ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷರು ಮುಸ್ಲಿಂ ಹುಡುಗಿಯರ ಬಗ್ಗೆ ಇಂತಹ ಟೀಕೆಗಳನ್ನು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ

“ಕಳೆದ ಎರಡು ತಿಂಗಳಲ್ಲಿ ಸುಮಾರು 5,000 ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನ್ನು ಮದುವೆಯಾಗಿದ್ದಾರೆ. ಇವರು ಅಫ್ಘಾನಿಸ್ತಾನದಲ್ಲಿ ಆಗಿರುವ ಬೆಳವಣಿಗೆಗಳಿಂದ ಹತಾಶರಾಗಿದ್ದಾರೆ ಮತ್ತು ಇಸ್ಲಾಂ ಧರ್ಮದ ಬಗ್ಗೆ ಅಸಹ್ಯ ಹೊಂದಿದ್ದಾರೆ” ಎಂದು ಆಲ್ ಇಂಡಿಯಾ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷರು ಹೇಳಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌‌ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಶೇರ್‌ ಮಾಡುತ್ತಿದ್ದಾರೆ. ಇದು ನಿಜವೇ ಎಂಬುವುದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತಿಪಾದನೆ: “ಅಫ್ಘಾನಿಸ್ತಾನದ ಬೆಳವಣಿಗೆಗಳಿಂದ ಹತಾಶೆ ಮತ್ತು ಇಸ್ಲಾಮಿನ ಬಗ್ಗೆ ಅಸಹ್ಯ, ಕಳೆದ 2 ತಿಂಗಳಲ್ಲಿ ಸುಮಾರು 5000 ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನ್ನು ಮದುವೆಯಾಗಿದ್ದಾರೆ” – ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಧ್ಯಕ್ಷ.

ವಾಸ್ತವ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (AIMPLB) ಅಧ್ಯಕ್ಷರು ಹೀಗೆ ಹೇಳಿರುವ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ. ಪೋಸ್ಟ್‌ನಲ್ಲಿರುವ ಫೋಟೋದಲ್ಲಿರುವ ವ್ಯಕ್ತಿ ಹೆಸರು ಸಜ್ಜಾದ್ ನೊಮಾನಿ. ಸಜ್ಜದ್ ನೊಮಾನಿ ಅವರು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಾಗಿದ್ದಾರೆಯೆ ಹೊರತು ಅಧ್ಯಕ್ಷರಲ್ಲ. ಸಜ್ಜಾದ್ ನೊಮಾನಿ ಅವರು, ಸುಮಾರು 5,000 ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನ್ನು ಮದುವೆಯಾಗಿದ್ದಾರೆ ಎಂದು ಹೇಳಿದ್ದು ನಿಜವೇ ಆಗಿದೆ. ಆದರೆ ಈ ರೀತಿ ಮದುವೆಯಾಗಲು ಅಫ್ಘಾನಿಸ್ತಾನದ ಬೆಳವಣಿಗೆಗಳು ಕಾರಣ ಎಂದು ಅವರು ಹೇಳಲಿಲ್ಲ. ಆದುದರಿಂದ ವೈರಲ್ ಪೋಸ್ಟ್‌ನಲ್ಲಿ ಹರಿದಾಡುತ್ತಿರುವ ಸಂದೇಶವು ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹೇಳಲಾಗಿರುವ ಮಾಹಿತಿಯ ಬಗ್ಗೆ ಹುಡುಕಿದಾಗ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಎಲ್‌ಬಿ) ಅಧ್ಯಕ್ಷರು ಹೀಗೆ ಹೇಳಿರುವ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಅಂತಹ ಟೀಕೆಗಳನ್ನು ನಿಜವಾಗಿ ಮಾಡಿದ್ದರೆ, ಪತ್ರಿಕೆಗಳು ಅದರ ಬಗ್ಗೆ ವರದಿ ಮಾಡಿರುತ್ತಿದ್ದವು.

