ಅಖಿಲೇಶ್ ಯಾದವ್ ಅವರು 2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ಹರಿದ್ವಾರದಲ್ಲಿ ಗಂಗಾ ಸ್ನಾನ ಮಾಡುತ್ತಿರುವ ಅವರ ಫೋಟೋಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಅಪ್‌ಡೇಟ್ (30 ಜನವರಿ 2025): ಅಖಿಲೇಶ್ ಯಾದವ್ 26 ಜನವರಿ 2025 ರಂದು ಮಹಾ ಕುಂಭಮೇಳದಲ್ಲಿ ಭಾಗವಹಿಸಿದರು. ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದೇನೆ ಎಂದು ಅಖಿಲೇಶ್ ತಮ್ಮ ‘X’ ಖಾತೆಯಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಪವಿತ್ರ ಸ್ನಾನ ಮಾಡುತ್ತಿರುವ ಕೆಲವು ಫೋಟೋಗಳು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ದೃಶ್ಯಗಳು.

ಫ್ಯಾಕ್ಟ್: ಇದು ಇತ್ತೀಚೆಗೆ ಹರಿದ್ವಾರದಲ್ಲಿ ಅಖಿಲೇಶ್ ಯಾದವ್ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿರುವ ಫೋಟೋಗಳು. ಜನವರಿ 14, 2025 ರಂದು ಅವರು ಈ ಫೋಟೋಗಳನ್ನು ತಮ್ಮ ‘X’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜನವರಿ 20, 2025 ರ ಹೊತ್ತಿಗೆ ಅವರು ಕುಂಭಮೇಳದಲ್ಲಿ ಭಾಗವಹಿಸಿದ ಬಗ್ಗೆ ಯಾವುದೇ ಸುದ್ದಿ ವರದಿಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ. 

ಈ ಕ್ಲೇಮ್ ನ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು, ವೈರಲ್ ಪೋಸ್ಟ್‌ನಲ್ಲಿರುವ ಫೋಟೋಗಳನ್ನು ನಾವು ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟದ ಮೂಲಕ, ಅಖಿಲೇಶ್ ಯಾದವ್ ಅವರ ‘X’ ಅಕೌಂಟ್ ಇದೇ ಫೋಟೋಗಳು ನಮಗೆ ಸಿಕ್ಕವು.

ಈ ಪೋಸ್ಟ್‌ನಲ್ಲಿ ಫೋಟೋಗಳು 2025 ರ ಜನವರಿ 14 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಹರಿದ್ವಾರದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ತೆಗೆದ ಫೋಟೋಗಳಾಗಿವೆ. ಇದಲ್ಲದೆ,  ಈ ವಿಷಯದ ಕುರಿತು ನಮಗೆ ಹಲವಾರು ನ್ಯೂಸ್ ಆರ್ಟಿಕಲ್ಸ್  (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ಸಿಕ್ಕಿವೆ. 

ವರದಿಗಳ ಪ್ರಕಾರ, ಇವು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿರುವ ಅಖಿಲೇಶ್ ಯಾದವ್ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿರುವ ಫೋಟೋಗಳಾಗಿವೆ. ಮಹಾ ಕುಂಭಮೇಳವು 2025 ರ ಜನವರಿ 13 ರಿಂದ 2025 ರ ಫೆಬ್ರವರಿ 26 ರವರೆಗೆ ಉತ್ತರಾಖಂಡದಲ್ಲಿ ಅಲ್ಲ, ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಗರದಲ್ಲಿ ನಡೆಯಲಿದೆ

ಇದಲ್ಲದೆ, ಈ ಲೇಖನವನ್ನು ಬರೆಯುವ ಸಮಯದಲ್ಲಿ, ಅಂದರೆ ಜನವರಿ 20, 2025 ರಂದು, ಅಖಿಲೇಶ್ ಯಾದವ್ ಈ ವರ್ಷದ ಮಹಾ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲು ಯಾವುದೇ ಸುದ್ದಿ ಸಹ ಬಂದಿಲ್ಲ. 

ಕೊನೆಯದಾಗಿ ಹೇಳುವುದಾದರೆ, ಅಖಿಲೇಶ್ ಯಾದವ್ ಅವರು ಹರಿದ್ವಾರದಲ್ಲಿ ಗಂಗಾ ಸ್ನಾನ ಮಾಡುತ್ತಿರುವ ಫೋಟೋಗಳನ್ನು,  ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.