ಶೇಖ್ ಹಸೀನಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಬಾಂಗ್ಲಾದೇಶದ ನಟಿಯೊಬ್ಬರು ಕಿರುಕುಳಕ್ಕೊಳಗಾದ ಕೋಮುವಾದಿ ಆರೋಪದ ವೈರಲ್ ವೀಡಿಯೊ ಸುಳ್ಳಾಗಿದೆ

ಅಮೆರಿಕದ ಮಹಿಳೆಯೊಬ್ಬರು ‘ಹಿಜಾಬ್ ಧರಿಸದಿದ್ದಕ್ಕಾಗಿ ಬಾಂಗ್ಲಾದೇಶಿಗಳಿಂದ ಕಿರುಕುಳ’ ಪಡೆಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೈರಲ್ ವೀಡಿಯೊದಲ್ಲಿ, ಮಹಿಳೆಯೊಬ್ಬರು ರಿಕ್ಷಾ ಸವಾರಿ ಮಾಡುವಾಗ ಕೆಲವು ವ್ಯಕ್ತಿಗಳಿಂದ ಕಿರುಕುಳ ನೀಡುವುದನ್ನು ನಾವಿಲ್ಲಿ ನೋಡಬಹುದು. ಹಾಗಾದರೆ ಈ ಲೇಖನದ ಮೂಲಕ ನಾವು ಈ ಕ್ಲೇಮ್ ಅನ್ನು ಸರಿಯಾಗಿ  ಪರಿಶೀಲಿಸೋಣ. 

ಕ್ಲೇಮ್: ಬಾಂಗ್ಲಾದೇಶದಲ್ಲಿ ಅಮೇರಿಕನ್ ಮಹಿಳೆ ಹಿಜಾಬ್ ಧರಿಸದಿದ್ದಕ್ಕಾಗಿ ಕಿರುಕುಳ ನೀಡುತ್ತಿರುವುದನ್ನು ತೋರಿಸುವ  ವೀಡಿಯೊ. 

ಫ್ಯಾಕ್ಟ್: ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಮಿಸ್ತಿ ಸುಬಾಸ್ ಎಂಬ ಬಾಂಗ್ಲಾದೇಶದ ನಟಿ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಜನ್ಮದಿನವನ್ನು ಆಚರಿಸಲು ಮಿಸ್ತಿ ಅವರು ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕೇಕ್ ಕತ್ತರಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪಾಗಿದೆ.

ವೈರಲ್ ಕ್ಲೈಮ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ವೈರಲ್ ವೀಡಿಯೊದಿಂದ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಅದೇ ಘಟನೆಯ ಒಂದೇ ರೀತಿಯ ದೃಶ್ಯಗಳನ್ನು ಒಳಗೊಂಡಿರುವ ಕೆಲವು ಸೋಶಿಯಲ್ ಮೀಡಿಯಾ ಪೋಸ್ಟ್‌ಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಇದು ನಮ್ಮನ್ನು ಕರೆದೊಯ್ಯಿತು. ಈ ಪೋಸ್ಟ್‌ಗಳ ಪ್ರಕಾರ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಜನ್ಮದಿನವನ್ನು ಮಹಿಳೆಯೊಬ್ಬರು ಆಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಇದನ್ನು ಕ್ಲೂ ಆಗಿ ತೆಗೆದುಕೊಂಡು, ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಈ ಘಟನೆಯ ಕುರಿತು ಹಲವಾರು ನ್ಯೂಸ್ ರಿಪೋರ್ಟ್ಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮ್ಮನ್ನು ಕರೆದೊಯ್ಯಿತು. ಈ ವರದಿಗಳ ಪ್ರಕಾರ, ವೈರಲ್ ವೀಡಿಯೊದಲ್ಲಿರುವ  ಮಹಿಳೆ ಅಮೇರಿಕನ್ ಅಲ್ಲ ಬದಲಾಗಿ ಬಾಂಗ್ಲಾದೇಶದ ನಟಿ ಮತ್ತು ಶೇಖ್ ಹಸೀನಾ ಅವರ ಬೆಂಬಲಿಗ ಮಿಸ್ತಿ ಸುಬಾಸ್.

ಸುದ್ದಿ ವರದಿಗಳ ಪ್ರಕಾರ, ಶೇಖ್ ಹಸೀನಾ ಅವರ 78 ನೇ ಹುಟ್ಟುಹಬ್ಬವನ್ನು ಆಚರಿಸಲು ಮಿಸ್ತಿ ಸುಬಾಸ್ ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಹೋದಾಗ ಈ ಘಟನೆ ಸಂಭವಿಸಿದ್ದು, ಅಲ್ಲಿದ್ದ ಕೆಲ ಜನರು ಕಿರುಕುಳ ನೀಡಿದ್ದಾರೆ. 

ಈ ಘಟನೆಯ ಕುರಿತಾದ ವೀಡಿಯೊ ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಮಿಸ್ತಿ ರಿಕ್ಷಾದಲ್ಲಿ ಹೋಗುತ್ತಿರುವಾಗ ಕೆಲವು ವ್ಯಕ್ತಿಗಳಿಂದ ಕಿರುಕುಳಕ್ಕೊಳಗಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಈ ಘಟನೆಯ ಕುರಿತಾದ ನ್ಯೂಸ್ ರಿಪೋರ್ಟ್ಗಳಲ್ಲಿ  ಸಾರ್ವಜನಿಕರು ಹಿಜಾಬ್ ಧರಿಸದಿದ್ದಕ್ಕಾಗಿ ಆಕೆಗೆ ಕಿರುಕುಳ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿಲ್ಲ, ಆದ್ದರಿಂದ ಈ ವೈರಲ್  ಕ್ಲೇಮ್ ಸುಳ್ಳಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶೇಖ್ ಹಸೀನಾ ಅವರ ಜನ್ಮದಿನವನ್ನು ಆಚರಿಸಲು ಬಂದ ಬಾಂಗ್ಲಾದೇಶದ ನಟಿ ಮಿಸ್ತಿ ಸುಬಾಸ್ ಕಿರುಕುಳಕ್ಕೊಳಗಾದ ವೀಡಿಯೊವನ್ನು ಅಮೆರಿಕದ ಮಹಿಳೆಯೊಬ್ಬರು ಹಿಜಾಬ್ ಧರಿಸದಿದ್ದಕ್ಕಾಗಿ ಬಾಂಗ್ಲಾದೇಶಿಯರು ಕಿರುಕುಳಕ್ಕೊಳಗಾದ ದೃಶ್ಯಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.