ಪೋಲೆಂಡ್‌ನ ಕ್ರಾಕೋವ್ ಬಳಿಯ ‘ಸುಸ್ಜೋವ್’ (ಸುಲೋಸ್ಜೋವ್) ಎಂಬ ಹಳ್ಳಿಯನ್ನು ವಿವರಿಸುವ ಪೋಸ್ಟ್ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹಳ್ಳಿಯ ಸುತ್ತಮುತ್ತಲನ್ನು ತೋರಿಸುವ ಫೋಟೋವನ್ನು ಸಹ ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸೋಶಿಯಲ್ ಮೀಡಿಯಾ ಉಸೆರ್ಸ್ ಹೇಳುವಂತೆ ಈ ಗ್ರಾಮವು “ಉದ್ದವಾದ, ಸಂಪೂರ್ಣವಾಗಿ ಲಂಬವಾದ ಮುಖ್ಯ ರಸ್ತೆಯನ್ನು ಹೊಂದಿದ್ದು, ಎರಡೂ ಬದಿಗಳಲ್ಲಿ ಮನೆಗಳನ್ನು ಅಚ್ಚುಕಟ್ಟಾಗಿ ಕಟ್ಟಲಾಗಿದ್ದು, ಇದು ಉಂಗುರದಲ್ಲಿ ಮುತ್ತುಗಳನ್ನು ಹಾಕಿದಂತೆ ಕಾಣುತ್ತಿದೆ”. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಪೋಲೆಂಡ್‌ನ ಸುಲೋಸ್ಜೋವ್ ಗ್ರಾಮದ ಫೋಟೋದಲ್ಲಿ ಮನೆಗಳನ್ನು ಉದ್ದವಾದ ರಸ್ತೆಯ ಎರಡೂ ಬದಿಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿದೆ.
ಫ್ಯಾಕ್ಟ್: ಪೋಲೆಂಡ್‌ನಲ್ಲಿ ಸುಲೋಸ್ಜೋವ್ ಎಂಬ ಹಳ್ಳಿ (commune) ಇದೆ. ಆದರೆ ವೈರಲ್ ಪೋಸ್ಟ್‌ನಲ್ಲಿರುವ ಫೋಟೋ ಆ ಹಳ್ಳಿಯದ್ದಲ್ಲ, ಅದನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ. ಸುಲೋಸ್ಜೋವ್‌ನಲ್ಲಿನ ರಸ್ತೆಯು ಉದ್ದವಾದ, ಸಂಪೂರ್ಣವಾಗಿ ನೇರವಾದ ರಸ್ತೆಯಲ್ಲ, ಮತ್ತು ರಸ್ತೆಯ ಎರಡೂ ಬದಿಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾದ ಮನೆಗಳಿಲ್ಲ, ಕೆಲವು ಸ್ಥಳಗಳಲ್ಲಿ ಒಂದು ಬದಿಯಲ್ಲಿ ಹೆಚ್ಚು ಮನೆಗಳಿವೆ ಮತ್ತು ಇನ್ನೊಂದು ಬದಿಯಲ್ಲಿ ಕಡಿಮೆ ಮನೆಗಳಿವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಮೊದಲಿಗೆ, ವೈರಲ್ ಪೋಸ್ಟ್‌ನಲ್ಲಿ ಹೇಳಿರುವ ಹಳ್ಳಿಯ ಬಗ್ಗೆ ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಿದ ನಂತರ, ಸುಲೋಸ್ಜೋವ್ ಗ್ರಾಮ (ಕಮ್ಯೂನ್) ಪೋಲೆಂಡ್‌ನ ಕ್ರಾಕೋವ್ ನಗರದ ಬಳಿ ಇದೆ ಎಂದು ನಮಗೆ ತಿಳಿಯಿತು (ಇಲ್ಲಿ, ಇಲ್ಲಿ, ಇಲ್ಲಿ). ಈ ಹಳ್ಳಿಯ ಬಗ್ಗೆ ವಿವರಿಸುವ ಕೆಲವು ಲೇಖನಗಳನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವಿಶ್ವಸಂಸ್ಥೆಯ ಪ್ರಕಾರ, ಈ ಗ್ರಾಮವು 9 ಕಿಲೋಮೀಟರ್ ಮುಖ್ಯ ರಸ್ತೆಯನ್ನು ಹೊಂದಿದೆ.
