‘ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗಾಂಧಿ ಅವರು‘ ಲಾಕ್‌ಡೌನ್ ’ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗಾಂಧಿ ಅವರು ‘ಲಾಕ್‌ಡೌನ್’ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತೋರಿಸುವುದರೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗಾಂಧಿಯವರ ವಾಹನವನ್ನು ಪೊಲೀಸರು ತಡೆದಿದ್ದಾರೆ ಮತ್ತು ನಿಷೇಧಿತ ಆದೇಶಗಳು ಮತ್ತು ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಅವರನ್ನು ಹಿಂತಿರುಗಲು ತಿಳಿಸಲಾಗಿದೆ ಎಂದು ತೋರಿಸಲಾಗಿದೆ. ವೀಡಿಯೊವು ಮೂರು ತಿಂಗಳ ಹಳೆಯದು ಎಂದು ಫ್ಯಾಕ್ಟ್‌ಲಿಯ ಕಂಡುಹಿಡಿದಿದೆ. 2019 ರ ಡಿಸೆಂಬರ್‌ನಲ್ಲಿ ಮೀರತ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳನ್ನು ಭೇಟಿಯಾಗಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಗಾಂಧಿ ಪ್ರಯತ್ನಿಸಿದಾಗ, ಉತ್ತರ ಪ್ರದೇಶ ಪೊಲೀಸರು ಅವರನ್ನು ಪ್ರವೇಶಿಸದಂತೆ ತಡೆದು ವಾಪಸ್ ಕಳುಹಿಸಿದ್ದಾರೆ.

ಮೂಲಗಳು:
ಪ್ರತಿಪಾದನೆ:
Facebook post (archived)
ಸತ್ಯ:
1. YouTube video – https://www.youtube.com/watch?v=6vYxToAaVlY
2. News article- https://indianexpress.com/article/india/rahul-priyanka-stopped-from-entering-meerut-caa-violence-6183564/