ಹಳೆದ ಸಂಬಂಧವಿಲ್ಲದ ಫೋಟೊವನ್ನು ತಪ್ಪಾಗಿ ಕರ್ನಾಲ್ ವೈದ್ಯ ಸಗಣಿ ತಿಂದಿದ್ದಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ

ಸಗಣಿ ತಿಂದ ಕರ್ನಾಲ್‌ನ ವೈದ್ಯರೊಬ್ಬರು ಆಸ್ಪತ್ರೆಗೆ ದಾಖಲಾಗಿ ಮಲಗಿರುವ ದೃಶ್ಯ ಎಂದು ಫೋಟೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚಿಗಷ್ಟೇ ಕರ್ನಾಲ್‌ನ ಡಾ.ಮನೋಜ್ ಮಿತ್ತಲ್ ಎಂದು ಗುರುತಿಸಲ್ಪಟ್ಟವರು ಹಸುವಿನ ಸಗಣಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿತ್ತು. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಸಗಣಿ ತಿಂದ ಕರ್ನಾಲ್‌ನ ವೈದ್ಯರೊಬ್ಬರು ಆಸ್ಪತ್ರೆಗೆ ದಾಖಲಾಗಿ ಮಲಗಿರುವ ಚಿತ್ರ.

ನಿಜಾಂಶ: ಚಿತ್ರದಲ್ಲಿರುವ ಆಸ್ಪತ್ರೆಗೆ ದಾಖಲಾಗಿ ಮಲಗಿರುವವರು ಬೈಧಾನ್ ತಪ್ಪ ಎಂಬುವವರಾಗಿದ್ದು ಅವರು ಇತ್ತೀಚೆಗೆ ತೀವ್ರ ಆರೋಗ್ಯ ಸಮಸ್ಯೆಗಳಿಂದ ಅಮೆರಿಕದಲ್ಲಿ ನಿಧನರಾದರು. ಸಗಣಿ ತಿಂದ ಹರಿಯಾಣದ ಮನೋಜ್ ಮಿತ್ತಲ್ ರವರನ್ನು ಅವರ ವೈರಲ್ ಪೋಸ್ಟ್‌ನ ಕುರಿತಾಗಿ ಕೇಳಿದಾಗ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಮತ್ತು ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿರುವ ಫೋಟೊವನ್ನು ಗೂಗಲ್ ಇಮೇಜ್ ಸರ್ಚ್ ಮಾಡಿದಾಗ ಆಸ್ಪತ್ರೆ ಹಾಸಿಗೆಯಲ್ಲಿ ಮಲಗಿರುವ ವ್ಯಕ್ತಿಯ ಫೋಟೊ GoFundMe ಪುಟದಲ್ಲಿ ಕಂಡುಬಂದಿದೆ. ಈ ಪುಟವನ್ನು 10 ಜುಲೈ 2017ರಲ್ಲಿ ರಚಿಸಲಾಗಿದೆ. ಹಾಸಿಗೆಯ ಮೇಲೆ ಮಲಗಿರುವ ವ್ಯಕ್ತಿ ಬೈಧಾನ್ ತಪ್ಪ ಎಂಬುವವರಾಗಿದ್ದು ಅವರು ಇತ್ತೀಚೆಗೆ ತೀವ್ರ ಆರೋಗ್ಯ ಸಮಸ್ಯೆಗಳಿಂದ ಅಮೆರಿಕದ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಮೂಲತಃ ನೇಪಾಳದವರಾಗಿದ್ದು ಪಾರ್ಥಿವ ಶರೀರರವನ್ನು ಸ್ವದೇಶಕ್ಕೆ ಕರೆತಲು ಹಣಕಾಸಿನ ಅಗತ್ಯವುಂಟಾಗಿ ನೆರವಿಗಾಗಿ ಆ ಪುಟವನ್ನು ರಚಿಸಲಾಗಿತ್ತು.

ಹರಿಯಾಣದ ಕರ್ನಾಲ್‌ನ ಡಾ.ಮನೋಝ್ ಮಿತ್ತಲ್ ಎಂದು ಗುರುತಿಸಲಾದ ವೈದ್ಯರೊಬ್ಬರು ಸೆಗಣಿ ತಿನ್ನುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ಈ ಕೆಳಗಿನ ವಿಡಿಯೋ ವರದಿಯ ಪ್ರಕಾರ ಅವರು ಆಸ್ಪತ್ರೆಗೆ ದಾಖಲಾಗಿಲ್ಲ. ಈ ಕುರಿತು ಅವರನ್ನು ಕೇಳಿದಾಗ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ, ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಹಾಸಿಗೆಯಲ್ಲಿ ಮಲಗಿರುವ ವ್ಯಕ್ತಿ ಇಥಿಯೋಪಿಯಾದ ಪ್ರಧಾನ ಮಂತ್ರಿ ಅಬಿ ಅಹ್ಮದ್ ಎಂದು ಪ್ರತಿಪಾದನೆ ಮಾಡಲಾಗಿತ್ತು. AFP  ಇದನ್ನು ಅಲ್ಲಗೆಳೆದು ಫೆಬ್ರವರಿ 2021ರಲ್ಲಿ ಫ್ಯಾಕ್ಟ್‌ಚೆಕ್ ಲೇಖನ ಪ್ರಕಟಿಸಿತ್ತು.

ಒಟ್ಟಾರೆಯಾಗಿ ಹಳೆದ ಸಂಬಂಧವಿಲ್ಲದ ಫೋಟೊವನ್ನು ತಪ್ಪಾಗಿ ಕರ್ನಾಲ್ ವೈದ್ಯ ಸಗಣಿ ತಿಂದಿದ್ದಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು  ಹಂಚಿಕೊಳ್ಳಲಾಗಿದೆ.