ಜೈನ ಸನ್ಯಾಸಿ ಮಯಾಂಕ್ ಸಾಗರ್ ಅವರು ಈ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಫೋಟೋವನ್ನು ಮುಸ್ಲಿಮರಿಂದ ದಾಳಿ ಒಳಗಾಗಿದ್ದಾರೆ ಎಂದು ಶೇರ್ ಮಾಡಲಾಗಿದೆ

ಕರ್ನಾಟಕದಲ್ಲಿ ಜೈನ ಸನ್ಯಾಸಿ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸುದ್ದಿಯ ಜೊತೆಗೆ ಅವರಿಗಾಗಿರುವ ಗಾಯಗಳ ಫೋಟೋವನ್ನು ಸಹ ಹಂಚಿಕೊಳ್ಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್ : ಕರ್ನಾಟಕದಲ್ಲಿ ಜೈನ ಸನ್ಯಾಸಿ ಮಯಾಂಕ್ ಸಾಗರ್ ಮೇಲೆ ಮುಸ್ಲಿಮರು ಹಲ್ಲೆ ನಡೆಸಿ ಗಾಯಗೊಳಿಸಿರುವ ಫೋಟೋ.

ಫ್ಯಾಕ್ಟ್ :   2018 ರಲ್ಲಿ ಜೈನ ಸನ್ಯಾಸಿ ಮಯಾಂಕ್ ಸಾಗರ್ ಅಪಘಾತದಲ್ಲಿ ಗಾಯಗೊಂಡ  ಫೋಟೋ  ಇದಾಗಿದೆ. ಹಾಗಾಗಿ ಈ ಘಟನೆಯಲ್ಲಿ ಯಾವುದೇ ಧಾರ್ಮಿಕ ಆಯಾಮವಿಲ್ಲ. ಈ ಹಿಂದೆ ಕೋಮುಗಲಭೆ ಸೃಷ್ಟಿಸಲು ಈ ಫೋಟೋ ಶೇರ್ ಮಾಡಿದ್ದಕ್ಕಾಗಿ ಹಲವು ವೆಬ್‌ಸೈಟ್‌ಗಳ ಎಡಿಟರ್ಸ್ ಅನ್ನು ಪೊಲೀಸರು ಬಂಧಿಸಿದ್ದರು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಫೋಟೋದ ರಿವರ್ಸ್ ಇಮೇಜ್ ಅನ್ನು ಪರಿಶೀಲಿಸಿದಾಗ, 2018 ರಲ್ಲಿ ಅದೇ ಫೋಟೋವನ್ನು ಹಲವಾರು ಸುದ್ದಿ ವಾಹಿನಿಗಳು ವರದಿ ಮಾಡಿದ್ದನ್ನು ನಾವು ಕಂಡುಕೊಂಡಿದ್ದೇವೆ.  ಈ ವರದಿಗಳ ಪ್ರಕಾರ, ಈ ಫೋಟೋದಲ್ಲಿರುವ ವ್ಯಕ್ತಿ ಜೈನ ಸನ್ಯಾಸಿ ‘ಉಪಾಧ್ಯಾಯ ಮಾಯಾಂಕ್ ಸಾಗರ್ಜಿ ಮಹಾರಾಜ್’.

ಜೈನ ಸನ್ಯಾಸಿ ಮಾರ್ಚ್ 2018 ರಂದು ಕರ್ನಾಟಕದ ಶ್ರವಣಬೆಳಗೊಳದಿಂದ ಹಿಂದಿರುಗುವಾಗ ಅಪಘಾತಕ್ಕೀಡಾಗಿದ್ದಾರೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಭುಜಕ್ಕೆ ತಗುಲಿ ಗಾಯವಾಗಿದೆ. ಆದರೆ ಕೆಲವು ವೆಬ್‌ಸೈಟ್‌ಗಳು ಧಾರ್ಮಿಕ ಪ್ರಚೋದನೆಯ ಸುದ್ದಿಯನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಹಂಚಿಕೊಂಡ ನಂತರ ಅಂತಹವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿ ವಾಹಿನಿಗಳು ವರದಿ ಮಾಡಿದೆ. ಜೈನ ಸನ್ಯಾಸಿ ಮಯಾಂಕ್ ಸಾಗರ್ ಮೇಲೆ ಮುಸಲ್ಮಾನರಿಂದ ಹಲ್ಲೆ ನಡೆದಿದೆ ಎಂದು ಸುದ್ದಿ ಬರೆದ ನಂತರ ಎರಡೂ ಧರ್ಮಗಳನ್ನು ಕೆರಳಿಸುವ ಮಾಹಿತಿಯನ್ನು ಹಂಚಿಕೊಂಡಿರುವ  ವೆಬ್ ಸೈಟ್ ಗಳ ವಿರುದ್ಧ ಐಟಿ ಸೆಕ್ಷನ್ಸ್  ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂಬುದು ಈ ಲೇಖನಗಳ ಸಾರಾಂಶವಾಗಿದೆ.

ಈ ಲೇಖನಗಳ ಆಧಾರದ ಮೇಲೆ ಜೈನ ಸನ್ಯಾಸಿ  ಅಪಘಾತದ ವರದಿಗಳನ್ನು ಹುಡುಕುತ್ತಿರುವಾಗ, ಅವರ ಅಪಘಾತಕ್ಕೆ ಸಂಬಂಧ ಪಟ್ಟ  ಸುದ್ದಿಯನ್ನು ಹಂಚಿಕೊಂಡ ಬ್ಲಾಗ್ ಅನ್ನು ಕಂಡುಕೊಂಡೆವು. ಈ ಬ್ಲಾಗ್ನಲ್ಲೂ ಕೂಡ ಅವರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾರೆ  ಎಂದು ಹೇಳಲಾಗಿದೆ.

ಕೊನೆಯದಾಗಿ ಹೇಳುವುದಾದರೆ, ಜೈನ ಸನ್ಯಾಸಿ ಮಯಾಂಕ್ ಸಾಗರ್ ಅವರು ಈ ಹಿಂದೆ ಅಪಘಾತದಲ್ಲಿ ಗಾಯಗೊಂಡಿರುವ ಫೋಟೋವನ್ನು,  ಮುಸ್ಲಿಮರಿಂದ ದಾಳಿಗೆ ಒಳಗಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ.