Fake News - Kannada
 

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಘರ್ಷಣೆಯಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಿದ ವೀಡಿಯೊವನ್ನು ಕುಂಭಮೇಳದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಪೊಲೀಸರು ಒಬ್ಬ ವ್ಯಕ್ತಿಯನ್ನು ಬೆನ್ನಟ್ಟಿ, ಬಲವಂತವಾಗಿ ಹಿಡಿದು, ಥಳಿಸಿ, ಪೊಲೀಸ್ ವಾಹನಕ್ಕೆ ಹಾಕುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ  (ಇಲ್ಲಿ) ವೈರಲ್ ಆಗುತ್ತಿದೆ. ಇದು ಕುಂಭಮೇಳಕ್ಕೆ ಹೋಗುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾಗ ಆತನನ್ನು ಹಿಡಿಯಲಾಗಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಕುಂಭಮೇಳಕ್ಕೆ ಹೋಗುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ನಿಜವಾಗಿಯೂ ಈ ವೀಡಿಯೊ ಜನವರಿ 28, 2025 ರಂದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಸೂರಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸದಾಗಿದೆ. ಈ ಘಟನೆಯ ಸಮಯದಲ್ಲಿ, ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ಎರಡು ಟಿಎಂಸಿ ತಂಡಗಳ ನಡುವಿನ ವಿವಾದದಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿದಾಗ, ತೃಣಮೂಲ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಪೊಲೀಸ್ ಅಧಿಕಾರಿಯ ಕಾಲರ್ ಹಿಡಿದುಕೊಂಡ, ಈ ಸಂದರ್ಭದಲ್ಲಿ ಪೊಲೀಸರು 20 ಜನರನ್ನು ಬಂಧಿಸಿ ಬಂದೂಕುಗಳನ್ನು ವಶಪಡಿಸಿಕೊಂಡರು. ಕುಂಭಮೇಳದಲ್ಲಿ ನಡೆದ ಕಲ್ಲು ತೂರಾಟ ಘಟನೆಗೂ ಈ ವೀಡಿಯೊಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ. 

ಈ ಹೇಳಿಕೆಯನ್ನು ಪರಿಶೀಲಿಸಲು, ನಾವು Google ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಅದು ನಮಗೆ ಒಂದೇ ವೀಡಿಯೊದ ಹಲವಾರು ವರ್ಷನ್ ಗಳನ್ನು (ಇಲ್ಲಿ ಮತ್ತು ಇಲ್ಲಿ) ಒದಗಿಸಿದೆ. ಎಕ್ಸ್ಟೆಂಡೆಡ್ ಫೂಟೇಜ್ನಲ್ಲಿ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ಪಡೆದ ನಂತರ ಸ್ಥಳದಲ್ಲಿ ನೆರೆದಿದ್ದ ಜನರನ್ನು ಥಳಿಸುತ್ತಿರುವುದನ್ನು ಕಾಣಬಹುದು. ಬಂಗಾಳಿ ಭಾಷೆಯಲ್ಲಿ ಬರೆಯಲಾದ ವೀಡಿಯೊದ ಶೀರ್ಷಿಕೆಯು /ಕ್ಯಾಪ್ಶನ್ ನಲ್ಲಿ ಈ ರೀತಿ ಹೇಳಲಾಗಿದೆ: “ಬಂಗಾಳ ಪೊಲೀಸರು ಇದೇ ರೀತಿಯ ಪರಿಸ್ಥಿತಿಯಲ್ಲಿದ್ದಾರೆ. ತೃಣಮೂಲ ಮರಳು ಮಾಫಿಯಾ ಪೊಲೀಸ್ ಠಾಣೆಯ ICಯ ಸಮವಸ್ತ್ರದ ಕಾಲರ್ ಅನ್ನು ಎಳೆದಿದೆ. ಈ ಘಟನೆ ಬಿರ್ಭುಮ್‌ನ ಸಿಯುರಿಯ ಮಲ್ಲಿಕ್‌ಪುರದ ಮಿನಿಸ್ಟಿಲ್ ಪ್ರದೇಶದಲ್ಲಿ ನಡೆದಿದೆ.”

