ಪೂರ್ವ ಟಿಮೋರ್‌ನಲ್ಲಿ ಚಿತ್ರೀಕರಿಸಲಾದ ವೀಡಿಯೊವನ್ನು ಮಹಾರಾಷ್ಟ್ರದಲ್ಲಿ AIMIM ರಾಲಿಯ ಕ್ಲಿಪ್ಪಿಂಗ್ಸ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಇದು ಮಹಾರಾಷ್ಟ್ರದಲ್ಲಿ ಅಸಾದುದ್ದೀನ್ ಓವೈಸಿ ಕರೆದ ಮುಸ್ಲಿಂ ರ ರಾಲಿಯಾಗಿದೆ. ಭಾರತದ ಭವಿಷ್ಯವನ್ನು ಕಲ್ಪಿಸಿಕೊಳ್ಳಿ” ಎಂದು ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ನಾವು ರಸ್ತೆಯೊಂದರಲ್ಲಿ ನಡೆದಾಡುತ್ತಿರುವ ಜನಸಮೂಹವನ್ನು ನೋಡಬಹುದು. ಇತ್ತೀಚೆಗೆ ಮುಂಬೈನಲ್ಲಿ AIMIM ನಡೆಸಿದ ‘ತಿರಂಗ ಸಂವಿಧಾನ್ ರಾಲಿ‘ ಹಿನ್ನೆಲೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಹೇಳಿಕೆಯ ಹಿಂದಿನ ಸತ್ಯವನ್ನು ಈ ಲೇಖನದ ಮೂಲಕ ನೋಡೋಣ.

ಕ್ಲೇಮ್: ಮಹಾರಾಷ್ಟ್ರದಲ್ಲಿ AIMIM ಆಯೋಜಿಸಿದ್ದ ಮುಸ್ಲಿಂ ರಾಲಿಯ ವಿಡಿಯೋ.

ಫ್ಯಾಕ್ಟ್: ಈ ವೀಡಿಯೊವನ್ನು 10 ಸೆಪ್ಟೆಂಬರ್ 2024 ರಂದು ಪೋಪ್ ಫ್ರಾನ್ಸಿಸ್ ಅವರ ಈಸ್ಟ್ ಟಿಮೋರ್ ದೇಶಕ್ಕೆ ಮೂರು ದಿನಗಳ ಭೇಟಿಯ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ. ಇದು ಪೂರ್ವ ಟಿಮೋರ್‌ನಲ್ಲಿ ಸಾವಿರಾರು ಕ್ಯಾಥೋಲಿಕರು ಪೋಪ್ ಫ್ರಾನ್ಸಿಸ್ ಅವರೊಂದಿಗೆ ‘ಹೋಲಿ ಮಾಸ್’ ನಲ್ಲಿ ಭಾಗವಹಿಸುತ್ತಿರುವ ವೀಡಿಯೊವಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ರಿವರ್ಸ್ ಇಮೇಜ್ ಸರ್ಚ್ ಮಾಡುವ ಮೂಲಕ ವೈರಲ್ ವೀಡಿಯೊದ ಕೆಲವು ಕೀಫ್ರೇಮ್‌ಗಳನ್ನು ಪರಿಶೀಲಿಸಿದ ನಂತರ, ವೈರಲ್ ವೀಡಿಯೊವನ್ನು ಒಳಗೊಂಡಿರುವ 12 ಸೆಪ್ಟೆಂಬರ್ 2024 ದಿನಾಂಕದ ಸೋಶಿಯಲ್ ಮೀಡಿಯಾ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಪೋಸ್ಟ್‌ನ ವಿವರಣೆಯಲ್ಲಿ, ಟಿಮೋರ್-ಲೆಸ್ಟೆ/ಈಸ್ಟ್ ಟಿಮೋರ್ ದೇಶದಲ್ಲಿ ಸುಮಾರು 6,00,000 ಜನರು ‘ಹೋಲಿ ಮಾಸ್’/ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು ಎಂದು ಬರೆದಿದೆ. 

ಈ ವೀಡಿಯೊದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಸೂಕ್ತವಾದ ಕೀ ವರ್ಡ್ಸ್ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಹುಡುಕಿದಾಗ, ಈ ಘಟನೆಯ ಕುರಿತು ರಾಯಿಟರ್ಸ್ನ ಆರ್ಟಿಕಲ್ ಅನ್ನು ನಾವು ಕಂಡುಕೊಂಡಿದ್ದೇವೆ. 10 ಸೆಪ್ಟೆಂಬರ್ 2024 ರಂದು ಪೂರ್ವ ಟಿಮೋರ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರ ಮೂರು ದಿನಗಳ ಭೇಟಿಯ ಸಮಯದಲ್ಲಿ ಪೂರ್ವ ಟಿಮೋರ್‌ನಲ್ಲಿ ನೂರಾರು ಸಾವಿರ ಕ್ಯಾಥೊಲಿಕ್‌ಗಳು ಗುಂಪಾಗಿ ಹಾಜರಾಗೀರುವುದನ್ನು ವೀಡಿಯೊ ತೋರಿಸುತ್ತದೆ ಎಂದು ರೆಪೋರ್ಟ್ನಲ್ಲಿ ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ನ್ಯೂಸ್ ಆರ್ಟಿಸಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಇದಲ್ಲದೆ, ನಾವು ವೈರಲ್ ವೀಡಿಯೊದಲ್ಲಿನ ಕೆಲವು ಪೋಸ್ಟರ್‌ಗಳನ್ನು ರಾಯಿಟರ್ಸ್ ಆರ್ಟಿಕಲ್ ಪೋಸ್ಟರ್‌ಗಳೊಂದಿಗೆ ಹೋಲಿಸಿದಾಗ, ಎರಡೂ ದೃಶ್ಯಗಳು ಒಂದೇ ಪೋಸ್ಟರ್‌ಗಳನ್ನು ಒಳಗೊಂಡಿವೆ ಎಂದು ನಾವು ಕಂಡುಕೊಂಡಿದ್ದೇವೆ. 

ಇದಲ್ಲದೆ, ವೈರಲ್ ವೀಡಿಯೊವನ್ನು ತೆಗೆದ ಸ್ಥಳವನ್ನು ಪತ್ತೆಹಚ್ಚಲು ನಾವು Google ಮ್ಯಾಪ್ ನಲ್ಲಿನ ‘ಸ್ಟ್ರೀಟ್ ವ್ಯೂ’ ಅನ್ನು ಬಳಸಿ ಆ ಸ್ಥಳವನ್ನು ಗುರುತಿಸಿದ್ದೇವೆ. ಈ ಸ್ಥಳವು ಪೂರ್ವ ಟಿಮೋರ್‌ನ ರಾಜಧಾನಿಯಾದ ದಿಲಿ ಪ್ರದೇಶದ ಪಕ್ಕದಲ್ಲಿದೆ ಎಂದು ತಿಳಿದುಬಂದಿದೆ.

ಕೊನೆಯದಾಗಿ ಹೇಳುವುದಾದರೆ, ಪೂರ್ವ ಟಿಮೋರ್‌ನಲ್ಲಿ ತೆಗೆದ ವೀಡಿಯೊವನ್ನು ಮಹಾರಾಷ್ಟ್ರದಲ್ಲಿ AIMIM ರಾಲಿಯ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.