ಎಡಿಟೆಡ್ ಸ್ಕ್ರೀನ್‌ಶಾಟ್ ಅನ್ನು ಬಳಸಿ ಪಾಕಿಸ್ತಾನ ಮೂಲದ ಆಹಾರ ಉದ್ಯೋಗಿಗಳು ಟಿಟಿಡಿಗೆ ತುಪ್ಪ ಸರಬರಾಜು ಮಾಡುತ್ತಿದ್ದ ತಮಿಳುನಾಡಿನ ಕಂಪನಿಯವರು ಎಂದು ತಪ್ಪಾಗಿ ಶೇರ್ ಮಾಡಲಾಗಿದೆ

ತಿರುಮಲ ದೇವಸ್ಥಾನದಲ್ಲಿ ಪ್ರಸಾದಕ್ಕಾಗಿ ತುಪ್ಪವನ್ನು ಪೂರೈಸಲು ಗುತ್ತಿಗೆ ಪಡೆದಿರುವ ಕಂಪನಿಯ ಉನ್ನತ ಅಧಿಕಾರಿಗಳು ಮುಸ್ಲಿಮರು ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ. ಪೋಸ್ಟ್‌ನಲ್ಲಿ ಹಿಂದೂಗಳು ಮುಸ್ಲಿಂ ಸಂಘಟನೆಗಳನ್ನು ನಿರ್ವಹಿಸಬಹುದೇ ಎಂದು ಪ್ರಶ್ನಿಸಿದ್ದಾರೆ, ಮಾತ್ರವಲ್ಲದೇ ಸರ್ಕಾರದ ಮೇಲ್ವಿಚಾರಣೆಯಿಲ್ಲದೆ ದೇವಾಲಯಗಳ ಮೇಲೆ ಹಿಂದೂ ನಿಯಂತ್ರಣವನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದ್ದಾರೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿನ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಎ.ಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್, ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ತುಪ್ಪವನ್ನು ಪೂರೈಸುತ್ತದೆ, ಇದನ್ನು ಮುಸ್ಲಿಮರು ನಡೆಸುತ್ತಿದ್ದಾರೆ.

ಫ್ಯಾಕ್ಟ್: ಎ.ಆರ್ ಫುಡ್ಸ್ (ಪ್ರೈ) ಲಿಮಿಟೆಡ್‌ನ ಅಧಿಕಾರಿಗಳನ್ನು ತೋರಿಸುವ ವೈರಲ್ ಸ್ಕ್ರೀನ್‌ಶಾಟ್ ಪಾಕಿಸ್ತಾನದ ಸಂಸ್ಥೆಯಾಗಿದೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಆದರೆ, ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ತುಪ್ಪವನ್ನು ಸರಬರಾಜು ಮಾಡುವವರಲ್ಲಿ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಕೂಡ ಒಂದು, ಇದು ತಮಿಳುನಾಡು ಮೂಲದ ಕಂಪನಿಯಾಗಿದ್ದು, ಇದನ್ನು ರಾಜಶೇಖರನ್ ಆರ್ ನಿರ್ವಹಣಾಧಿಕಾರಿ, ಸೂರ್ಯ ಪ್ರಭಾ ಆರ್ ಮತ್ತು ಶ್ರೀನಿವಾಸನ್ ಎಸ್ ಆರ್ ನಿರ್ದೇಶಕರು ನೋಡಿಕೊಳ್ಳುತ್ತಿದ್ದಾರೆ. ವೈರಲ್ ಸ್ಕ್ರೀನ್‌ಶಾಟ್ ಅನ್ನು ಎಡಿಟ್ ಮಾಡಲಾಗಿದೆ ಮತ್ತು ಅದನ್ನು ತಮಿಳುನಾಡಿನ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಆಂಧ್ರಪ್ರದೇಶದ ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡು ಪ್ರಸಾದವನ್ನು ತಯಾರಿಸಲು ಬಳಸಿದ ತುಪ್ಪದಲ್ಲಿ “ದನದ ಮಾಂಸ,” “ಹಂದಿ ಕೊಬ್ಬು,” ಮತ್ತು “ಮೀನಿನ ಎಣ್ಣೆ” ಕಂಡುಬಂದಿದೆ ಎಂಬ ಪ್ರಯೋಗಾಲಯದ ವರದಿಯ ನಂತರ ವಿವಾದಗಳು ಹೆಚ್ಚಾಗಿದ್ದು ಆ ನಡುವೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ತಮಿಳುನಾಡಿನ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ಟಿಟಿಡಿಗೆ ಪ್ರಸಾದಕ್ಕಾಗಿ ತುಪ್ಪವನ್ನು ಪೂರೈಸುವವರಲ್ಲಿ ಒಂದಾಗಿದೆ. 

