ಆಪರೇಷನ್ ಸಿಂಧ್‌ನಲ್ಲಿ ನಾಶವಾದ ಪಾಕಿಸ್ತಾನಿ ಏರ್ಬೇಸ್ ದೃಶ್ಯಗಳು ಎಂದು AI ರಚಿಸಲಾದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ

ಯುದ್ಧವಿಮಾನ ನೆಲೆಯಂತೆ ಕಾಣುವ ಸ್ಥಳದಲ್ಲಿ ಕೆಲವು ಹಾನಿಗೊಳಗಾದ ವಿಮಾನಗಳು ಮತ್ತು ಶಿಥಿಲಗೊಂಡ ಕಟ್ಟಡಗಳನ್ನು ತೋರಿಸುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಮೇ 7, 2025 ರಂದು ಭಾರತದ ಆಪರೇಷನ್ ಸಿಂಧ್‌ನಲ್ಲಿ ನಾಶವಾದ ಪಾಕಿಸ್ತಾನಿ ವಾಯುನೆಲೆಯ ವೀಡಿಯೊ ಎಂದು ಯೂಸೆರ್ಸ್ ಹೇಳಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಆಪರೇಷನ್ ಸಿಂಧ್‌ನಲ್ಲಿ ಪಾಕಿಸ್ತಾನಿ ವಾಯುನೆಲೆ ನಾಶವಾದ ದೃಶ್ಯಗಳನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಇದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಬಳಸಿ ರಚಿಸಲಾದ ವೀಡಿಯೊ. ಇದನ್ನು ಮೊದಲು ‘3amelyon’ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಯೂಸೆರ್ಸ್ ಅಪ್‌ಲೋಡ್ ಮಾಡಿದ್ದಾರೆ. ಅವರ ಪೇಜ್ನಲ್ಲಿ ಅಂತಹ ಅನೇಕ AI- ರಚಿತ ವೀಡಿಯೊಗಳಿವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ಈ ಕ್ಲೇಮ್ ನ  ಹಿಂದಿನ ಸತ್ಯವನ್ನು ಕಂಡುಹಿಡಿಯಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ನಲ್ಲಿ ಹುಡುಕಿದೆವು.  ಈ ವೀಡಿಯೊ ಆಪರೇಷನ್ ಸಿಂಧ್ ಸಮಯದಲ್ಲಿ ಪಾಕಿಸ್ತಾನದ ವಾಯುನೆಲೆಯ ಮೇಲೆ ದಾಳಿ ಮಾಡಿದೆ ಎಂದು ಹೇಳುವ ಯಾವುದೇ ಸುದ್ದಿ ವರದಿಗಳು ಕಂಡುಬಂದಿಲ್ಲ. ಅದೇ ರೀತಿ, ಭಾರತೀಯ ಪಡೆಗಳು ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುತ್ತಿರುವುದನ್ನು ತೋರಿಸುವ ಪತ್ರಿಕಾಗೋಷ್ಠಿಯ ವೀಡಿಯೊಗಳು ಸಹ ವೈರಲ್ ಪೋಸ್ಟ್‌ನಲ್ಲಿ ಕಂಡುಬರುವ ದೃಶ್ಯಗಳನ್ನು ಒಳಗೊಂಡಿಲ್ಲ.

ಈ ವೀಡಿಯೊದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಾವು ಅದರಲ್ಲಿರುವ ಕೆಲವು ಕೀಫ್ರೇಮ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ.  ಈ ವೀಡಿಯೊವನ್ನು ಮೊದಲು 19 ಮೇ 2025 ರಂದು ‘3amelyon’ ಎಂಬ ಇನ್ಸ್ಟಾಗ್ರಾಮ್ ಯೂಸೆರ್ಸ್ ಅಪ್‌ಲೋಡ್ ಮಾಡಿದ್ದಾರೆ ಎಂದು ಕಂಡುಕೊಂಡಿದ್ದೇವೆ. 

ಈ ಯೂಸೆರ್ಸ್ ಬಯೋ ಅರೇಬಿಕ್ ಭಾಷೆಯಲ್ಲಿದ್ದು, “ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು ದಂಗೆ” ಎಂದು ಅನುವಾದಿಸುವ ವಾಕ್ಯವನ್ನು ಹೊಂದಿದೆ. ಹಾಗೆಯೇ ಪ್ಯಾಲೆಸ್ಟೈನ್ ಪ್ರಸ್ತಾವನೆ  ಸಹ ಬಯೋದಲ್ಲಿ ಉಲ್ಲ್ಲೇಖಿಸಲಾಗಿದೆ. 

ವೈರಲ್ ಆಗಿರುವ ವಿಡಿಯೋದಲ್ಲಿ, ಕೆಲವು ಫೈಟರ್ ಜೆಟ್‌ಗಳು ಇಸ್ರೇಲಿ ಧ್ವಜದ ಯಹೂದಿ ಧಾರ್ಮಿಕ ಚಿಹ್ನೆಯಾದ ಡೇವಿಡ್ ನಕ್ಷತ್ರವನ್ನು ಹೊಂದಿರುವುದನ್ನು ನಾವು ಗಮನಿಸಿದ್ದೇವೆ. ಅಲ್ಲದೆ, ಕೆಲವು ವಿಮಾನಗಳು ತಮ್ಮ ರೆಕ್ಕೆಗಳ ಮೇಲೆ ಕೆಲವು ಅಸಂಬದ್ಧತೆಯನ್ನು ಹೊಂದಿವೆ, ಇದು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ದೃಶ್ಯಗಳಲ್ಲಿ ಸಹಜವಾಗಿ ಕಂಡುಬರುತ್ತದೆ. 

ಇದನ್ನು ತನಿಖೆ ಮಾಡಲು, ನಾವು ಈ ವೀಡಿಯೊವನ್ನು ‘ಕ್ಯಾಂಟಿಲಕ್ಸ್‘ ಮೂಲಕ ನಡೆಸಿದ್ದೇವೆ, ಇದು AI- ರಚಿತವಾದ ವೀಡಿಯೊಗಳು ಮತ್ತು ಫೋಟೋಗಳನ್ನು ಪತ್ತೆಹಚ್ಚುವ ಆನ್‌ಲೈನ್ ಸಾಧನವಾಗಿದೆ. ಅವರ ವಿಶ್ಲೇಷಣಾ ವರದಿಯಲ್ಲಿ, ಇದು AI- ರಚಿತವಾದ ವೀಡಿಯೊ (ಆರ್ಕೈವ್ ಲಿಂಕ್) ಆಗಿರುವ ಸಾಧ್ಯತೆ 99% ನಷ್ಟು ಕಂಡುಬಂದಿದೆ. 

ಕೊನೆಯದಾಗಿ ಹೇಳುವುದಾದರೆ, ಆಪರೇಷನ್ ಸಿಂಧ್‌ನಲ್ಲಿ ಪಾಕಿಸ್ತಾನಿ ವಾಯುನೆಲೆ ನಾಶವಾದ ದೃಶ್ಯಗಳು ಎಂದು  AI- ರಚಿತವಾದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.