ಹೆಚ್ಚಿನ ಸಂಶೋಧನೆಯು ವೈರಲ್ ವೀಡಿಯೊವನ್ನು ಒಳಗೊಂಡ ಹಲವಾರು ಯುಟ್ಯೂಬ್ ನ್ಯೂಸ್ ರಿಪೋರ್ಟ್ಸಗಳನ್ನು  (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮಗೆ ತೋರಿಸಿದೆ. ಈ ವರದಿಗಳ ಪ್ರಕಾರ, ಈ ಘಟನೆ ಜನವರಿ 28, 2025 ರಂದು ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಸೂರಿಯ ಮಿನಿಸ್ಟಿಲ್ ಪ್ರದೇಶದಲ್ಲಿ ನಡೆದಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಎರಡು ತಂಡಗಳ ನಡುವೆ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದರು.

ಈ ವಿಷಯದ ಕುರಿತು ಮತ್ತಷ್ಟು ಹುಡುಕಾಡಿದಾಗ, ಬಿರ್ಭೂಮ್‌ನ ಸೂರಿಯಲ್ಲಿ ಸರ್ಕಾರಿ ಭೂಮಿಗಾಗಿ ತೃಣಮೂಲ ಕಾಂಗ್ರೆಸ್‌ನ ಎರಡು ತಂಡಗಳ ನಡುವೆ ನಡೆದ ಘರ್ಷಣೆಯ ಪರಿಣಾಮವಾಗಿ 2025 ರ ಜನವರಿ 28 ರಂದು ಸ್ಥಳೀಯ ಟಿಎಂಸಿ ಯುವ ನಾಯಕರು ಸೇರಿದಂತೆ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದೃಢಪಡಿಸುವ ಹಲವಾರು ಸುದ್ದಿ ವರದಿಗಳು (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಂಡುಬಂದವು. ಈ ಘಟನೆಯ ಸಮಯದಲ್ಲಿ, ವೈರಲ್ ವೀಡಿಯೊದಲ್ಲಿ ಕಂಡುಬರುವಂತೆ, ಟಿಎಂಸಿ ಕಾರ್ಯಕರ್ತ ಅಮೀರ್ ಅನ್ಸಾರಿ ಉಸ್ತುವಾರಿ ಇನ್ಸ್‌ಪೆಕ್ಟರ್‌ನ ಕಾಲರ್ ಅನ್ನು ಹಿಡಿದಿದ್ದು, ಇದು ಪೊಲೀಸರ ಪ್ರತೀಕಾರಕ್ಕೆ ಕಾರಣವಾಯಿತು. ಅಧಿಕಾರಿಗಳು ಮೂರು ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.  ಆದರೆ ವಿರೋಧ ಪಕ್ಷಗಳು ಮಮತಾ ಬ್ಯಾನರ್ಜಿ ಸರ್ಕಾರವನ್ನು ಟೀಕಿಸಿದವು. ಪೊಲೀಸರು ಈ ವಿಷಯವನ್ನು ನಿಭಾಯಿಸುತ್ತಾರೆ ಎಂದು ಟಿಎಂಸಿ ನಾಯಕರು ಸಮರ್ಥಿಸಿಕೊಂಡರು.

2025 ರ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಹೋಗುವ ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳು (ಇಲ್ಲಿ ಮತ್ತು ಇಲ್ಲಿ) ನಡೆದಿವೆ, ಆದರೆ ಪೊಲೀಸರು ಅಂತಹ ಜನರನ್ನು ಬಂಧಿಸಿದ ಬಗ್ಗೆ ಯಾವುದೇ ವರದಿಗಳಿಲ್ಲ. ಇದಲ್ಲದೆ, ಈ ನಿರ್ದಿಷ್ಟ ವೈರಲ್ ವೀಡಿಯೊಗೂ ಅಂತಹ ಘಟನೆಗಳಿಗೂ ಯಾವುದೇ ಸಂಬಂಧವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಬಿರ್ಭುಮ್‌ನ ಸೂರಿಯಲ್ಲಿ ನಡೆದ ಟಿಎಂಸಿ ಘರ್ಷಣೆಯಲ್ಲಿ ಪೊಲೀಸರ ಹಸ್ತಕ್ಷೇಪದ ವೀಡಿಯೊವನ್ನು ಕುಂಭಮೇಳದ ಕಲ್ಲು ತೂರಾಟದ ಘಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. 

Share.

Comments are closed.

scroll