ಪಾಕಿಸ್ತಾನದ ರೈಲ್ವೆ ಹಳಿ ಸಲಕರಣೆಗಳ ಕಳ್ಳತನ ಮಾಡುತ್ತಿರುವ ವೀಡಿಯೊವನ್ನು ಭಾರತಕ್ಕೆ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ

ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ), ಆಗಸ್ಟ್ 17, 2024 ರಂದು, ಅಹಮದಾಬಾದ್ ಗೆ  ಹೋಗುವ ಸಬರಮತಿ ಎಕ್ಸ್ ಪ್ರೆಸ್ ಪ್ಯಾಸೆಂಜರ್ ರೈಲಿನ ಇಪ್ಪತ್ತು ಬೋಗಿಗಳು ಕಾನ್ಪುರದ ಗೋವಿಂದಪುರಿ ನಿಲ್ದಾಣದ ಬಳಿ ಹಳಿ ತಪ್ಪಿವೆ (ಇಲ್ಲಿ). ಆಗಸ್ಟ್ 23, 2024 ರಂದು ಜೋಧಪುರಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಹಳಿಯ ಮೇಲೆ ಇರಿಸಲಾಗಿದ್ದ ಸಿಮೆಂಟ್ ಬ್ಲಾಕ್ಗೆ ಡಿಕ್ಕಿ ಹೊಡೆದ ನಂತರ ಹಳಿ ತಪ್ಪಿತು. ಈ ಘಟನೆಗಳ ನಡುವೆ, ಯುವಕರು ರೈಲ್ವೆ ಹಳಿಯನ್ನು ನಾಶಗೊಳಿಸುತ್ತಿರುವ ಇಲ್ಲವೇ ರೈಲ್ವೆ ಹಳಿ ಉಪಕರಣಗಳ ಕಳ್ಳತನ ಮಾಡುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ರೈಲ್ವೆ ಹಳಿ ಉಪಕರಣಗಳನ್ನು ತೆಗೆದುಹಾಕಲು ಹುಡುಗರು ದೊಡ್ಡ ಸ್ಪ್ಯಾನರ್ ಅನ್ನು ಬಳಸಿರುವುದನ್ನು ಈ ವೀಡಿಯೊ ತೋರಿಸುತ್ತದೆ.  ಭಾರತದಲ್ಲಿ ರೈಲ್ವೆ ಹಳಿಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸುವುದನ್ನು ಚಿತ್ರಿಸುತ್ತದೆ ಎಂದು ವಿಡಿಯೋದ ಕ್ಯಾಪ್ಶನ್ ನಲ್ಲಿ ಹೇಳಲಾಗಿದೆ. ಕೆಲವು ಪೋಸ್ಟ್ಗಳು ಭಾರತದ ಮುಸ್ಲಿಮರು ಭಾರತ ಸರ್ಕಾರವನ್ನು ದೂಷಿಸಲು ಉದ್ದೇಶಪೂರ್ವಕವಾಗಿ ರೈಲ್ವೆ ಹಳಿಗಳನ್ನು ನಾಶಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಭಾರತದಲ್ಲಿ ದುಷ್ಕರ್ಮಿಗಳು ರೈಲ್ವೆ ಹಳಿಯನ್ನು ನಾಶಮಾಡುತ್ತಿರುವ ವೀಡಿಯೊ.

ಫ್ಯಾಕ್ಟ್: ಈ ವೈರಲ್ ವೀಡಿಯೊ ಪಾಕಿಸ್ತಾನದ ಕರಾಚಿಯದಾಗಿದ್ದು, ಕರಾಚಿಯ ಬೋಟ್ ಬೇಸಿನ್ ಪ್ರದೇಶದಲ್ಲಿ ರೈಲ್ವೆ ಹಳಿಯ ಬಳಿ ವಾಸಿಸುವ ಲೋಕಲ್  ಮಕ್ಕಳು ರೈಲ್ವೆ ಉಪಕರಣಗಳನ್ನು ಕದಿಯುತ್ತಿರುವುದನ್ನು ತೋರಿಸುತ್ತದೆ. ಆದ್ದರಿಂದ, ಪೋಸ್ಟ್ನಲ್ಲಿ ಹೇಳಿರುವುದು ಸುಳ್ಳಾಗಿದೆ.