ಸಜ್ಜದ್ ನೊಮಾನಿ ಅವರು ಸುಮಾರು 5,000 ಮುಸ್ಲಿಂ ಹುಡುಗಿಯರು ಹಿಂದೂ ಹುಡುಗರನ್ನು ಮದುವೆಯಾಗಿದ್ದಾರೆ ಎಂದು ಹೇಳಿದ್ದಾರೆ. ಪೋಸ್ಟ್‌ನಲ್ಲಿರುವ ಫೋಟೋದಲ್ಲಿರುವ ವ್ಯಕ್ತಿ ಕೂಡ ಸಜ್ಜದ್ ನೊಮಾನಿ ಅವರೇ ಆಗಿದ್ದಾರೆ. ಸಜ್ಜಾದ್ ನೊಮಾನಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರಾಗಿದ್ದಾರೆಯೆ ಹೊರತು, ಅಧ್ಯಕ್ಷರಲ್ಲ. ಅಷ್ಟೇ ಅಲ್ಲದೆ, ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳೇ ಈ ಮದುವೆಗೆ ಕಾರಣ ಎಂದು ಅವರು ಹೇಳಲಿಲ್ಲ. ಅದಕ್ಕೆ ಸಂಬಂಧಿಸಿದ ವೀಡಿಯೊವನ್ನು ನೀವು ಇಲ್ಲಿ ವೀಕ್ಷಿಸಬಹುದು.

ಮುಸ್ಲಿಂ ಮಹಿಳೆಯರನ್ನು ಹಿಂದೂ ಧರ್ಮದ ಕಡೆಗೆ ಸೆಳೆಯಲು ಯೋಜಿತ ಪಿತೂರಿ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಮೊಬೈಲ್ ಫೋನುಗಳು ಮತ್ತು ಕಾಲೇಜು ಶಿಕ್ಷಣ ಇದಕ್ಕೆಲ್ಲಾ ಕಾರಣ ಎಂದು ಅವರು ಹೇಳಿದ್ದರು. ಮುಸ್ಲಿಂ ಹುಡುಗಿಯರು ಇತರ ಧರ್ಮದ ಜನರೊಂದಿಗೆ ಸ್ನೇಹ ಬೆಳೆಸುತ್ತಿದ್ದಾರೆ. ಅವರ ಪೋಷಕರಿಗೆ ಅವರು ಏನು ಮಾಡುತ್ತಿದ್ದಾರೆ ಎಂದು. ಪೋಷಕರು ತಮ್ಮ ಹುಡುಗಿಯರಿಗೆ ಇಸ್ಲಾಂ ಬಗ್ಗೆ ಕಲಿಸುತ್ತಿಲ್ಲ. ಅವರ ಸುತ್ತ ಏನು ನಡೆಯುತ್ತಿದೆ ಎಂದು ಹೇಳುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಈ ಮೇಲಿನ ಕಾರಣಗಳನ್ನು ಹೇಳಿದ್ದಾರೆಯೆ ಹೊರತು, ಅಫ್ಘಾನಿನ ಕಾರಣಗಳಿಗಾಗಿ ಇಸ್ಲಾಂ ಬಗ್ಗೆ ಅಸಹ್ಯಪಡುತ್ತಿದ್ದಾರೆ ಎಂದು ಹೇಳಲಿಲ್ಲ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಸಜ್ಜದ್ ನೊಮಾನಿ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕಾರ್ಯಗಳನ್ನು ಶ್ಲಾಘಿಸಿದ್ದರು. ಆದರೆ, ಇದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಹೇಳಿಕೆಯಲ್ಲ ಎಂದು ಮಂಡಳಿ ನಂತರ ಸ್ಪಷ್ಟಪಡಿಸಿದೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಆಗಸ್ಟ್ ತಿಂಗಳಲ್ಲಿ ಏಳು ನಿರ್ದೇಶನಗಳನ್ನು ಹೊರಡಿಸಿದ್ದು, ಷರಿಯಾ ಕಾನೂನಿನ ಪ್ರಕಾರ “ಅಸಿಂಧು” ಆಗುವುದರಿಂದ ಯುವಜನರು ಅಂತರ್ ಧರ್ಮೀಯ ವಿವಾಹಗಳು ಆಗದಂತೆ ಹೇಳಿಕೆ ನೀಡಿತ್ತು ಎಂದು ಪತ್ರಿಕೆಗಳು ವರದಿ ಮಾಡಿತ್ತು.

ಒಟ್ಟಿನಲ್ಲಿ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷರು ಮುಸ್ಲಿಂ ಹುಡುಗಿಯರ ಮೇಲೆ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.