ಕರಾಚಿ (ಪಾಕಿಸ್ತಾನ) ಯ ಹಳೆಯ ವೀಡಿಯೊವನ್ನು ಬೆಂಗಳೂರಿನಲ್ಲಿ ಮಹಿಳೆಯರು ಸಂಪರ್ಕತಡೆಯ ಕೇಂದ್ರದಿoದ ತಪ್ಪಿಸಿಕೊಳ್ಳುತ್ತಿರುವುದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಬೆಂಗಳೂರಿನ ಶಿವಾಜಿ ನಗರದಲ್ಲಿ ಸಂಪರ್ಕತಡೆಯ ಕೇಂದ್ರದಿoದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಬುರ್ಖಾ ಧರಿಸಿದ ಮಹಿಳೆಯರು ಮನೆಯಿಂದ ತಪ್ಪಿಸಿಕೊಳ್ಳುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.ಆದರೆ ಅದೇ ವೀಡಿಯೊವನ್ನು 2015 ರಲ್ಲಿ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ: ‘ಕರಾಚಿಯ ವೇಶ್ಯಾಗೃಹವೊಂದರಲ್ಲಿ ಎಫ್‌ಐಎ ದಾಳಿ ನಡೆಸಿದ ನಂತರ ಲೈಂಗಿಕ ಕಾರ್ಯಕರ್ತರು ಪಲಾಯನ ಮಾಡುತ್ತಿದ್ದಾರೆ’.ಆದ್ದರಿಂದ, ಇದು ಹಳೆಯ ವೀಡಿಯೊ ಮತ್ತು ಪ್ರಸ್ತುತ ಲಾಕ್‌ಡೌನ್‌ಗೆ ಸಂಬಂಧಿಸಿಲ್ಲ ಎಂದು ತೀರ್ಮಾನಿಸಬಹುದು. ವೀಡಿಯೊದಲ್ಲಿನ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಹಿಂದೆ ಫ್ಯಾಕ್ಟ್ಲಿ ಬಿಡುಗಡೆ ಮಾಡಿದ ಲೇಖನದಲ್ಲಿ ಓದಬಹುದು.

ಮೂಲಗಳು:
ಪ್ರತಿಪಾದನೆ:
Facebook post (archived)
ಸತ್ಯ:
1. YouTube video – https://www.youtube.com/watch?v=dLnuLKPaamI
2. Facebook video – https://www.facebook.com/122141554534802/videos/868678486547768/