ವೈರಲ್ ವೀಡಿಯೊದ ಬಗ್ಗೆ ವಿವರಗಳನ್ನು ಸಂಗ್ರಹಿಸಲು, ನಾವು ವೀಡಿಯೊದಿಂದ ಕೀಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಹುಡುಕಾಟವು 06 ಡಿಸೆಂಬರ್ 2023 ರಂದು ‘ಮೊಮೆಂಟಿಕ್ ನ್ಯೂಸ್‘ ಎಂಬ ಪೇಜ್ ಫೇಸ್ಬುಕ್ನಲ್ಲಿ ಹಂಚಿಕೊಂಡ ಅದೇ ವೀಡಿಯೊವನ್ನು ನಮಗೆ ತೋರಿಸಿದೆ. ವೀಡಿಯೊ ವಿವರಣೆಯ ಪ್ರಕಾರ, ಕರಾಚಿಯ ಬೋಟ್ ಬೇಸಿನ್ ಬಳಿ ರೈಲ್ವೆ ಉಪಕರಣಗಳನ್ನು ಕಡಿಯುತ್ತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ. “Near Sir Taj Khan Pahatk Boat Basin Chowki, the valuable goods of railway line are being stolen a lot. P.S. Boat Basin is requested to take this action”. (ಉರ್ದುವಿನಿಂದ ಇಂಗ್ಲಿಷ್ ಗೆ ಅನುವಾದ).

ಪಾಕಿಸ್ತಾನದ ಕರಾಚಿಯ ಸುದ್ದಿಮಾಧ್ಯಮಗಳು ಮತ್ತು ವೆಬ್ಸೈಟ್ಗಳಲ್ಲಿ ಈ ನ್ಯೂಸ್ ಅನ್ನು ನಾವು ಕಂಡುಕೊಂಡಿದ್ದೇವೆ. ತದನಂತರ ನಾವು  ಈ ವೀಡಿಯೊದ ಬಗ್ಗೆ ಪೇಜ್ ಅಡ್ಮಿನ್ ಅನ್ನು ಸಂಪರ್ಕಿಸಿದ್ದೇವೆ. ಈ ಪೇಜ್ ನ ಅಡ್ಮಿನ್ ಹೆಸರು ಅಡ್ಮಿನ್ ಎಡ್ವಿನ್ ಮಹೆರ್, ಈತ  ಪತ್ರಕರ್ತನಾಗಿದ್ದು, ಈ ವಿಡಿಯೋ ಪಾಕಿಸ್ತಾನದ ಕರಾಚಿಯ ಬೋಟ್ ಬೇಸಿನ್ ಪ್ರದೇಶದ್ದು ಎಂದು ಖಚಿತಪಡಿಸಿದ್ದಾರೆ. ಜೊತೆಗೆ ಈ ಘಟನೆಗೆ ಸಂಬಂಧಿಸಿದಂತೆ,  ರೈಲ್ವೆ ಹಳಿಯ ಬಳಿ ವಾಸಿಸುವ ಸ್ಥಳೀಯ ಮಕ್ಕಳು ರೈಲ್ವೆ ಸಲಕರಣೆಗಳನ್ನು ಕದ್ದು, ಗುಜುರಿ ಮಾಡಿ  ಮಾರಾಟ ಮಾಡುತ್ತಿರುವ ವೀಡಿಯೊ ಇದಾಗಿದೆ ಎಂದು ತಿಳಿಸಿದ್ದಾರೆ. 

