ರ ಹೆರಿಟೇಜ್ ಫೌಂಡೇಶನ್ ಪ್ಯಾನಲ್ ಚರ್ಚೆಯ ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು, 2024 ರ ಕ್ಯಾಬಿನೆಟ್‌ನಲ್ಲಿ ವಿದ್ಯಾರ್ಥಿಯೊಬ್ಬರು ಟ್ರಂಪ್ ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಯುನೈಟೆಡ್ ಸ್ಟೇಟ್ಸ್‌ನ ಕಾನೂನು ವಿದ್ಯಾರ್ಥಿನಿಯೊಬ್ಬಳು ಇಸ್ಲಾಂನ ನೆಗೆಟಿವ್ ಚಿತ್ರಣ, ಮುಸ್ಲಿಂ ಪ್ರಾತಿನಿಧ್ಯ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧಾಂತಗಳನ್ನು ಎದುರಿಸುವ ಬಗ್ಗೆ ಸಮಿತಿಯನ್ನು ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (ಇಲ್ಲಿ) ಆಗುತ್ತಿದೆ. ಈ ಪೋಸ್ಟ್‌ನಲ್ಲಿ ಅವರು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2024 ರ ಕ್ಯಾಬಿನೆಟ್ ಆಯ್ಕೆಗಳಿಗೆ ಈ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. 2024 ರ ಚುನಾವಣೆಯಲ್ಲಿ ಗೆದ್ದ ನಂತರ ಡೊನಾಲ್ಡ್ ಟ್ರಂಪ್ ತಮ್ಮ ಕ್ಯಾಬಿನೆಟ್ ಆಯ್ಕೆಗಳನ್ನು ಘೋಷಿಸಿದ ಸಂದರ್ಭದಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: 2024 ರ ಡೊನಾಲ್ಡ್ ಟ್ರಂಪ್ ಅವರ ಕ್ಯಾಬಿನೆಟ್ನಲ್ಲಿ ಇಸ್ಲಾಂನ ಚಿತ್ರಣ, ಮುಸ್ಲಿಂ ಪ್ರಾತಿನಿಧ್ಯ ಮತ್ತು ಸಿದ್ಧಾಂತಗಳನ್ನು ಪ್ರಶ್ನಿಸುವ ಅಮೆರಿಕದ ಕಾನೂನು ವಿದ್ಯಾರ್ಥಿಯನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಜೂನ್ 17, 2014 ರ ಹಿಂದಿನ ಈ ವೀಡಿಯೊವಾಗಿದೆ. ಲಿಬಿಯಾದ ಬೆಂಗಾಜಿಯಲ್ಲಿರುವ ಯುಎಸ್ ಕಾನ್ಸುಲೇಟ್ ಮೇಲೆ 2012 ರ ದಾಳಿಯ ಕುರಿತು ದಿ ಹೆರಿಟೇಜ್ ಫೌಂಡೇಶನ್ ನಡೆಸಿದ  ಚರ್ಚೆಯದ್ದಾಗಿದೆ. ಹಾಗಾಗಿ ಇದು 2024 ಅಥವಾ ಇತ್ತೀಚಿನದಲ್ಲ. ಇನ್ನೊಂದು ಮುಖ್ಯವಾದ ವಿಷಯವೆಂದರೆ  2014 ರಲ್ಲಿ, ಬರಾಕ್ ಒಬಾಮಾ ಯುಎಸ್ ಅಧ್ಯಕ್ಷರಾಗಿದ್ದರು ಹೊರತು  ಡೊನಾಲ್ಡ್ ಟ್ರಂಪ್ ಅಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ. 

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ನಮ್ಮನ್ನು ಜೂನ್ 17, 2014 ರಂದು ದಿ ಹೆರಿಟೇಜ್ ಫೌಂಡೇಶನ್‌ನ ಯೂಟ್ಯೂಬ್ ಚಾನೆಲ್‌ನಲ್ಲಿಅಪ್ಲೋಡ್ ಮಡಿದ   “Full Context: Benghazi Accountability Coalition Event.”  (ಬೆಂಗಾಜಿ ಅಕೌಂಟೆಬಿಲಿಟಿ ಕೊಯಲಿಷನ್ ಈವೆಂಟ್”) ಎಂಬ ಕ್ಯಾಪ್ಶನ್ ಇರುವ ಅದೇ ವೀಡಿಯೊವನ್ನು (ಆರ್ಕೈವ್ ಮಾಡಲಾಗಿದೆ) ನಮಗೆ ತೋರಿಸಿದೆ.

ಈ ವೀಡಿಯೊವು ಜೂನ್ 16, 2014 ರಂದು ನಡೆದ “Benghazi: The Difference It Makes Is Accountability!” ಎಂಬ ಕಾರ್ಯಕ್ರಮದಲ್ಲಿ ಪ್ರಶ್ನಾರ್ಥಿ ಸಬಾ ಅಹ್ಮದ್ ಮತ್ತು ಸಮಿತಿಯ ನಡುವಿನ ಮಾತುಕತೆಯದಾಗಿದೆ. ಇದು ಲಿಬಿಯಾದ ಬೆಂಗಾಜಿಯಲ್ಲಿರುವ ಯುಎಸ್ ಕಾನ್ಸುಲೇಟ್ ಮೇಲಿನ 2012 ರ ದಾಳಿಯ ಮೇಲೆ ಕೇಂದ್ರೀಕರಿಸಿದೆ.

ಜೂನ್ 2017 ರ ವರದಿಗಳು (ಇಲ್ಲಿ ಮತ್ತು ಇಲ್ಲಿ) (ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ಇದೇ ವಿಷಯವನ್ನು ಒಳಗೊಂಡಿವೆ ಎಂದು ನಾವು ಕಂಡುಕೊಂಡಿದ್ದೇವೆ. 2014 ರಲ್ಲಿ  ಬರಾಕ್ ಒಬಾಮಾ ಯುಎಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂಬುದು ಗಮನಿಸಬೇಕಾದ ಅಂಶ. 

ಒಟ್ಟಾರೆಯಾಗಿ ಹೇಳುವುದಾದರೆ, 2014 ರ ಹೆರಿಟೇಜ್ ಫೌಂಡೇಶನ್ ಪ್ಯಾನಲ್ ಚರ್ಚೆಯ ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊವನ್ನು  2024 ರ ಟ್ರಂಪ್ ಅವರ ಕ್ಯಾಬಿನೆಟ್ ಆಯ್ಕೆಗಳಿಗೆ ಪ್ರಶ್ನೆಗಳನ್ನು ಕೇಳುತ್ತಿರುವ ವಿದ್ಯಾರ್ಥಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.