ಈ ಕೃಷಿ ಆಧಾರಿತ ಕಂಪನಿಗಳನ್ನು ಅದಾನಿ ಗ್ರೂಪ್ 2019 ರಲ್ಲಿ ಸಂಯೋಜಿಸಿಲ್ಲ

ಅದಾನಿ ಗ್ರೂಪ್ ಸ್ಥಾಪಿಸಿದೆ ಎಂದು ಅನೇಕ ಕೃಷಿ ಆಧಾರಿತ ಕಂಪನಿಗಳ ಹೆಸರಿರುವ ಪಟ್ಟಿಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಟ್ಟಿಯಲ್ಲಿರುವ ಎಲ್ಲಾ ಕಂಪೆನಿಗಳು 2019 ರಲ್ಲಿ ಸಂಯೋಜಿಸಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಗುತ್ತಿಗೆ ಕೃಷಿ ಪದ್ಧತಿಗೆ ಅನುವು ಮಾಡಿಕೊಡುತ್ತದೆ ಎಂದು ಆರೋಪಿಸಲಾಗುತ್ತಿರುವ ಹೊಸ ಕೃಷಿ ಮಸೂದೆಗಳು, ಈ ಕಂಪನಿಗಳ ಅನುಕೂಲಕ್ಕೆ ಮಾಡಲಾಗುತ್ತಿದೆ ಎಂಬ ಅನುಮಾನವನ್ನು ಈ ಚಿತ್ರವು ಸೂಚಿಸುತ್ತದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಂಶವನ್ನು ಪರಿಶೀಲಿಸೋಣ.

ಫೋಸ್ಟ್‌ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಹೊಸ ಕೃಷಿ ಮಸೂದೆಗಳನ್ನು ಪರಿಚಯಿಸುವ ಮುನ್ನ 2019 ರಲ್ಲಿ ಬಹು ಕೃಷಿ ಆಧಾರಿತ ಕಂಪನಿಗಳನ್ನು ಅದಾನಿ ಸ್ಥಾಪಿಸಿದರು.

ಸತ್ಯಾಂಶ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಪೋಸ್ಟ್‌‌ನಲ್ಲಿ ಉಲ್ಲೇಖಿಸಿರುವ ಯಾವುದೇ ಕಂಪೆನಿಗಳು 2019 ರಲ್ಲಿ ನೋಂದಾಯಿಸಿಲ್ಲ. ಅದಾನಿ ಗ್ರೂಪ್‌ 2019 ರಲ್ಲಿ ಸಂಯೋಜಿಸಿದ ಗ್ರೂಪ್‌ನ‌ ಇತರ ಅಂಗಸಂಸ್ಥೆ ಕಂಪೆನಿಯ ನಿರ್ದಿಷ್ಟ ನಿರ್ದೇಶಕರ ಅಸೋಸಿಯೇಷನ್ ಮತ್ತು ನೇಮಕಾತಿ ದಿನಾಂಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಈ ಪೋಸ್ಟ್‌‌ನಲ್ಲಿ ಉಲ್ಲೇಖಿಸಲಾದ ಯಾವುದೇ ಕಂಪೆನಿಗಳು 2019 ರಲ್ಲಿ ಸಂಯೋಜಿಸಲ್ಪಟ್ಟಿಲ್ಲ. ಈ ಕಂಪೆನಿಗಳಲ್ಲಿ ಕೆಲವು 2019 ಕ್ಕಿಂತ ಮೊದಲು ಸಂಯೋಜಿಸಲ್ಪಟ್ಟಿವೆ. ಅಷ್ಟೇ ಅಲ್ಲದೆ, ಸಚಿವಾಲಯದ ಪ್ರಕಾರ, ಇನ್ನೂ ಬೇರೆ ಕೆಲವು ಕೃಷಿ ಆಧಾರಿತ ಕಂಪನಿಗಳೊಂದಿಗೂ ಅದಾನಿ ಗ್ರೂಪ್ 2019 ಕ್ಕಿಂತ ಮೊದಲು ಸಂಯೋಜಿಸಲ್ಪಟ್ಟಿದೆ.

