ಮಹಾ ಶಿವರಾತ್ರಿಯಂದು ಪ್ರಯಾಗರಾಜ್‌ನಲ್ಲಿ ಭಾರತೀಯ ವಾಯುಪಡೆಯ ತ್ರಿಶೂಲ್ ಕಾರ್ಯಾಚರಣೆ ಎಂದು ಹಳೆಯ ಸಂಬಂಧವಿಲ್ಲದ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದ ಕೊನೆಯ ದಿನದಂದು, ಅಂದರೆ ಫೆಬ್ರವರಿ 26, 2025 ರಂದು ಭಾರತೀಯ ವಾಯುಪಡೆಯ ವಾಯು ಪ್ರದರ್ಶನದ ಸಮಯದಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಫೋಟೋವನ್ನು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಳ್ಳಲಾಗಿದೆ. 45 ದಿನಗಳ ಕಾಲ ನಡೆದ ಈ ಕಾರ್ಯಕ್ರಮದ ಮುಕ್ತಾಯದ ನೆನಪಿಗಾಗಿ ಈ ವಾಯು ಪ್ರದರ್ಶನವನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಡೆಸಲಾಯಿತು. ಸೋಶಿಯಲ್ ಮೀಡಿಯಾ ಉಸೆರ್ಸ್ ಈ ಫೋಟೋವನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) “… ಪ್ರಯಾಗ್‌ರಾಜ್‌ನಲ್ಲಿ, ಮಹಾಶಿವರಾತ್ರಿಯ ದಿನದಂದು ಭಾರತೀಯ ವಾಯುಪಡೆಯು ವಾಯು ಪ್ರದರ್ಶನವನ್ನು ರಚಿಸಿತು. ವಾಯು ಪ್ರದರ್ಶನದ ಪ್ರಮುಖ ಅಂಶವೆಂದರೆ 3 ಸುಖೋಯ್ ಗಾಳಿಯಲ್ಲಿ ಶಿವನ ತ್ರಿಶೂಲದ ರಚನೆಯನ್ನು ಮಾಡಿದ್ದೂ ಅದು ಅವಿಸ್ಮರಣೀಯ…” ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಈ ಫೋಟೋವನ್ನು ಪಿಕ್ಚರ್ ಆಫ್  ದಿ  ಇಯರ್ ಎಂದು ಕರೆಯುತ್ತಿದ್ದಾರೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಈ ಫೋಟೋ ಫೆಬ್ರವರಿ 26, 2025 ರಂದು ಪ್ರಯಾಗ್‌ರಾಜ್‌ನಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ಮಾಡಿದ ತ್ರಿಶೂಲ್ ರಚನೆಯನ್ನು ತೋರಿಸುತ್ತದೆ.

ಫ್ಯಾಕ್ಟ್: ಈ ಫೋಟೋಗೆ ಫೆಬ್ರವರಿ 26, 2025 ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ಇದು 2019 ರಿಂದ ಇಂಟರ್ನೆಟ್‌ನಲ್ಲಿದ್ದು,  2025 ರ ಮಹಾ ಕುಂಭಮೇಳಕ್ಕೂ ಬಹಳ ಹಿಂದಿನದ್ದಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ದಾರಿತಪ್ಪಿಸುವಂತಿದೆ.

ವೈರಲ್ ಆದ ಈ ಕ್ಲೇಮ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಫೆಬ್ರವರಿ 26, 2025 ರಂದು ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳ ಸ್ಥಳದಲ್ಲಿ ನಡೆದ ಏರ್ ಶೋನ ಸುದ್ದಿ ವರದಿಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಪರಿಶೀಲಿಸಿದ್ದೇವೆ. ಆದರೆ ಈ ಸುದ್ದಿ ವರದಿಗಳಲ್ಲಿ ವೈರಲ್ ಫೋಟೋದಲ್ಲಿರುವಂತೆ ಯಾವುದೇ ದೃಶ್ಯಗಳು ನಮಗೆ ಕಂಡುಬಂದಿಲ್ಲ.

ಈ ಫೋಟೋದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಈ ಫೋಟೋ ಮೊದಲಿನಿಂದಲೂ, ಕನಿಷ್ಠ ಮಾರ್ಚ್ 2019 ರಿಂದ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) (ಆರ್ಕೈವ್ ಲಿಂಕ್) ಇಂಟರ್ನೆಟ್ನಲ್ಲಿದೆ ಎಂದು ತಿಳಿದುಬಂದಿದೆ. ಇದು ಫೋಟೋವನ್ನು ಫೆಬ್ರವರಿ 26, 2025 ರಂದು ಪ್ರಯಾಗ್‌ರಾಗ್‌ನಲ್ಲಿ ತೆಗೆದದ್ದಲ್ಲ ಎಂದು ಸ್ಪಷ್ಟಪಡಿಸುತ್ತದೆ.

ಈ ಹುಡುಕಾಟದ ಸಮಯದಲ್ಲಿ, ಗಣರಾಜ್ಯೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಭಾರತೀಯ ವಾಯುಪಡೆಯು ತ್ರಿಶೂಲ್ ರಚನೆಯ ಕುಶಲತೆಯನ್ನು ನಿರ್ವಹಿಸುತ್ತದೆ ಎಂದು ನಮಗೆ ತಿಳಿದುಬಂದಿತು. 2008 ರಲ್ಲಿ ನವದೆಹಲಿಯಲ್ಲಿ ನಡೆದ 59 ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮೂರು SU-30 MKI ಗಳು ಮಾಡಿದ ಈ ರಚನೆಯನ್ನು ತೋರಿಸುವ PIB ಅಪ್‌ಲೋಡ್ ಮಾಡಿದ ಫೋಟೋದಲ್ಲಿ (ಆರ್ಕೈವ್ ಲಿಂಕ್) ನೀವು ಇದನ್ನು ನೋಡಬಹುದು. ಇದು ವೈರಲ್ ಫೋಟೋದಲ್ಲಿ ಕಂಡುಬರುವ ರಚನೆಗೆ ಹೋಲುವಂತಿಲ್ಲ.

ಗಣರಾಜ್ಯೋತ್ಸವದ ಮೆರವಣಿಗೆಗಳಲ್ಲಿ ಭಾರತೀಯ ವಾಯುಪಡೆಯು ವರ್ಷಗಳಲ್ಲಿ ಮಾಡಿದ ತ್ರಿಶೂಲ್ ರಚನೆಯ ಇನ್ನಷ್ಟು ವೀಡಿಯೊಗಳು ಮತ್ತು ಫೋಟೋಗಳನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ಫೋಟೋವನ್ನು 2025 ರ ಫೆಬ್ರವರಿ 26 ರಂದು ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳ ಸಮಾರೋಪ ಏರ್ ಶೋ ಸಮಯದಲ್ಲಿ ಸೆರೆಹಿಡಿದಿಲ್ಲ.