ವೈರಲ್ ಸ್ಕ್ರೀನ್‌ಶಾಟ್ ನಲ್ಲಿ ಕಂಪನಿಯನ್ನು AR ಫುಡ್ಸ್ (Pvt) ಲಿಮಿಟೆಡ್ ಎಂದು ಹೇಳಲಾಗಿದೆ. ಗೂಗಲ್ ನಲ್ಲಿ ಈ ಕುರಿತು ಹುಡುಕಾಡಿದಾಗ  ಒಂದೇ ರೀತಿಯ ಹೆಸರಿನ ಎರಡು ಕಂಪನಿಗಲಿದ್ದು : ಒಂದು ಭಾರತದಲ್ಲಿ ಇನ್ನೊಂದು ಪಾಕಿಸ್ತಾನದಲ್ಲಿದೆ. ಅದರಲ್ಲೂ ನಿರ್ದಿಷ್ಟವಾಗಿ AR ಫುಡ್ಸ್ (Pvt) ಲಿಮಿಟೆಡ್ (ಪಾಕಿಸ್ತಾನ), ಮತ್ತು AR ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ (ಭಾರತ) ಎಂದಿವೆ. ವೈರಲ್ ಸ್ಕ್ರೀನ್‌ಶಾಟ್‌ನ ಗೂಗಲ್ ಲೆನ್ಸ್ ಸರ್ಚಿನ್ಗ್ ರಾಕೆಟ್ ರೀಚ್‌ನಲ್ಲಿರುವ ಪಾಕಿಸ್ತಾನದ ಕಂಪನಿಯ ಪ್ರೊಫೈಲ್‌ಗೆ ನಮ್ಮನ್ನು ಕರೆದೊಯ್ಯಿತು.  ಇದು AR ಫುಡ್ಸ್ (Pvt) ಲಿಮಿಟೆಡ್ ಇಸ್ಲಾಮಾಬಾದ್‌ನಲ್ಲಿದೆ ಎಂದು ತಿಳಿಸಿದೆ.

ಎಂಪ್ಲಾಯೀಸ್ ಪ್ರೊಫೈಲ್‌ಗಳ ವೈರಲ್ ಸ್ಕ್ರೀನ್‌ಶಾಟ್ ಅನ್ನು ಆ ಪ್ಲಾಟ್‌ಫಾರ್ಮ್‌ನಿಂದ ತೆಗೆದುಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.  ಹಾಗೂ ಎರಡೂ ಸ್ಕ್ರೀನ್‌ಶಾಟ್‌ಗಳ ಹೋಲಿಕೆಯು ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಉದ್ಯೋಗಿಗಳ ಸ್ಥಳಗಳನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿಸುತ್ತವೆ. 

ಈ ಕಂಪನಿಯ ಅಫೀಷಿಯಲ್ ವೆಬ್‌ಸೈಟ್ ಕೂಡ ಎಆರ್ ಫುಡ್ಸ್ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿದೆ ಎಂದು ಖಚಿತಪಡಿಸುತ್ತದೆ. ಅದರಲ್ಲಿ, “ಎ.ಆರ್. ಫುಡ್ಸ್ ಪಾಕಿಸ್ತಾನದಲ್ಲಿನ ತಲೆಮಾರುಗಳ-ಹಳೆಯ ಮನೆಯ ಹೆಸರಾಗಿದ್ದು, ಅಡುಗೆಮನೆಗಳಲ್ಲಿ ಪ್ರಧಾನವಾಗಿರುವ ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. 1970 ರಲ್ಲಿ ಸ್ಥಾಪನೆಯಾದ ಕಂಪನಿಯು ಬೆಲೆಬಾಳುವ ಉತ್ಪನ್ನಗಳನ್ನು ಅದರ ಪ್ರಮುಖವಾಗಿ ಪ್ಯಾಕ್ ಮಾಡಿದ ಮಸಾಲೆಗಳೊಂದಿಗೆ ತಲುಪಿಸಲು ಪೂರಕವಾಗಿದೆ”. 