ಪೋಸ್ಟ್‌‌ನಲ್ಲಿ ಉಲ್ಲೇಖಿಸಲಾದ ನಿರ್ದೇಶಕರ ವಿವರಗಳಿಂದ ಕ್ಯೂ ಪಡೆದುಕೊಂಡು, ಎಲ್ಲಾ ಭಾರತೀಯ ಕಂಪನಿಗಳ ಹಣಕಾಸು ಮತ್ತು ಹಣಕಾಸೇತರ ಡೇಟಾವನ್ನು ಒಟ್ಟುಗೂಡಿಸುವ ಹಣಕಾಸು ಕಂಪನಿಯಾದ ಇನ್ಸ್ಟಾಫೈನಾನ್ಷಿಯಲ್ಸ್‌‌ ಮೂಲಕ ಹೆಚ್ಚಿನ ಹುಡುಕಾಟ ನಡೆಸಿದೆವು. ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಇತರ ಕಂಪನಿಗಳೊಂದಿಗಿನ ಈ ನಿರ್ದಿಷ್ಟ ನಿರ್ದೇಶಕರ ಒಡನಾಟ ಮತ್ತು ನೇಮಕಾತಿಯ ದಿನಾಂಕವು ಪೋಸ್ಟ್‌ನಲ್ಲಿ ಒದಗಿಸಲಾದ ಮಾಹಿತಿಯೊಂದಿಗೆ ಹೊಂದಿಕೆಯಾಗುತ್ತದೆ. ಇದರೊಂದಿಗೆ, ತನ್ನ ಇತರ ಅಂಗಸಂಸ್ಥೆ ಕಂಪನಿಗಳ ಜೊತೆ ನಡೆದ ಅದಾನಿ ಗ್ರೂಪ್‌ನ ನಿರ್ದಿಷ್ಟ ನಿರ್ದೇಶಕರ ಅಸೋಸಿಯೇಷನ್ ಮತ್ತು ನೇಮಕಾತಿ ದಿನಾಂಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ’2019 ರಲ್ಲಿ ಅದಾನಿ ಗ್ರೂಪ್ ಅನೇಕ ಕೃಷಿ ಆಧಾರಿತ ಕಂಪನಿಗಳ ಸಂಯೋಜನೆ’ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಾವು ಕಂಡುಕೊಳ್ಳಬಹುದು.

ಗುತ್ತಿಗೆ ಆಧಾರಿತ ಕೃಷಿಗೆ ಅವಕಾಶ ನೀಡುವ ಹೊಸ ಕೃಷಿ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಈ ರೀತಿಯ ಪೋಸ್ಟ್‌ಗಳು ದಿಕ್ಕು ತಪ್ಪಿಸುವ ಪ್ರತಿಪಾದನೆಯೊಂದಿಗೆ ಹರಿದಾಡುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅದಾನಿ ಗ್ರೂಪಿನ ಇತರ ಅಂಗಸಂಸ್ಥೆ ಕಂಪನಿಗಳಲ್ಲಿ ಅದಾನಿ ಗ್ರೂಪ್‌ನ ನಿರ್ದಿಷ್ಟ ನಿರ್ದೇಶಕರ ಅಸೋಸಿಯೇಷನ್ ಮತ್ತು ನೇಮಕಾತಿ ದಿನಾಂಕಕ್ಕೆ ಸಂಬಂಧಿಸಿದ ಮಾಹಿತಿಯನ್ನು 2019 ರಲ್ಲಿ ಅನೇಕ ಅದಾನಿ ಸಮೂಹದ ಕೃಷಿ ಆಧಾರಿತ ಕಂಪನಿಗಳ ಸಂಯೋಜನೆ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ.