ಪಿಒಕೆ ನಮ್ಮದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ, ಟ್ವೀಟ್ ಮಾಡಿಲ್ಲ; ಅವರಿಗೆ ಅಧಿಕೃತ ಟ್ವಿಟರ್‌ ಖಾತೆಯಿಲ್ಲ

ಭಾರತದ ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್, ’ಪಿಒಕೆ’  ಭಾರತದ  ಭಾಗವಾಗಿದೆ ಮತ್ತು ನಾವು ಅದನ್ನು ಶೀಘ್ರದಲ್ಲಿಯೇ ವಶಪಡಿಸಿಕೊಳ್ಳುತ್ತೇವೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿರುವ  ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಈ ಪೋಸ್ಟ್‌ನಲ್ಲಿ ಹೇಳಲಾಗುತ್ತಿರುವ ವಿಷಯದ ಸತ್ಯಾಸತ್ಯತೆಯನ್ನು ಈ ಲೇಖನದ ಮೂಲಕ ಪರಿಶೀಲಿಸೋಣ.

ಪ್ರತಿಪಾದನೆ:  ಪಿಒಕೆ ಇಂಡಿಯಾದ ಭಾಗವಾಗಿದೆ ಮತ್ತು ನಾವು ಅದನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳುತ್ತೇವೆ ಎಂದು ಅಜಿತ್ ದೋವಲ್ ಅವರು ಟ್ವೀಟ್ ಮಾಡಿದ್ದಾರೆ.

ಸತ್ಯಾಸತ್ಯತೆ: ಭಾರತದ ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಅಧಿಕೃತ ಟ್ವಿಟರ್ ಖಾತೆ ಇಲ್ಲ, ಆದ್ದರಿಂದ ಅವರು ಸ್ವತಃ ಯಾವುದೇ ಟ್ವೀಟ್‌ಗಳನ್ನು ಮಾಡಲು ಸಾಧ್ಯವಿಲ್ಲ. ಪಿಒಕೆ ಕುರಿತು ಅಜಿತ್ ದೋವಲ್ ಅವರು ನೀಡಿದ ಅಂತಹ ಯಾವುದೇ ಹೇಳಿಕೆಗೆ ಸಂಬಂಧಿಸಿದಂತೆ ಇತ್ತೀಚಿಗೆ ಯಾವುದೇ ಸುದ್ದಿ ಲೇಖನಗಳು ಪ್ರಕಟವಾಗಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ  ತಪ್ಪಾಗಿದೆ.

ಭಾರತದ ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಅಧಿಕೃತ ಟ್ವಿಟರ್ ಖಾತೆ ಇಲ್ಲ. ಆದ್ದರಿಂದ ಅವರು ಸ್ವತಃ ಯಾವುದೇ ಟ್ವೀಟ್‌ಗಳನ್ನು ಮಾಡಲು ಸಾಧ್ಯವಿಲ್ಲ. ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ r @AjitDoval_Ind ಟ್ವಿಟ್ಟರ್ ಖಾತೆಗಾಗಿ ನಾವು ಹುಡುಕಿದಾಗ, ಅದು ‘ಫ್ಯಾನ್ ಅಕೌಂಟ್’ (ಅಭಿಮಾನಿ ಖಾತೆ) ಎಂದು ಕಂಡುಬಂದಿದೆ.  ಆದರೆ ಇದು ಅಜಿತ್ ದೋವಲ್ ಅಧಿಕೃತ ಟ್ವಿಟರ್ ಖಾತೆಯಲ್ಲ. ಪೋಸ್ಟ್‌ನಲ್ಲಿ ಹಂಚಲಾದ  ಉದ್ದೇಶಿತ ಟ್ವೀಟ್  ಈಗ ಈ ಖಾತೆಯಲ್ಲಿ ಲಭ್ಯವಿಲ್ಲ. ಈ ಟ್ವೀಟ್  ಡಿಲೀಟ್ ಮಾಡಿರಬಹುದು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತು ಅಜಿತ್ ದೋವಲ್ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಇತ್ತೀಚಿನ ಸುದ್ದಿ ಲೇಖನಗಳಿಗಾಗಿ ಹುಡುಕಾಟ ನಡೆಸಿದಾಗ, ಯಾವುದೇ ಸುದ್ದಿ, ಲೇಖನಗಳು ಕಂಡುಬಂದಿಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದ ಹವಾಮಾನ ವರದಿಗಳು ಮತ್ತು ಮುನ್ಸೂಚನೆಗಳನ್ನು ಟೆಲಿವಿಷನ್ ಚಾನೆಲ್‌ಗಳಲ್ಲಿ ಪ್ರಕಟಿಸಲು, ವರದಿ ಮಾಡಲು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅವಕಾಶ  ಕಲ್ಪಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಲೇಖನವೊಂದು 2020 ರ ಮೇ 9 ರಂದು ಪ್ರಕಟಿಸಿದೆ.  

ಒಟ್ಟಾರೆಯಾಗಿ ಹೇಳುವುದಾದರೆ, ಪಿಒಕೆ ಬಗ್ಗೆ ಅಜಿತ್ ದೋವಲ್ ಟ್ವೀಟ್ ಮಾಡಿಲ್ಲ, ಏಕೆಂದರೆ,  ಅವರಿಗೆ ಅಧಿಕೃತ ಟ್ವಿಟರ್ ಖಾತೆ ಇಲ್ಲ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ತಪ್ಪಾಗಿದೆ.