ಇದಲ್ಲದೆ, “AR ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್” ಗಾಗಿ ಗೂಗಲ್ ಕೀವರ್ಡ್ ಮೂಲಕ ಹುಡುಕಾಡಿದಾಗ, ಇದು ನಮ್ಮನ್ನು ರಾಜ್ ಮಿಲ್ಕ್‌ನ ಅಫೀಷಿಯಲ್ ವೆಬ್‌ಸೈಟ್‌ಗೆ ಕರೆದೊಯ್ಯಿತು.  ಈ ಕಂಪನಿಯು ತಮಿಳುನಾಡಿನ ದಿಂಡಿಗಲ್‌ನಲ್ಲಿದೆ ಎಂದು ತಿಳಿದುಬಂದಿದೆ. ವೆಬ್‌ಸೈಟ್ ನಲ್ಲಿ ತಿಳಿಸಿದ ಪ್ರಕಾರ, “ಎ.ಆರ್. 1995 ರಲ್ಲಿ ಸ್ಥಾಪಿತವಾದ  ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್, ಗ್ರಾಹಕರಿಗೆ ಅತ್ಯಧಿಕ ಪೌಷ್ಟಿಕಾಂಶದ ಮೌಲ್ಯವನ್ನು ತಲುಪಿಸಲು ಮೀಸಲಾಗಿರುವ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉತ್ಪಾದಿಸುವುದರ ಮೇಲೆ ಕೇಂದ್ರೀಕರಿಸಿದೆ.’’ ಟಿಟಿಡಿಗೆ ತುಪ್ಪ ಸರಬರಾಜು ಮಾಡಿದ ಕಂಪನಿಗಳಲ್ಲಿ ಇದೂ ಒಂದು, ಆದರೆ ಇದು ಪಾಕಿಸ್ತಾನದ ಸಂಸ್ಥೆಯಲ್ಲ.

ವೆಬ್‌ಸೈಟ್‌ನಲ್ಲಿನ ಡೈರೆಕ್ಟರ್ ಸೆಕ್ಷನ್ ರಾಜಶೇಖರನ್ ಆರ್. ವ್ಯವಸ್ಥಾಪಕ ನಿರ್ದೇಶಕರೆಂದು ತಿಳಿಸಿದ್ದು, ಸೂರಿಯಾ ಪ್ರಭಾ ಆರ್. ಮತ್ತು ಶ್ರೀನಿವಾಸನ್ ಎಸ್‌ಆರ್ ನಿರ್ದೇಶಕರಾಗಿ. ವೈರಲ್ ಪೋಸ್ಟ್ನಲ್ಲಿ ಹೇಳಿದಹಾಗೆ ಈ ಕಂಪನಿಯನ್ನು ಮುಸ್ಲಿಮರು ನಡೆಸುತ್ತಿದ್ದಾರೆ ಎನ್ನುವುದು ನಿಜವಲ್ಲ. ಟೆಕ್ನಿಕಲ್ ಟೀಮ್ ವೈರಲ್ ಹೆಸರುಗಳನ್ನು ಸಹ ನಿರಾಕರಿಸಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಸರ್ಚ್ ಮಾಡಿದಾಗ ರಾಜಶೇಖರನ್ ಸೂರ್ಯಪ್ರಭ ಮತ್ತು ಶ್ರೀನಿವಾಸಲುನಾಯ್ಡು ರಾಮಚಂದ್ರನ್ ಶ್ರೀನಿವಾಸನ್ ಅವರನ್ನು ನಿರ್ದೇಶಕರು, ರಾಜು ರಾಜಶೇಖರನ್ ಎಂಡಿ ಎಂದು ಖಚಿತಪಡಿಸಿದೆ. 

ಹೆಚ್ಚುವರಿಯಾಗಿ, 1995 ರಲ್ಲಿ ಸ್ಥಾಪಿಸಲಾದ ತಮಿಳುನಾಡು ಮೂಲದ ಡೈರಿ ಕಂಪನಿಯನ್ನು ರಾಜಶೇಖರನ್ ಆರ್, ಸುರಿಯಾ ಪ್ರಭಾ ಆರ್, ಮತ್ತು ಶ್ರೀನಿವಾಸನ್ ಎಸ್ಆರ್. ಎನ್ನುವ ಮೂರು ನಿರ್ದೇಶಕರು ನಿರ್ವಹಿಸುತ್ತಿದ್ದಾರೆ ಎಂದು ಹೇಳುವ ವರದಿಗಳನ್ನು (ಇಲ್ಲಿ ಮತ್ತು ಇಲ್ಲಿ) ನಾವು ಕಂಡುಕೊಂಡಿದ್ದೇವೆ: 

ಒಟ್ಟಾರೆಯಾಗಿ ಹೇಳುವುದಾದರೆ, ತಿರುಮಲ ತಿರುಪತಿ ದೇವಸ್ಥಾನಗಳಿಗೆ ಪ್ರಸಾದಕ್ಕಾಗಿ ತುಪ್ಪವನ್ನು ಪೂರೈಸಿದ ತಮಿಳುನಾಡು ಸಂಸ್ಥೆಯೊಂದಕ್ಕೆ ಪಾಕಿಸ್ತಾನ ಮೂಲದ ಆಹಾರ ಉದ್ಯೋಗಿಗಳ ಹೆಸರನ್ನು ಎಡಿಟ್  ಮಾಡಿ ಸ್ಕ್ರೀನ್‌ಶಾಟ್ ನಲ್ಲಿ ತಪ್ಪಾಗಿ ಲಿಂಕ್ ಮಾಡಲಾಗಿದೆ.