‘ಸಂವಿಧಾನದಲ್ಲಿ ಎಷ್ಟು ಪೇಜುಗಳಿವೆ’ ಎಂದು ಸಂಸತ್ತಿನಲ್ಲಿ ಅನುರಾಗ್ ಠಾಕೂರ್ ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ರಾಹುಲ್ ಗಾಂಧಿಯ ಎಡಿಟ್ಡ್ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ

‘ನೀವು ಹಿಡಿದಿರುವ ಸಂವಿಧಾನದಲ್ಲಿ ಎಷ್ಟು ಪೇಜುಗಳಿವೆ’ ಎಂದು ಸಂಸತ್ತಿನಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು  ಕೇಳಿದ ಪ್ರಶ್ನೆಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರಿಸಲು ಸಾಧ್ಯವಾಗದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಲೇಖನದ ಮೂಲಕ ಈ ವೀಡಿಯೊದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ”ನೀವು ಹಿಡಿದಿರುವ ಸಂವಿಧಾನದಲ್ಲಿ ಎಷ್ಟು ಪೇಜುಗಳಿವೆ’ ಎಂದು ಸಂಸತ್ತಿನಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು  ಕೇಳಿದ ಪ್ರಶ್ನೆಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರಿಸಲು ಸಾಧ್ಯವಾಗದ ವೀಡಿಯೊ

ಫ್ಯಾಕ್ಟ್: ಈ ವೈರಲ್ ವೀಡಿಯೊವನ್ನು ಎಡಿಟ್ ಮಾಡಲಾಗಿದೆ. ಜುಲೈ 1, 2024 ರಂದು ರಾಷ್ಟ್ರಪತಿಗಳ ಭಾಷಣವನ್ನುದ್ದೇಶಿಸಿ ಮಾತನಾಡುತ್ತಾ ಬಿಜೆಪಿ ಸಂಸದ ಅನುರಾಗ್ ಠಾಕೂರ್  ವಿರೋಧ ಪಕ್ಷದ ಸಂಸದರನ್ನು ಉದ್ದೇಶಿಸಿ, “ನಾನು ನಿಮೆಲ್ಲರಲ್ಲೂ ಮರು  ಪ್ರಶ್ನೆಯನ್ನು ಕೇಳ ಬಯಸುತ್ತೇನೆ.  ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಎಷ್ಟು, ಎಷ್ಟು, ಎಷ್ಟು ಪುಟಗಳಿವೆ? ತುಂಬಾ ಎಂದು ಹೇಳಬೇಡಿ, ನೀವು ದಿನನಿತ್ಯ ಅದನ್ನು (ಸಂವಿಧಾನದ ಪ್ರತಿ) ಹಿಡಿದುಕೊಂಡು ತಿರುಗಾಡುತ್ತೀರಿ, ಒಮ್ಮೆಯಾದರೂ ಓದಿಲ್ಲವೇ? ಎಂದು ಕೇಳಿದ್ದಾರೆ. ಸಂಸದ್ ಟಿವಿ ಯುಟ್ಯೂಬ್ ನಲ್ಲಿ ಹಂಚಿಕೊಂಡಿರುವ ಅನುರಾಗ್ ಠಾಕೂರ್ ಭಾಷಣದ ವೀಡಿಯೋವನ್ನುಸರಿಯಾಗಿ  ಗಮನಿಸಿದರೆ, ಅನುರಾಗ್ ಠಾಕೂರ್ ಅವರು ಮಾತನಾಡುವಾಗ  ರಾಹುಲ್ ಗಾಂಧಿ ಲೋಕಸಭೆಯಲ್ಲಿಇರಲಿಲ್ಲವಂತೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು  ತಪ್ಪಾಗಿದೆ.

ಈ ವೈರಲ್ ಕ್ಲೇಮ್ ಮತ್ತು ಈ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಿದಾಗ, ಈ ವೈರಲ್ ವೀಡಿಯೊದ ಸಂಪೂರ್ಣ ವೀಡಿಯೊವನ್ನು ಜುಲೈ  1, 2024 ರಂದು ‘ಸಂಸದ್ ಟಿವಿ’ (ಭಾರತೀಯ ಸಂಸತ್ತಿನ ಅಧಿವೇಶನಗಳ ಅಧಿಕೃತ ಚಾನೆಲ್) ಯೂಟ್ಯೂಬ್‌ನಲ್ಲಿ ದೊರಕಿದೆ.  “Anurag Thakur’s Remarks | Motion of Thanks on the President’s Address in 18th Lok Sabha ” ಎಂಬ ಶೀರ್ಷಿಕೆಯೊಂದಿಗೆ ಅದನ್ನು ಪ್ರಕಟಿಸಲಾಗಿದೆ. ಈ ವೀಡಿಯೊದ ವಿವರಣೆಯ ಪ್ರಕಾರ,  ಜುಲೈ 1, 2024 ರಂದು ರಾಷ್ಟ್ರಪತಿಗಳ ಭಾಷಣದ ಕುರಿತು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮಾತನಾಡಿದ ವಿಷಯಕ್ಕೆ ಸಂಬಂಧಿಸಿದೆ.

ವೀಡಿಯೊದ ಸಂಪೂರ್ಣವಾಗಿ ಪರಿಶೀಲಿಸಿದಾಗ.  ಈ ವೈರಲ್ ವೀಡಿಯೊ ಕ್ಲಿಪ್ 56:36 ಟೈಮ್‌ಸ್ಟ್ಯಾಂಪ್‌ನಲ್ಲಿ ಪ್ರಾರಂಭವಾಗುತ್ತದೆ. ಟೈಮ್‌ಸ್ಟ್ಯಾಂಪ್ 56:33 ನಲ್ಲಿ ಅನುರಾಗ್ ಠಾಕೂರ್ ಅವರು ವಿರೋಧ ಪಕ್ಷದ ಸಂಸದರನ್ನು ಉದ್ದೇಶಿಸಿ “ನಾನು ನಿಮೆಲ್ಲರಲ್ಲೂ ಮರು  ಪ್ರಶ್ನೆಯನ್ನು ಕೇಳ ಬಯಸುತ್ತೇನೆ.  ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಎಷ್ಟು, ಎಷ್ಟು, ಎಷ್ಟು ಪುಟಗಳಿವೆ?  ತುಂಬಾ  ಎಂದು ಹೇಳಬೇಡಿ, ನೀವು ದಿನನಿತ್ಯ ಅದನ್ನು (ಸಂವಿಧಾನದ ಪ್ರತಿ) ಹಿಡಿದುಕೊಂಡು ತಿರುಗಾಡುತ್ತೀರಿ, ಒಮ್ಮೆಯಾದರೂ ಓದಿಲ್ಲವೇ?  ಎಂದು ಹೇಳಿರುವುದನ್ನು ನಾವು ನೋಡಬಹುದು. ಅನುರಾಗ್ ಠಾಕೂರ್ ಈ ಪ್ರಶ್ನೆಯನ್ನು ಕೇಳುತ್ತಿದ್ದಂತೆ, ಕ್ಯಾಮೆರಾ ವಿರೋಧ ಪಕ್ಷದ ಬೆಂಚುಗಳತ್ತ ಚಲಿಸಿತು, ಆದರೆ ರಾಹುಲ್ ಗಾಂಧಿ  ಅಲ್ಲಿ ಎಲ್ಲಿಯೂ ಕಾಣಿಸಿಲ್ಲ.

ವಿರೋಧ ಪಕ್ಷದ ಸಂಸದರಿಗೆ ಮೀಸಲಾದ ಬೆಂಚುಗಳ ಮುಂದಿನ ಸಾಲಿನ ಬೆಂಚಿನಲ್ಲಿ ಮಾತ್ರ ವಿರೋಧ ಪಕ್ಷದ ನಾಯಕರು ಕುಳಿತುಕೊಳ್ಳುತ್ತಾರೆ. 18ನೇ ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವುದರಿಂದ ವಿರೋಧ ಪಕ್ಷದ ಸಂಸದರ ಬೆಂಚು ಮೇಲೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ಈ ಫುಲ್ ವೀಡಿಯೋವನ್ನು ಕೂಲಂಕುಷವಾಗಿ ನೋಡಿದರೆ ಅಸೆಂಬ್ಲಿಯಲ್ಲಿ ರಾಹುಲ್ ಗಾಂಧಿ ಎಲ್ಲಿಯೂ  ಕಾಣಸಿಗುವುದಿಲ್ಲ, ರಾಹುಲ್ ಗಾಂಧಿಯವರ ಮುಂದಿನ ಸಾಲಿನ ಸೀಟು ಈ ಪ್ರಸ್ತಾಪ ನಡೆದಷ್ಟು ಸಮಯ  ಖಾಲಿಯೇ ಇದೆ.

ಈ ವೈರಲ್ ವೀಡಿಯೊದಲ್ಲಿ ರಾಹುಲ್ ಗಾಂಧಿಯವರು  ಜುಲೈ 1, 2024 ರಂದು ಅಧ್ಯಕ್ಷರ ಭಾಷಣದ ಕುರಿತು ಮಾಡಿದ ಭಾಷಣದ ವೀಡಿಯೊದ ಒಂದು ಭಾಗವನ್ನು ತೆಗೆದು ಈ ವೈರಲ್ ವೀಡಿಯೊಗೆ ಸೇರಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಮುಂದಿನ ಸಾಲಿನ ಸೀಟಿನಲ್ಲಿ ರಾಹುಲ್ ಗಾಂಧಿಯನ್ನು ಕುಳಿತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ರಾಹುಲ್ ಗಾಂಧಿಯವರ ಭಾಷಣದ ವೀಡಿಯೊವನ್ನು ‘ಸಂಸದ್ ಟಿವಿ’ ಯೂಟ್ಯೂಬ್ ಚಾನೆಲ್‌ನಲ್ಲಿ (ಇಲ್ಲಿ) ನೋಡಬಹುದು. ಇದರ ಆಧಾರದ ಮೇಲೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಜುಲೈ 1, 2024 ರಂದು ಸಂಸತ್ತಿನಲ್ಲಿ ಮಾಡಿದ ಭಾಷಣದ ವೀಡಿಯೊವನ್ನು ಎಡಿಟ್ ಮಾಡಿ  ಈ ವೈರಲ್ ವೀಡಿಯೊವನ್ನು ಕ್ರಿಯೇಟ್ ಮಾಡಲಾಗಿದೆ.

ಸ್ಪಷ್ಟವಾಗಿ ಹೇಳಬೇಕೆಂದರೆ , ‘ಸಂವಿಧಾನದಲ್ಲಿ ಎಷ್ಟು ಪುಟಗಳಿವೆ’ ಎಂಬ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರಿಸಲು ಸಾಧ್ಯವಾಗಲಿಲ್ಲ ಎನ್ನುವ ಕ್ಲಿಪ್ ಅನ್ನು ಎಡಿಟ್ ಮಾಡಿ ಶೇರ್ ಮಾಡಲಾಗಿದೆ.