡನ್ ಜಾಲತಾಣದಲ್ಲಿ ‘ಕಲಾತ್ಮಕ ಆಲದ ಮರ’ ಎಂದು ವಿವರಿಸಲಾಗಿದೆ. ಈ ಶಿಲ್ಪಕ್ಕೂ ಮತ್ತು ಪ್ರಯಾಗ್‌ ನಲ್ಲಿರುವ ನಾಗ ವಾಸುಕಿ ದೇವಸ್ಥಾನಕ್ಕೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್ ನಲ್ಲಿ ಹಂಚಲಾದ ಛಾಯಾಚಿತ್ರದ ರಿವರ್ಸ್ ಇಮೇಜ್ ಹುಡುಕಾಟ ಮಾಡಿದಾಗ, “ವೇರ್ ಈಸ್ ದಿಸ್?” ಜಾಲತಾಣದಲ್ಲಿ ಈ ಶಿಲ್ಪದ ರೀತಿಯ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಜಾಲತಾಣದಲ್ಲಿ, ಛಾಯಾಚಿತ್ರದಲ್ಲಿರುವ ಶಿಲ್ಪಕಲೆಯು ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿರುವ ಉತ್ಸವ್ ರಾಕ್ ಗಾರ್ಡನ್‌ಗೆ ಸೇರಿದೆ ಎಂದು ಹೇಳಲಾಗಿದೆ.

ಈ ಕೀವರ್ಡ್ ಗಳನ್ನು ಬಳಸಿಕೊಂಡು ನಾವು ಇತರ ಅಧಿಕೃತ ಮೂಲಗಳಿಗಾಗಿ ಹುಡುಕಿದಾಗ, ಉತ್ಸವ ರಾಕ್ ಗಾರ್ಡನ್‌ನ ಅಧಿಕೃತ ಜಾಲತಾಣದಲ್ಲಿ ಶಿಲ್ಪದ ಇದೇ ರೀತಿಯ ಛಾಯಾಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಜಾಲತಾಣದಲ್ಲಿ, ಈ ಶಿಲ್ಪವನ್ನು ‘ಕಲಾತ್ಮಕ ಆಲದ ಮರ’ ಎಂದು ವಿವರಿಸಲಾಗಿದೆ. ಉತ್ಸವ್ ರಾಕ್ ಗಾರ್ಡನ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲೂ ಈ ಶಿಲ್ಪ ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕದ ಉತ್ಸವ್ ರಾಕ್ ಉದ್ಯಾನವನಕ್ಕೆ ಸೇರಿದ ಒಂದು ಶಿಲ್ಪವನ್ನು ಪ್ರಯಾಗ್ ನ ನಾಗ ವಾಸುಕಿ ದೇವಾಲಯದ ಶಿಲ್ಪವೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.