ಈ  ಕುರಿತು ಹೆಚ್ಚಿನ ತನಿಖೆ ನಡೆಸಿದಾಗ, ಡಿಸೆಂಬರ್ 2023 ರಲ್ಲಿ ಪಾಕಿಸ್ತಾನಿ ಹಲವಾರು ಬಳಕೆದಾರರು ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ಅಪ್‌ಲೋಡ್ ಮಾಡಿದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊಗಳಲ್ಲಿನೀಡಿದ ಕ್ಯಾಪ್ಶನ್ ಗಳ ಪ್ರಕಾರ ಕರಾಚಿಯ ಬೋಟ್ ಬೇಸಿನ್‌ನಲ್ಲಿ ರೈಲ್ವೆ ಉಪಕರಣಗಳ ಕಳ್ಳತನ ಮಾಡುತ್ತಿರುವುದನ್ನು ದೃಶ್ಯದಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ, ಕರಾಚಿ ದಕ್ಷಿಣ ವಲಯ ಪೊಲೀಸರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ (ಮಾಧ್ಯಮ ಸೆಲ್ ಡಿಐಜಿ ದಕ್ಷಿಣ ಕರಾಚಿ ಪೊಲೀಸ್) ಅಪ್‌ಲೋಡ್ ಮಾಡಿದ ವೈರಲ್ ವೀಡಿಯೊದ ದೃಶ್ಯಗಳನ್ನು ಒಳಗೊಂಡಿರುವ ವೀಡಿಯೊವನ್ನು (ಆರ್ಕೈವ್ ಮಾಡಿದ ಲಿಂಕ್) ನಾವು ಕಂಡುಕೊಂಡಿದ್ದೇವೆ. ಇಲ್ಲಿ ಹೇಳಿರುವ ಪ್ರಕಾರ  “ ರೈಲ್ವೇ ಲೈನ್ ಬೋಟ್ ಬೇಸಿನ್‌ನಿಂದ ಟ್ರ್ಯಾಕ್ ನಟ್‌ಬೋಲ್ಟ್‌ಗಳ ಕಳ್ಳತನದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ಪೊಲೀಸ್ ಕ್ರಮ ಕೈಕೊಂಡಿದ್ದಾರೆ.” ಈ ವೀಡಿಯೊದ ಪ್ರಕಾರ, ವೈರಲ್ ದೃಶ್ಯಗಳು ಕರಾಚಿಯ ಸರ್ತಾಜ್ ಖಾನ್ ಫಾಟಕ್ ರೈಲ್ವೆ ಮಾರ್ಗದ ಬಳಿ ರೈಲ್ವೆ ಟ್ರ್ಯಾಕ್ ಬೋಲ್ಟ್‌ಗಳು ಮತ್ತು ನಟ್‌ಗಳ ಕಳ್ಳತನದ ಘಟನೆಯನ್ನು ತೋರಿಸುತ್ತದೆ. ಬೋಟ್ ಬೇಸಿನ್ ಪೊಲೀಸ್ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ಬಾಲಾಪರಾಧಿಗಳನ್ನು ಬಂಧಿಸಿದ್ದು, ನಂತರ ಅವರ ಚಟುವಟಿಕೆಗಳನ್ನು ಹೆಚ್ಚು ನಿಕರವಾಗಿ ಮೇಲ್ವಿಚಾರಣೆ ಮಾಡಿ ಎಚ್ಚರಿಕೆ ನೀಡಿದ ನಂತರ ಅವರ ಪೋಷಕರಿಗೆ ಮಕ್ಕಳನ್ನು ಹಿಂದಿರುಗಿಸಿದ್ದಾರೆ. ಯೂಟ್ಯೂಬ್ ವೀಡಿಯೋದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಮೂವರು ಹುಡುಗರನ್ನು ಪ್ರಶ್ನಿಸಿದ್ದು, ಅವರಲ್ಲಿ ಒಬ್ಬರು ಕರಾಚಿಯ ಬೋಟ್ ಬೇಸಿನ್‌ನಲ್ಲಿರುವ ಶೆರೀನ್ ಜಿನ್ನಾ ಕಾಲೋನಿಯಲ್ಲಿ ರೈಲ್ವೇ ಟ್ರ್ಯಾಕ್‌ನಿಂದ ನಟ್ಸ್ ಮತ್ತು ಬೋಲ್ಟ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ  ರೀತಿಯ ಘಟನೆಗಳನ್ನು ತಡೆಯಲು ಅಧಿಕಾರಿಗಳು  ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ವಿಡಿಯೋವನ್ನು ಕರಾಚಿ ಪೊಲೀಸ್‌ರ ಅಧಿಕೃತ ಫೇಸ್‌ಬುಕ್ ಪೇಜ್ನಲ್ಲಿ (ಮಾಧ್ಯಮ ಕೋಶ – ಡಿಐಜಿ ದಕ್ಷಿಣ ವಲಯ) ಹಂಚಿಕೊಳ್ಳಲಾಗಿದೆ. ಈ ಮಾಹಿತಿಯ ಆಧಾರದ ಮೇಲೆ, ಪಾಕಿಸ್ತಾನದ ಕರಾಚಿಯಲ್ಲಿ ಸ್ಥಳೀಯ ಮಕ್ಕಳು ರೈಲ್ವೆ ಉಪಕರಣಗಳನ್ನು ಕದಿಯುತ್ತಿರುವುದನ್ನು ವೀಡಿಯೊದಲ್ಲಿ ಚಿತ್ರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಸೆಪ್ಟೆಂಬರ್ 2022 ರಲ್ಲಿ ಪಾಕಿಸ್ತಾನದ ಮಾಧ್ಯಮ ಸಂಸ್ಥೆ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪ್ರಕಟಿಸಿದ ವರದಿಯ ಪ್ರಕಾರ, ಪಾಕಿಸ್ತಾನದ ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ರೈಲ್ವೆ ಸಲಕರಣೆಗಳನ್ನು ಕಳ್ಳತನ ಮಾಡಿರುವ ಹಲವಾರು ಘಟನೆಗಳು ನಡೆದಿವೆ.  2018 ರಿಂದ ರೈಲ್ವೆ ಹಳಿಗಳು, ಮೀನು ಫಲಕಗಳು, ರಾಡ್ ಮತ್ತು ಹೀಟಿಂಗ್ ಬೋಲ್ಟ್ಗಳು ಸೇರಿದಂತೆ ಪಾಕಿಸ್ತಾನದ 88.581 ಮಿಲಿಯನ್ ರೂ.ಗಳ ಆಸ್ತಿಯನ್ನು ಕಳವು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನದಲ್ಲಿ ರೈಲ್ವೆ ಹಳಿ ಸಲಕರಣೆ ಕಡಿಯುತ್ತಿರುವ ವೀಡಿಯೊವನ್ನು ಭಾರತಕ್ಕೆ ತಪ್ಪಾಗಿ ಲಿಂಕ್ ಮಾಡಿ ಶೇರ್ ಮಾಡಲಾಗಿದೆ.