ಕೈಲಾಸ ಪರ್ವತದ ಮೇಲೆ ಹೂವಿನ ಆಕಾರದ ಚಿಟ್ಟೆಯ ಆವಿಷ್ಕಾರ ಎಂದು AI- ರಚಿತ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ

ಕೈಲಾಸ ಪರ್ವತದ ಮೇಲೆ ಹೂವಿನ ಆಕಾರದ ಚಿಟ್ಟೆ ಕಾಣಿಸಿಕೊಂಡಿದೆ ಎಂದು ಹೇಳಿಕೊಳ್ಳುವ ವೀಡಿಯೊವನ್ನು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಕೈಲಾಸ ಪರ್ವತದ ಮೇಲೆ ಹೂವಿನ ಆಕಾರದ ಚಿಟ್ಟೆ ಕಾಣಿಸಿಕೊಂಡಿರುವ ವೀಡಿಯೊ.

ಫ್ಯಾಕ್ಟ್: ಇದು ಫ್ಲಕ್ಸ್, ಕ್ಲಿಂಗ್, ಇಲೆವೆನ್ ಲ್ಯಾಬ್ಸ್ ಮತ್ತು ಆಫ್ಟರ್ ಎಫೆಕ್ಟ್‌ಗಳಂತಹ ಪರಿಕರಗಳನ್ನು ಬಳಸಿಕೊಂಡು ರಚಿಸಲಾದ AI- ರಚಿತವಾದ ವೀಡಿಯೊವಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.

ಮೊದಲಿಗೆ, ಅಂತಹ ಯಾವುದೇ ಜೀವಿ ಇತ್ತೀಚೆಗೆ ಕಂಡುಬಂದಿದೆಯೇ ಎಂದು ಪರಿಶೀಲಿಸಲು ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಅನ್ನು ಹುಡುಕಿದೆವು. ಆದರೆ ಇದಕ್ಕೆ ಸಂಬಂದಿಸಿದ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಆದರೆ, ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಆರು ಬೆರಳುಗಳನ್ನು ಹೊಂದಿರುವ ಕೈ ಮತ್ತು ಬ್ಯಾಕ್ಗ್ರೌಂಡ್ ನಲ್ಲಿ ಜನರ ಅಸ್ವಾಭಾವಿಕ ಚಲನೆಗಳಂತಹ ಹಲವಾರು ವೈಪರೀತ್ಯಗಳನ್ನು ನಾವು ಗಮನಿಸಿದ್ದೇವೆ, ಇವು AI- ರಚಿತವಾದ ಅಥವಾ ಕುಶಲತೆಯಿಂದ ಮಾಡಿದ ದೃಶ್ಯಗಳ ಸ್ಪಷ್ಟ ಚಿಹ್ನೆಗಳಾಗಿವೆ.

ಮುಂದೆ, ವೈರಲ್ ವೀಡಿಯೊದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಒರಿಜಿನಲ್ ವೀಡಿಯೊವನ್ನು (ಆರ್ಕೈವ್) ಮಾರ್ಚ್ 7, 2025 ರಂದು ‘oleg.pars’ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಕಂಡುಬಂದಿದೆ. ಪೋಸ್ಟ್‌ನಲ್ಲಿ ವೀಡಿಯೊವನ್ನು AI ಮತ್ತು ಫ್ಲಕ್ಸ್, ಕ್ಲಿಂಗ್, ಇಲೆವೆನ್ ಲ್ಯಾಬ್ಸ್ ಮತ್ತು ಆಫ್ಟರ್ ಎಫೆಕ್ಟ್ಸ್‌ನಂತಹ ವಿನ್ಯಾಸ ಪರಿಕರಗಳನ್ನು/ ಡಿಸೈನ್ ಟೂಲ್ಸ್  ಬಳಸಿಕೊಂಡು ರಚಿಸಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಪೇಜ್ ನ ಬಯೋ ದಲ್ಲಿ ಇದನ್ನು “ನಂಬಲಾಗದ ಜೀವಿಗಳ” ನಿರಂತರ ಹುಡುಕಾಟದಲ್ಲಿರುವ ಡಿಜಿಟಲ್ ಸೃಷ್ಟಿಕರ್ತನಿಗೆ ಸೇರಿದೆ ಎಂದು ವಿವರಿಸುತ್ತದೆ. ಈ ಅಕೌಂಟ್ ಹೊಳೆಯುವ ಚೇಳು ಮತ್ತು ಕಮಲದ ಆಕಾರದ ಜೇಡದಂತಹ ವಿಚಿತ್ರ ಜೀವಿಗಳ ಇತರ AI- ರಚಿತ ದೃಶ್ಯಗಳನ್ನು ಸಹ ಒಳಗೊಂಡಿದೆ. ಇದಲ್ಲದೆ, AI ವೀಡಿಯೊ ಪತ್ತೆಕಾರಕಗಳು ವೈರಲ್ ವೀಡಿಯೊವನ್ನು AI- ರಚಿತ ಎಂದು ಗುರುತಿಸಿವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಕೈಲಾಸ ಪರ್ವತದ ಮೇಲೆ ಹೂವಿನ ಆಕಾರದ ಚಿಟ್ಟೆಯ ಆವಿಷ್ಕಾರ ಎಂದು ಹೇಳಿಕೊಂಡು AI- ರಚಿತವಾದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.