ಜಾರ್ಖಂಡ್‌ನಲ್ಲಿ ಒಬ್ಬ ಅಂಗವಿಕಲ ಮುಸ್ಲಿಂ ವ್ಯಕ್ತಿಗೆ ಬೈಕರ್ ಕಿರುಕುಳ ನೀಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಇದು ನಿಜವಾದ ಘಟನೆ ಎಂದು ಹೇಳಿಕೊಳ್ಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಜಾರ್ಖಂಡ್‌ನಲ್ಲಿ ಒಬ್ಬ ಅಂಗವಿಕಲ ಮುಸ್ಲಿಂ ವ್ಯಕ್ತಿಗೆ ಬೈಕ್ ಸವಾರ ಕಿರುಕುಳ ನೀಡುತ್ತಿರುವುದನ್ನು ಈ ವೀಡಿಯೊಗಳು ತೋರಿಸುತ್ತವೆ.
ಫ್ಯಾಕ್ಟ್: ವೈರಲ್ ವೀಡಿಯೊದಲ್ಲಿರುವ ಘಟನೆ ನಿಜವಲ್ಲ. ಇದು ರೈಡಿಂಗ್ ವ್ಲಾಗ್‌ಗಳು ಮತ್ತು ಸ್ಕ್ರಿಪ್ಟ್ ಮಾಡಿದ ವಿಷಯವನ್ನು ಅಪ್‌ಲೋಡ್ ಮಾಡುವ ಯೂಟ್ಯೂಬರ್ ಮುಕ್ಲೇಸುರ್ ಭೈಜಾನ್ ರಚಿಸಿದ ಸ್ಕ್ರಿಪ್ಟ್ಡ್ ವೀಡಿಯೊ. ಅದೇ ವೃದ್ಧ ವ್ಯಕ್ತಿ ಇದೇ ರೀತಿಯ ಇತರ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೀಡಿಯೊದಲ್ಲಿರುವ ಪಾತ್ರದಾರಿಗಳು ಬಂಗಾಳಿ ಮಾತಾಡುತ್ತಿದ್ದು ಅಲ್ಲಿ ಹಾದುಹೋಗುವ ವಾಹನಗಳು ಪಶ್ಚಿಮ ಬಂಗಾಳ (ಪಶ್ಚಿಮ ಬಂಗಾಳ) ನೋಂದಣಿ ಫಲಕಗಳನ್ನು ಹೊಂದಿವೆ. ಹೆಚ್ಚುವರಿಯಾಗಿ, ಮುಕ್ಲೇಸುರ್ ಭೈಜಾನ್ ಅವರ ಫೇಸ್‌ಬುಕ್ ಪೇಜ್ನಲ್ಲಿ ಅವರು ಪಶ್ಚಿಮ ಬಂಗಾಳದವರು ಎಂದು ತಿಳಿದಿದೆ. ಹಾಗಾಗಿ ಈ ಘಟನೆ ಜಾರ್ಖಂಡ್‌ನಲ್ಲಿ ನಡೆದಿರಲು ಸಾಧ್ಯವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.
ಅಕ್ಟೋಬರ್ 2024 ರಲ್ಲಿ ಅದೇ ವೃದ್ಧ ವ್ಯಕ್ತಿ ಬೈಕ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಸೈಕಲ್‌ನಲ್ಲಿ ಮೊಟ್ಟೆಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ವೃದ್ಧ ವ್ಯಕ್ತಿಗೆ ಕಿರುಕುಳ ನೀಡುತ್ತಿರುವ ವೀಡಿಯೊ ವೈರಲ್ ಆದಾಗ, ಆ ವೀಡಿಯೊವನ್ನು ನಾವು ಬಹಿರಂಗಪಡಿಸಿದ್ದೇವೆ.
ನಾವು ಮುಕ್ಲೇಸುರ್ ಭಾಯಿಜಾನ್ ಗಾಗಿ ಹುಡುಕಿಡಿದ್ದು, ಅವರ ಪ್ರೊಫೈಲ್ ಅನ್ನು ಪರಿಶೀಲಿಸಿದಾಗ 24 ಜನವರಿ 2025 ರಂದು ಅವರ ಯೂಟ್ಯೂಬ್ ಚಾನೆಲ್ ಮುಕ್ಲೇಸುರ್ ಭಾಯಿಜಾನ್‌ನಲ್ಲಿ “ರ್ಯಾಂಡಮ್ ರೈಡರ್ ಚಾಲೆಂಜ್ಡ್ ಮಿ & ಹಿ ಕ್ರಶ್ಡ್! || ಗರಿ ಕೋ ಮಾರಾ | ಬೈಕ್ ರೈಡರ್ ಹೆಲ್ಪ್ ಕಿಯಾ | ಹೆಲ್ಪಿಂಗ್ ಮೋಟೋವ್ಲಾಗ್” ಎಂಬ ಕ್ಯಾಪ್ಶನ್ ನೊಂದಿಗೆ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊದ (ಆರ್ಕೈವ್ಡ್ ) ವಿಸ್ತೃತ ವರ್ಷನ್ ಅನ್ನು ಕಂಡುಕೊಂಡಿದ್ದೇವೆ.
ಅದೇ ವೀಡಿಯೊವನ್ನು ಅವರ ಫೇಸ್‌ಬುಕ್ ಪೇಜ್ನಲ್ಲಿಯೂ ಅಪ್‌ಲೋಡ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ವೀಡಿಯೊದಲ್ಲಿ, ಪಾತ್ರಗಳು ಬಂಗಾಳಿ ಭಾಷೆಯಲ್ಲಿ ಮಾತನಾಡುವುದನ್ನು ಕೇಳಬಹುದು ಮತ್ತು ಅಲ್ಲಿನ ವಾಹನಗಳು WB (ಪಶ್ಚಿಮ ಬಂಗಾಳ) ನೋಂದಣಿ ಫಲಕಗಳನ್ನು ಹೊಂದಿವೆ. ಹೆಚ್ಚುವರಿಯಾಗಿ, ಅವರ ಫೇಸ್‌ಬುಕ್ ಪುಟದ ಇಂಟ್ರೋ ವಿಭಾಗವು ಅವರು ಪಶ್ಚಿಮ ಬಂಗಾಳದವರು ಎಂದು ಬಹಿರಂಗಪಡಿಸಿದೆ, ಇದರಿಂದಾಗಿ ಈ ಘಟನೆ ಜಾರ್ಖಂಡ್‌ನಲ್ಲಿ ನಡೆದಿರುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.
ಅವರ ಚಾನೆಲ್ ಅನ್ನು ಪರಿಶೀಲಿಸಿದಾಗ, ಅವರ “ಅಬೌಟ್” ವಿಭಾಗವು ಅವರು ರೈಡಿಂಗ್ ವ್ಲಾಗ್‌ಗಳು ಮತ್ತು ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ ಎಂದು ತಿಳಿದಿದೆ.
ಅದೇ ವೃದ್ಧ ವ್ಯಕ್ತಿ ಇತರ ವೀಡಿಯೊಗಳಲ್ಲಿಯೂ ಕಾಣಿಸಿಕೊಂಡಿರುವುದನ್ನು ನಾವು ಕಂಡುಕೊಂಡಿದ್ದೇವೆ, ಅದನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಆಗಿರುವ ವೀಡಿಯೊ ನಿಜವಾದ ಘಟನೆಯಲ್ಲ; ಇದು ಮುಕ್ಲೇಸೂರ್ ಭೈಜಾನ್ ಅವರು 24 ಜನವರಿ 2025 ರಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ಸ್ಕ್ರಿಪ್ಟ್ಡ್ ವೀಡಿಯೊ ಇದಾಗಿದೆ.