ಕಾಂಗ್ರೆಸ್‌ನ ‘ಮಹಾಲಕ್ಷ್ಮಿ ಸ್ಕೀಮ್’ ಯೋಜನೆಯ ಅಡಿಯಲ್ಲಿ 8500 ರೂಪಾಯಿಗಳನ್ನು ಪಡೆಯಲು ಮಹಿಳೆಯೊರ್ವೆ ಬುರ್ಕಾ ಧರಿಸಿ ಸಾಲಿನಲ್ಲಿ ಕಾಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಭರವಸೆಯಲ್ಲಿ ಒಂದಾದ ಯೋಜನೆಯಾಗಿದ್ದು, ಈ ಯೋಜನೆಯ ಬಗ್ಗೆ ತಿಳಿಯಲು ಮಹಿಳೆಯರು ಕಾಂಗ್ರೆಸ್ ಪಕ್ಷದ ಕಚೇರಿಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ ಎಂದು ವಿಡಿಯೋದಲ್ಲಿ ವರದಿ ಮಾಡಲಾಗಿದೆ. ಹಾಗಾದರೆ ಈ ಲೇಖನದ ಮೂಲಕ ನಾವು ಈ ಕ್ಲೇಮ್ ಅನ್ನು ವಾಸ್ತವವಾಗಿ ಪರಿಶೀಲಿಸುತ್ತೇವೆ.
ಕ್ಲೇಮ್ : 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ ಭರವಸೆಯಂತೆ ಮುಸ್ಲಿಂ ಮಹಿಳೆಯರು ‘ಮಹಾಲಕ್ಷ್ಮಿ ಯೋಜನೆ’ ಹಣಕ್ಕಾಗಿ ಸಾಲಿನಲ್ಲಿ ಕಾಯುತ್ತಿರುವುದನ್ನು ಈ ವೀಡಿಯೊ ತೋರಿಸುತ್ತಿದೆ.
ಫ್ಯಾಕ್ಟ್ : 2020 ರ ಯುಪಿಯ ಮುಜಾಫರ್‌ನಗರದ ಮಹಿಳೆಯರ ವಿಡಿಯೋ ಇದಾಗಿದ್ದು, ತಮ್ಮ ‘ಜನ್-ಧನ್’ ಖಾತೆಯಿಂದ ಹಣವನ್ನು ಪಡೆಯಲು ಬ್ಯಾಂಕ್ ಆಫ್ ಬರೋಡಾದ ಎದುರುಗಡೆ ಸಾಲಿನಲ್ಲಿ ಕಾಯುತ್ತಿರುವುದನ್ನು ತೋರಿಸುತ್ತದೆ ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ಕ್ಲೈಮ್‌ನ ಬಗ್ಗೆ ನಾವು ಪರಿಶೀಲಿಸಿದಾಗ, ವೀಡಿಯೊದ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದರ ಮೂಲಕ 2020 ರಲ್ಲಿ ‘ನ್ಯೂಸ್ 18 ಇಂಡಿಯಾ’ ಪ್ರಕಟಿಸಿದ ಸುದ್ದಿ ವರದಿಗಳು ನಮಗೆ ಕಂಡುಬಂದಿದ್ದು, ಇಲ್ಲಿ ಈ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ ಎಂಬುವುದು ತಿಳಿದು ಬಂದಿದೆ.
ಹೊಸ ವರದಿಗಳ ಪ್ರಕಾರ, ಮುಜಾಫರ್‌ನಗರದ ಗಾಂಧಿ ಕಾಲೋನಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮುಂದುಗಡೆ ಮಹಿಳೆಯರು ತಮ್ಮ ‘ಜನ್-ಧನ್’ ಖಾತೆಯಲ್ಲಿನ ಹಣವನ್ನು ಪಡೆಯಲು ಬ್ಯಾಂಕ್‌ಗೆ ಬಂದಾಗ ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ.
ಇದಕೆಲ್ಲ ಕಾರಣ, ಸರ್ಕಾರದಿಂದ ಜಮಾ ಆಗಿದ್ದ 500 ರೂ ವಾಪಸ್ ಆಗಲಿದೆ ಎಂಬ ವದಂತಿಯಿಂದಾಗಿ ಈ ರೀತಿ ನಡೆದಿದೆ ಎಂದು ವರದಿಯಾಗಿದೆ. ಇದು ಮಹಿಳೆಯರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಆ ಪಣವನ್ನು ಪಡೆಯಲು ಅವರು ಬ್ಯಾಂಕ್‌ಗಳಿಗೆ ಧಾವಿಸಿದ್ದರು.
ತದನಂತರ, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್(ಎಲ್‌ಡಿಎಂ) ಧಾವಿಸಿ ಖಾತೆದಾರರಲ್ಲಿನ ಗೊಂದಲವನ್ನು ನಿವಾರಿಸಿದ್ದಾರೆ.
‘ಮಹಾಲಕ್ಷ್ಮಿ ಸ್ಕೀಮ್’ ಹಣದ ಕುರಿತು ಮಹಿಳೆಯರು ಕಾಂಗ್ರೆಸ್ ಪಕ್ಷದ ಕಚೇರಿಗಳಲ್ಲಿ ಸಾಲುಗಟ್ಟಿ ನಿಂತಿರುವ ಬಗ್ಗೆ ಇತ್ತೀಚಿನ ಸುದ್ದಿ ವರದಿಗಳಿದ್ದರೂ, ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅದಕ್ಕಿಂತಲೂ ಮೇಲಾಗಿ , ಅಮೇಥಿಯ ಕಾಂಗ್ರೆಸ್ ಕಚೇರಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೊಬ್ಬರು ಬಿಸಿಲಿನ ಶಾಖದ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದ ವರದಿಯನ್ನು ನಾವು ಅಲ್ಲಗಳೆದಿದ್ದೇವೆ.
ಕೊನೆಯದಾಗಿ ಹೇಳುವುದಾದರೆ, ‘ಮಹಾಲಕ್ಷ್ಮಿ ಯೋಜನೆ’ ಹಣವನ್ನು ಪಡೆಯಲು ಮಹಿಳೆಯರು ಸಾಲಿನಲ್ಲಿ ಕಾಯುತ್ತಿರುವ ದೃಶ್ಯವನ್ನು ಹಳೆಯ, ಸಂಬಂಧವಿಲ್ಲದ ವೀಡಿಯೊಗೆ ತಪ್ಪಾಗಿ ಶೇರ್ ಮಾಡಲಾಗಿದೆ.