ಪಬ್ಲಿಕ್ ನಲ್ಲಿ ಶರ್ಟ್ ತೆಗೆದಿದ್ದಕ್ಕಾಗಿ ಮಹಿಳೆಯೊಬ್ಬರು ಪುರುಷನನ್ನು ಎದುರಿಸುತ್ತಿರುವ ಸ್ಕ್ರಿಪ್ಟ್ ವೀಡಿಯೊವನ್ನು ಸುಳ್ಳು ಕೋಮು ವಾದದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಪಬ್ಲಿಕ್ನಲ್ಲಿ ತನ್ನ ಅಂಗಿಯನ್ನು ತೆಗೆದ ಮುಸ್ಲಿಂ ವ್ಯಕ್ತಿಯನ್ನು ಹಿಂದೂ ಮಹಿಳೆ ಎದುರಿಸುತ್ತಿರುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ  ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಸಾರ್ವಜನಿಕವಾಗಿ ಶರ್ಟ್ ತೆಗೆದ ಮುಸ್ಲಿಂ ಯುವಕನನ್ನು ಹಿಂದೂ ಮಹಿಳೆಯೊಬ್ಬರು ಆತನನ್ನು ಎದುರಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ವೀಡಿಯೊವನ್ನು ತಮನ್ನಾ ಕೊಹ್ಲಿ ಸ್ಕ್ರಿಪ್ಟ್ ಮಾಡಿ ರಚಿಸಿದ್ದಾರೆ. ಅವರು ದೈನಂದಿನ ಜೀವನದ ವ್ಲಾಗ್‌ಗಳು, ತಮಾಷೆ ವೀಡಿಯೊಗಳು ಮತ್ತು ಮನರಂಜನೆಗಾಗಿ ವೀಡಿಯೊ ರಚನೆಕಾರರಾಗಿ ಗುರುತಿಸಿಕೊಂಡಿದ್ದಾರೆ. ಆಕೆಯ ಚಾನೆಲ್‌ನಲ್ಲಿ ವೈರಲ್ ವೀಡಿಯೊದಿಂದ ಅದೇ ವ್ಯಕ್ತಿಯನ್ನು ಒಳಗೊಂಡ ಹಲವಾರು ವೀಡಿಯೊಗಳನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೊ ನಿಜವಲ್ಲ, ಇದು ಸಸ್ಕ್ರಿಪ್ಟೆಡ್  ಎಂದು ಇದು ಖಚಿತಪಡಿಸುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪಾಗಿದೆ.

ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಇನ್‌ಸ್ಟಾಗ್ರಾಮ್‌ನಲ್ಲಿ ಇದೇ ರೀತಿಯ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು, ತಮನ್ನಾ ಕೊಹ್ಲಿ ಅವರು ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, “Whoever does, do the same. This is a message from ahead. 🙏” ಎಂದು ಕ್ಯಾಪ್ಶನ್  ನೀಡಿದ್ದಾರೆ. 

ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ, ತಮನ್ನಾ ಕೊಹ್ಲಿ ವೀಡಿಯೊ ಕ್ರಿಯೇಟರ್ ಎಂದು ಗುರುತಿಸಿಕೊಂಡಿದ್ದಾರೆ. ಆಕೆಯ ಯೂಟ್ಯೂಬ್ ಚಾನೆಲ್‌ಗೆ ಲಿಂಕ್ ಅನ್ನು ಒದಗಿಸಲಾಗಿದೆ, ಇದು ಅವರು ದೈನಂದಿನ ಜೀವನದ ವ್ಲಾಗ್‌ಗಳು, ತಮಾಷೆ ವೀಡಿಯೊಗಳು ಮತ್ತು ಮನರಂಜನೆಗಾಗಿ ಸಿಲ್ಲಿ ವಿಷಯಗಳನ್ನು ಒಳಗೊಂದು ವಿಡಿಯೋಗಳನ್ನು  ತೋರಿಸುತ್ತದೆ. 

ಹೆಚ್ಚುವರಿಯಾಗಿ, ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಯುವಕ ಆಕೆಯ ಅಕೌಂಟ್ ನಲ್ಲಿ ಹಂಚಿಕೊಂಡಿರುವ ಇತರ ವೀಡಿಯೊಗಳಲ್ಲಿ (ಇಲ್ಲಿ ಮತ್ತು ಇಲ್ಲಿ) ಕಾಣಿಸಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋ ಸ್ಕ್ರಿಪ್ಟ್ ವೀಡಿಯೊವಾಗಿದ್ದು ಸುಳ್ಳು ಕೋಮು ವಾದದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.