1991ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ದೆಹಲಿ ಏರ್‌ಪೋರ್ಟ್‌ನಲ್ಲಿ ರಾಹುಲ್ ಗಾಂಧಿಯವರೊಂದಿಗೆ ಅಮಿತಾಭ್ ಬಚ್ಚನ್ ಇರುವ ವಿಡಿಯೋವನ್ನು ಸುಳ್ಳು ಕ್ಲೈಮ್‌ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಅಮಿತಾಭ್ ಬಚ್ಚನ್ ಅವರು ರಾಹುಲ್ ಗಾಂಧಿಯವರೊಂದಿಗೆ ಇರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ರಾಹುಲ್ ಗಾಂಧಿಯವರು ಅಮೇರಿಕಾದಲ್ಲಿ ಡ್ರಗ್ಸ್‌ನೊಂದಿಗೆ ಸಿಕ್ಕಿಬಿದ್ದಿದ್ದರು, ನಂತರ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಅವರನ್ನು ಬಿಡುಗಡೆ ಮಾಡಿಸಿದರು ಎಂಬ ಕ್ಲೈಮ್‌ನೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ.ಪೋಸ್ಟ್ ಮತ್ತಷ್ಟು ಕ್ಲೈಮ್ ಮಾಡುವುದೇನೆಂದರೆ, ಬಿಡುಗಡೆಯ ನಂತರ, ಅಮಿತಾಭ್ ಬಚ್ಚನ್ ಅವರು ರಾಹುಲ್ ಗಾಂಧಿಯವರನ್ನು ಅಮೇರಿಕಾದಿಂದ ಕರೆತಂದರು ಮತ್ತು ವೈರಲ್ ವಿಡಿಯೋವು ಅಮಿತಾಭ್ ಬಚ್ಚನ್ ಅವರನ್ನು ಭಾರತಕ್ಕೆ ಹಿಂದಿರುಗಿಸುತ್ತಿರುವ ದೃಶ್ಯಗಳನ್ನು ತೋರಿಸುತ್ತದೆ (ಇಲ್ಲಿ). ಈ ಲೇಖನದಲ್ಲಿ, ಪೋಸ್ಟ್‌ನಲ್ಲಿ ಮಾಡಲಾದ ಈ ಕ್ಲೇಮ್ ನ ಸತ್ಯಾಂಶವನ್ನು ನಾವು ಪರಿಶೀಲಿಸೋಣ.

ಕ್ಲೇಮ್: ರಾಹುಲ್ ಗಾಂಧಿಯವರು ಯುಎಸ್‌ನಲ್ಲಿ ಡ್ರಗ್ಸ್ ಕೇಸ್‌ನಲ್ಲಿ ಬಿಡುಗಡೆಯಾದ ನಂತರ, ಅಮಿತಾಭ್ ಬಚ್ಚನ್ ಅವರು ಅವರನ್ನು ಅಲ್ಲಿಂದ ಕರೆತರುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ.

ಫ್ಯಾಕ್ಟ್: ಈ ವೈರಲ್ ವಿಡಿಯೋ, ಮೇ 1991ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ, ದೆಹಲಿ ಏರ್‌ಪೋರ್ಟ್‌ನಲ್ಲಿ ಅಮಿತಾಭ್ ಬಚ್ಚನ್ ಅವರು ರಾಹುಲ್ ಗಾಂಧಿಯವರೊಂದಿಗೆ ಇರುವುದನ್ನು ತೋರಿಸುತ್ತದೆ. ಆದರೆ, ಶ್ರೀಪೆರಂಬದೂರಿನಲ್ಲಿ ಹತ್ಯೆ ನಡೆದ ಸಮಯದಲ್ಲಿ, ಅಮಿತಾಭ್ ಬಚ್ಚನ್ ಅವರು ಲಂಡನ್ಗೆ ಭೇಟಿ ನೀಡಿದ್ದರು, ಆದರೆ ರಾಹುಲ್ ಗಾಂಧಿ ಅವರು ಬೋಸ್ಟನ್, ಯುಎಸ್‌ಎಯಲ್ಲಿದ್ದರು. ಇಬ್ಬರೂ ಸುಮಾರು ಒಂದೇ ಟೈಮ್‌ಗೆ ಏರ್‌ಪೋರ್ಟ್‌ಗೆ ಬಂದಿದ್ದರು. ರಾಹುಲ್ ಗಾಂಧಿಯವರು ಯುಎಸ್‌ನಲ್ಲಿ ಅಥವಾ ಬೇರೆ ಯಾವುದೇ ದೇಶದಲ್ಲಿ ಡ್ರಗ್ಸ್ ಕೇಸ್‌ನಲ್ಲಿ ಎಂದಾದರೂ ಬಂಧಿಸಲ್ಪಟ್ಟಿದ್ದರು ಎಂಬುದಕ್ಕೆ ಯಾವುದೇ ಎವಿಡೆನ್ಸ್  ಇಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಈ ಕ್ಲೇಮ್ ಸುಳ್ಳು

ಕಾಂಗ್ರೆಸ್ ಲೀಡರ್ ರಾಹುಲ್ ಗಾಂಧಿಯವರು ಯುಎಸ್‌ನಲ್ಲಿ ಅಥವಾ ಯಾವುದೇ ಬೇರೆ ದೇಶದಲ್ಲಿ ಡ್ರಗ್ಸ್ ಕೇಸ್‌ನಲ್ಲಿ ಎಂದಾದರೂ ಬಂಧಿಸಲ್ಪಟ್ಟಿದ್ದಾರೆಯೇ ಎಂಬುದನ್ನು ನಿರ್ಧರಿಸಲು ನಾವು ಸಂಬಂಧಿತ ಕೀವರ್ಡ್ ಸರ್ಚ್ ಅನ್ನು ನಡೆಸಿದೆವು. ಆದರೆ, ಈ ಹುಡುಕಾಟವು ವೈರಲ್ ಕ್ಲೈಮ್ ಅನ್ನು ಬೆಂಬಲಿಸುವ ಯಾವುದೇ ಕ್ರೆಡಿಬಲ್ ರಿಪೋರ್ಟ್‌ಗಳನ್ನು ನೀಡಲಿಲ್ಲ. ಪೋಸ್ಟ್‌ನಲ್ಲಿ ಆರೋಪಿಸಿದಂತೆ ರಾಹುಲ್ ಗಾಂಧಿಯವರು ನಿಜವಾಗಿಯೂ ಅಂತಹ ಡ್ರಗ್ಸ್ ಕೇಸ್‌ನಲ್ಲಿ ಬಂಧಿಸಲ್ಪಟ್ಟಿದ್ದರೆ, ಅದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗುತ್ತಿತ್ತು.

ನಂತರ ನಾವು ವೈರಲ್ ವಿಡಿಯೋದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದೆವು. ಈ ಹುಡುಕಾಟವು ನಮ್ಮನ್ನು ‘Getty’ ಎಂಬ ಸ್ಟಾಕ್ ಇಮೇಜ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋಗೆ ಕರೆದೊಯ್ಯಿತು, ಅದು ವೈರಲ್ ವಿಡಿಯೋದ ಅದೇ ದೃಶ್ಯಗಳನ್ನು ಒಳಗೊಂಡಿತ್ತು. Getty ವಿಡಿಯೋದ ವಿವರಣೆಯ ಪ್ರಕಾರ, ಇದು ಮೇ 1991ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ದೆಹಲಿ ಏರ್‌ಪೋರ್ಟ್‌ನಲ್ಲಿ ಅಮಿತಾಭ್ ಬಚ್ಚನ್ ಅವರು ರಾಹುಲ್ ಗಾಂಧಿಯವರೊಂದಿಗೆ ಇರುವುದನ್ನು ತೋರಿಸುತ್ತದೆ.  

ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ), ಮೇ 1991ರಲ್ಲಿ ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ  ಸಮಯದಲ್ಲಿ, ಅಮಿತಾಭ್ ಬಚ್ಚನ್  ಲಂಡನ್ನಲ್ಲಿ, ಮತ್ತು ರಾಹುಲ್ ಗಾಂಧಿ  ಯುಎಸ್‌ಎಯ ಬೋಸ್ಟನ್ನಲ್ಲಿದ್ದರು. ಇಬ್ಬರೂ ಸುಮಾರು ಒಂದೇ ಟೈಮ್‌ಗೆ ದೆಹಲಿ ಏರ್‌ಪೋರ್ಟ್‌ಗೆ ಆಗಮಿಸಿದರು. ರಾಜೀವ್ ಗಾಂಧಿಯವರ ಹತ್ಯೆಯ  ಸಮಯದಲ್ಲಿ ಭಾರತದ ಪ್ರಧಾನಮಂತ್ರಿ ಚಂದ್ರಶೇಖರ್ ಆಗಿದ್ದರು ಎಂಬುದನ್ನು ಸಹ ಗಮನಿಸಬೇಕು. ಗಾಂಧಿ ಮತ್ತು ಬಚ್ಚನ್ ಕುಟುಂಬಗಳು ಅನೇಕ ವರ್ಷಗಳಿಂದ ಉತ್ತಮ ಸಂಬಂಧವನ್ನು ಕಾಯ್ದುಕೊಂಡಿವೆ ಎಂಬುದು  ಗಮನಿಸಬೇಕಾದ ಅಂಶ (ಇಲ್ಲಿ, ಇಲ್ಲಿ).

ಇದಕ್ಕೂ ಮೊದಲು, Factly ಒಂದು ವೈರಲ್ ಆಗಿದ್ದ ನಕಲಿ ನ್ಯೂಸ್‌ಪೇಪರ್ ಕ್ಲಿಪ್ಪಿಂಗ್‌ನ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸಿತ್ತು. ಆ ಕ್ಲಿಪ್ಪಿಂಗ್, ರಾಹುಲ್ ಗಾಂಧಿಯವರನ್ನು ನಿಷೇಧಿತ ಡ್ರಗ್ಸ್ ಮತ್ತು ಲೆಕ್ಕವಿಲ್ಲದ ಹಣವನ್ನು ಹೊಂದಿದ್ದಕ್ಕಾಗಿ ಬೋಸ್ಟನ್ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿತ್ತು ಎಂದು ಕ್ಲೈಮ್ ಮಾಡಿತ್ತು.

​ ಒಟ್ಟಾರೆಯಾಗಿ ಹೇಳುವುದಾದರೆ, ಈ ವೈರಲ್ ವಿಡಿಯೋವು  ಮೇ 1991ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ ದೆಹಲಿ ಏರ್‌ಪೋರ್ಟ್‌ನಲ್ಲಿ ಅಮಿತಾಭ್ ಬಚ್ಚನ್ ಅವರು ರಾಹುಲ್ ಗಾಂಧಿಯವರೊಂದಿಗೆ ಇರುವುದನ್ನು ತೋರಿಸುತ್ತದೆ.