ಆದರೆ ಈ ಹಳ್ಳಿಯ ಅರಿಯಲ್ ವ್ಯೂ ಫೋಟೋಗಳು, ವೀಡಿಯೊಗಳಲ್ಲಿನ ದೃಶ್ಯಗಳು ವೈರಲ್ ಫೋಟೋದಂತೆ ಇಲ್ಲ. ವೈರಲ್ ಪೋಸ್ಟ್ ಹೇಳುವಂತೆ, ಈ ಹಳ್ಳಿಯ ರಸ್ತೆಗಳು ಎಲ್ಲೆಡೆ ನೇರವಾಗಿಲ್ಲ ಮತ್ತು ಸಮಾನವಾಗಿ ಜೋಡಿಸಲಾದ ಮನೆಗಳೂ ಇಲ್ಲ. ವೈರಲ್ ಫೋಟೋದಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ) ಕಂಡುಬರುವಂತೆ ರಸ್ತೆ ಕೆಲವು ಸ್ಥಳಗಳಲ್ಲಿ ಇಳಿಜಾರಾಗಿದ್ದು, ಮನೆಗಳು ಎರಡೂ ಬದಿಗಳಲ್ಲಿ ಸಮಾನ ಅಂತರವನ್ನು ಹೊಂದಿಲ್ಲ. ಸುಲೋಸ್ಜೋವಾದ ಗೂಗಲ್ ನಕ್ಷೆಗಳ ಉಪಗ್ರಹ ವ್ಯೂ ನೋಡಿದರೆ ಇದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.
ನಿಜವಾದ ಚಿತ್ರದಲ್ಲಿ ಮತ್ತು ವೈರಲ್ ಫೋಟೋ ನಡುವಿನ ಈ ವ್ಯತ್ಯಾಸವನ್ನು ಗಮನಿಸಿದ ನಾವು, ವೈರಲ್ ಫೋಟೋವನ್ನು ಆರ್ಟಿಫಿಷಿಯಲ್ ಇಂಟೆಲೀಜೆಂಸ್ (AI) ಬಳಸಿ ರಚಿಸಲಾಗಿದೆ ಎಂದು ಅನುಮಾನಿಸಿದೆವು. ಇದನ್ನು ಪರಿಶೀಲಿಸಲು, ನಾವು ಈ ಫೋಟೋವನ್ನು AI ವಿಷಯ ಪತ್ತೆ ಪರಿಕರಗಳಾದ ಸೈಟ್ ಎಂಜಿನ್ ಮತ್ತು ಹೈವೇ ಮಾಡರೇಶನ್ ಬಳಸಿ ವಿಶ್ಲೇಷಿಸಿದ್ದೇವೆ. ಈ ಎರಡು ಉಪಕರಣಗಳು ಇದು ಆರ್ಟಿಫಿಷಿಯಲ್ ಇಂಟೆಲೀಜೆಂಸ್ (AI) ಮಾಡಲ್ಪಟ್ಟ ಚಿತ್ರ ಎಂದು ದೃಢಪಡಿಸಿದವು (ಇಲ್ಲಿ, ಇಲ್ಲಿ). ವೈರಲ್ ಆಗಿರುವ ಫೋಟೋ ಸುಲೋಸ್ಜೋವಾ ಗ್ರಾಮದ ನಿಜವಾದ ಫೋಟೋ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ.
ಕೊನೆಯದಾಗಿ ಹೇಳುವುದಾದರೆ, ಎಐ/ಕೃತಕ ಬುದ್ಧಿಮತ್ತೆಯನ್ನು ಬಳಸಿ ಮಾಡಿದ ಫೋಟೋವನ್ನು ಪೋಲೆಂಡ್‌ನ ಸುಲೋಸ್ಜೋವ್ ಗ್ರಾಮದದ್ದು ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿದೆ.