2022 ರಲ್ಲಿ ಬಿಜೆಪಿಯ ನವನೀತ್ ರಾಣಾ ಅಳುತ್ತಿರುವ ವಿಡಿಯೋವನ್ನು, 2024 ರ ಲೋಕಸಭಾ ಚುನಾವಣೆಯಲ್ಲಿ ಸೋತು ಅಳುತ್ತಿರುವ ವಿಡಿಯೋ ಎಂದು ವೈರಲ್ ಮಾಡಲಾಗಿದೆ

ಮಹಾರಾಷ್ಟ್ರದ ಅಮರಾವತಿಯ ಬಿಜೆಪಿ ಲೋಕಸಭಾ ಅಭ್ಯರ್ಥಿ ನವನೀತ್ ರಾಣಾ 2024ರ ಲೋಕಸಭಾ ಚುನಾವಣಾ ಫಲಿತಾಂಶ ಬಿಡುಗಡೆಯಾದ ನಂತರ, ಚುನಾವಣೆಯಲ್ಲಿ ಸೋತ  ಕಾರಣಕ್ಕಾಗಿ ಅಳುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಈ ಲೇಖನದ ಮೂಲಕ ನಿಜವಾದ ಅಂಶವನ್ನು ತಿಳಿಸುಕೊಳ್ಳೋಣ.

ಕ್ಲೇಮ್: ಮಹಾರಾಷ್ಟ್ರದ ಅಮರಾವತಿಯ ಬಿಜೆಪಿ ಲೋಕಸಭಾ ಅಭ್ಯರ್ಥಿ ನವನೀತ್ ರಾಣಾ 2024 ರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಅಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಇದು ಮೇ 2022 ರ ಹಳೆಯ ವೀಡಿಯೊವಾಗಿದ್ದು, ನವನೀತ್ ರಾಣಾ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ತನ್ನ ಪತಿ ರವಿ ರಾಣಾ ಅವರನ್ನು ತಬ್ಬಿಕೊಂಡು ಅಳುತ್ತಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ಆಗುತ್ತಿರುವ ವಿಡಿಯೋದ  ಕ್ಲೈಮ್‌ನ ಕುರಿತು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಮೇ 2022ರಲ್ಲಿನ  ವೀಡಿಯೊ ಕ್ಲಿಪ್‌ಗೆ (ಇಲ್ಲಿ ಮತ್ತು ಇಲ್ಲಿ) ಎಂಬುವುದು ನಮಗೆ ತಿಳಿದು ಬಂದಿದೆ.

‘ಪೂರ್ವ ಬಾಂದ್ರಾ ಕಲಾನಗರದಲ್ಲಿದ್ದ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧಿಕೃತ ನಿವಾಸವಾದ ‘ಮಾತೋಶ್ರೀ’ಯ ಹೊರಗಡೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ’ ಏಪ್ರಿಲ್ 23, 2022 ರಂದು ಇವರನ್ನು ಬಂಧಿಸಲ್ಪಟ್ಟತ್ತು. ತದನಂತರ ನವನೀತ್ ಮತ್ತು ಅವರ ಪತಿಯನ್ನು ಜಾಮೀನಿನ ಮೂಲಕ  ಜೈಲಿನಿಂದ ಬಿಡುಗಡೆ ಮಾಡಲಾಯಿತು.  ಆ ಸಂದರ್ಭದಲ್ಲಿ ನವನೀತ್ ರಾಣಾ ಅವರನ್ನು ಲೀಲಾವತಿ ಆಸ್ಪತ್ರೆಯಲ್ಲಿ (ಅಲ್ಲಿ ಮತ್ತು ಇಲ್ಲಿ) ದಾಖಲಿಸಲಾಗಿದೆ.

ನವನೀತ್ ರಾಣಾ ಅವರ ಪತಿ ರವಿ ರಾಣಾ ಅವರನ್ನು ಭೇಟಿಯಾದಾಗ ವೈರಲ್ ವೀಡಿಯೊದಲ್ಲಿನ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಸಮಯದಲ್ಲಿ ಅವರು ಅಳುತ್ತಿದ್ದು, ನಡುವಿನ ಮಾತುಕತೆಯನ್ನ ದೃಶ್ಯಗಳನ್ನು ಈಗ ಅಂದರೆ 2024 ರ ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಲಿಂಕ್ ಮಾಡಿ ತಪ್ಪಾಗಿ ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2022 ರ ಹಳೆಯ ವೀಡಿಯೊವನ್ನು,  2024 ರ ಲೋಕಸಭಾ ಚುನಾವಣೆಯಲ್ಲಿ ನವನೀತ್ ರಾಣಾ ಮಹಾರಾಷ್ಟ್ರದ ಅಮರಾವತಿಯಿಂದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಸೋತ ನಂತರದ ಪ್ರತಿಕ್ರಿಯೆ ಎಂದು ಹಂಚಿಕೊಳ್ಳಲಾಗಿದೆ.